Hubli News: ರಾಜ್ಯದಲ್ಲಿ ಬಡ್ಡಿದಂಧೆಕೋರ ಹಾವಳಿಮತ್ತೆ ಮುಂದುವರೆದಿದ್ದು, ಅತೀ ಬಡ್ಡಿ ಕಿರುಕುಳಕ್ಕೆ ಬೇಸತ್ತು ಮತ್ತೋರ್ವ ವ್ಯಕ್ತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಶಿವಾನಂದ ಕಳ್ಳಿಮನಿ (36) ಆತ್ಮಹತ್ಯೆಗೆ ಶರಣಾದವರು.ಹುಬ್ಬಳ್ಳಿಯ ಉಣಕಲ್ ಕೆರೆಗೆ ಬಿದ್ದು ಶಿವಾನಂದ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾನೆ.
ಕಾರ್ತಿಕ್ ಬಳ್ಳಾರಿ ಎಂಬುವವರ ಬಳಿ 4 ಲಕ್ಷ ಸಾಲ ಪಡೆದಿದ್ದ ಶಿವಾನಂದ,4 ಲಕ್ಷಕ್ಕೆ ಈಗಾಗಲೇ ನಾಲ್ಕು ಲಕ್ಷ ಬಡ್ಡಿ ತುಂಬಿದ್ದಾನೆ. ಹೀಗಿದ್ದರೂ ಕಾರ್ತಿಕ್ ನಿಂದ ನಿರಂತರ ಬಡ್ಡಿ ಕಿರುಕುಳ ಹೆಚ್ಚಾದ ಹಿನ್ನೆಲೆ, ಶಿವಾನಂದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೂ ಕೆಎಂಸಿ ಆಸ್ಪತ್ರೆ ಶವಾಗಾರಕ್ಕೆ ಭೇಟಿ ನೀಡಿದ ಕಮಿಷನರ್ ಎನ್ ಶಶಿಕುಮಾರ್ ಶಿವನಾಂದ ಕುಟುಂಬಸ್ಥರಿಂದ ಮಾಹಿತಿ ಪಡೆದರು.
ಇದೆ ವೇಳೆ ಕಮಿಷನರ್ ಕಾಲಿಗೆ ಬಿದ್ದ ಮೃತ ಶಿವಾನಂದ ಚಿಕ್ಕಮ್ಮ ಸರಸ್ವತಿ ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಕಣ್ಣಿರು ಹಾಕಿದರು.ಕಿರುಕುಳ ನೀಡಿಷ ನನ್ನ ಮಗನ ಸಾವಿಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಬಳಿಕ ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮಗಳಿಗೆ ಮಾತನಾಡಿದ ಕಮಿಷನರ್, ಶಿವಾನಂದ ತನ್ನ ಪರಿಚಯಸ್ಥನ ಬಳಿ ನಾಲ್ಕು ಲಕ್ಷ ಹಣ ಪಡೆದು ಅಸಲು ಬಡ್ಡಿ ಸಮೇತ ಕೊಟ್ಟಿದ್ದ, ಹೀಗಿದ್ದರೂ ಸಾಲಕೊಟ್ಟ ವ್ಯಕ್ತಿ ನಿರಂತರ ಕಿರುಕುಳಕ್ಕೆ ಒಳಗಾಗಿದ್ದ ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಅಂತ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ .
ಹಾವೇರಿ ಜಿಲ್ಲೆಯ ಗುತ್ತಲದಲ್ಲಿ ಬೈಕ್ ಹಾಗೂ ಡೆತ್ ನೋಟ್ ಸಿಕ್ಕಿದೆ.ಇದೇ ತಿಂಗಳ 12ನೇ ತಾರೀಖಿನಂದು ಮನೆ ಬಿಟ್ಟು ಹೊರಗಡೆ ಹೋಗಿರುತ್ತಾನೆ. 14ನೇ ತಾರೀಕಿಗೆ ಮಿಸ್ಸಿಂಗ್ ಕಂಪ್ಲೀಟ್ ಕುಂದಗೋಳ ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತೆ. ಇದು ಮೈಕ್ರೋ ಫೈನಾನ್ಸ್ ಅಲ್ಲ ಕೈಗಡ ಸಾಲ ಆರೋಪಿಯನ್ನ ವಶಕ್ಕೆ ಪಡೆದು ಅಗತ್ಯ ಕ್ರಮ ಕೈಗೊಳ್ಳಲಾಗುತ್ತೆ ಎಂದರು..