- Advertisement -
www.karnatakatv.net: ರಾಯಚೂರು: ನೂತನ ಸಚಿವರಾದ ಬಳಿಕ ಜಿಲ್ಲೆಗೆ ಭೇಟಿ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಸಿಇಓಗೆ ಕ್ಲಾಸ್ ತೆಗೆದುಕೊಂಡ ಘಟನೆ ನಡೆಯಿತು. ಗ್ರಾಮ ಪಂಚಾಯ್ತಿಗಳಿಗೆ ಕಸ ನಿರ್ವಹಣೆ ಮಾಡಲು ವಾಹನಗಳನ್ನ ವಿತರಣೆ ಮಾಡುವ ಉದ್ಘಾಟನಾ ಕಾರ್ಯಕ್ರಮದಲ್ಲಿ ತರಾಟೆ ತೆಗೆದುಕೊಂಡಿದ್ದಾರೆ. ವಾಹನಗಳ ವಿತರಣೆ ವಿಚಾರವಾಗಿ, ಅದಕ್ಕೆ ತಗುಲಿದ ವೆಚ್ಚ, ಈಗಾಗಲೇ ಮಂಜೂರು ಮಾಡಿದ ವಾಹನಗಳ ಸ್ಥಿಗತಿ ಬಗ್ಗೆ ಯಾವುದೇ ವಿವರ ಇಲ್ಲದೇ ಆಗಮಿಸಿದ್ದ ಸಿಇಓ ಮತ್ತು ಆ ಇಲಾಖೆ ಸಿಬ್ಬಂಧಿಗಳಿಗೆ ಸಚಿವರು ತರಾಟೆ ತೆಗೆದುಕೊಂಡರು..
ಈ ರೀತಿಯ ವರ್ತನೆಯನ್ನ ನಾನು ಸಹಿಸೋದಿಲ್ಲ. ಇದು ರಿಪೀಟ್ ಆದ್ರೆ ನಾನು ಹೋಗುವಾಗ ಬೇರೆ ರೀತಿಯಲ್ಲಿ ಉತ್ತರಿಸಬೇಕಾಗುತ್ತೆ ಹುಷಾರ್ ಎಂದರು.. ಉಸ್ತುವಾರಿ ಸಚಿವರು ಕ್ಲಾಸ್ ತೆಗೆದುಕೊಳ್ತಿದ್ದಂತೆ ಅಧಿಕಾರಿಗಳು ತಬ್ಬಿಬ್ಬಾದರು..
- Advertisement -