Hassan News: ಹಾಸನ: ಬೇಲೂರು: ವಾಣಿಜ್ಯ ಮಳಿಗೆಗಳಿಂದಾಗಿ ಸುಮಾರು ೧ ಕೋಟಿಗೂ ಹೆಚ್ಚು ಬಾಡಿಗೆ ಬಾಕಿ ಇರುವ ಮಳಿಗೆದಾರರು ಒಂದು ವಾರದೊಳಗೆ ಹಣ ಪಾವತಿಸದಿದ್ದರೆ ಅಂತಹ ಮಳಿಗೆಗಳಗೆ ಬೀಗ ಮುದ್ರೆ ಹಾಕಲಾಗುವುದು ಎಂದು ಪುರಸಭೆ ಅದ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಎಚ್ಚರಿಕೆ ನೀಡಿದರು.
ಪಟ್ಟಣದ ಐಡಿಎಂಸಿ ವಾಣಿಜ್ಯ ಮಳಿಗೆ ಹಾಗೂ ಪುರಸಭೆಯ ಅಂಗಡಿ ಮಳಿಗೆಗಳಲ್ಲಿ ಬಾಡಿಗೆ ಇರುವ ಅಂಗಡಿಗಳಿಗೆ ಅಧಿಕಾರಿಗಳ ಜೊತೆ ಹಾಗೂ ಸದಸ್ಯರೊಂದಿಗೆ ತಾವೇ ಖುದ್ದು ಬಾಡಿಗೆ ವಸೂಲಾತಿಗೆ ಇಳಿದಿದ್ದರು. ಈ ವೇಳೆ ಕೆಲ ಅಂಗಡಿಗಳಲ್ಲಿ ಒಂದು ವರ್ಷ ಎರಡು ವರ್ಷ ಬಾಡಿಗೆ ಪಾವತಿ ಮಾಡದಂತಹ ಮಾಲೀಕರಿಗೆ ಕಡಕ್ ಸೂಚನೆ ನೀಡಿದ್ದಾರೆ. ಇನ್ನೊಂದು ವಾರದಲ್ಲಿ ಬಾಡಿಗೆ ಪಾವತಿಸದಿದ್ದರೆ ಅಂಗಡಿ ಮಳಿಗೆಗಳಿಗೆ ಬೀಗ ಮುದ್ರೆ ಹಾಕಲಾಗವುದು ಎಂದು ತಿಳಿಸಿದರು.
ನಮ್ಮ ಪುರಸಭೆಗೆ ಸೇರಿದ ೧೯೩ ವಾಣಿಜ್ಯ ಮಳಿಗೆಗಳಲ್ಲಿ ಇಲ್ಲಿವರೆಗೂ ಸುಮಾರು ೧ ಕೋಟಿ ಬಾಡಿಗೆಯನ್ನು ಬಾಕಿ ಉಳಿಸಿಕೊಂಡಿರುವುದರಿಂದ ಪುರಸಭೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಸಿಬ್ಬಂದಿಗಳಿಗೆ ವೇತನ ನೀಡಲು ಕಷ್ಟವಾಗುತ್ರಿದೆ. ಲಕ್ಷಾಂತರ ಬಾಡಿಗೆಯನ್ನು ಈ ರೀತಿ ಬಾಕಿ ಉಳಿಸಿಕೊಂಡರೆ ಹೇಗೆ ಅಭಿವೃದ್ಧಿ ಮಾಡಲು ಸಾಧ್ಯ. ನಮ್ಮ ಕರವಸೂಲುಗಾರರು ಬಂದಂತ ಸಂದರ್ಭದಲ್ಲಿ ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ನಾವೇ ಖುದ್ದು ವಸೂಲಾತಿಗೆ ಬಂದಿದ್ದೇನೆ. ಇಂದು ಕೇವಲ ಅವರಿಗೆ ಎಚ್ಚರಿಕೆ ನೀಡುತ್ತಿದ್ದು ಒಂದು ವಾರದಲ್ಲಿ ಬಾಡಿಗೆ ಸಂಪೂರ್ಣ ಕಟ್ಟದಿದ್ದರೆ ಉಳಿದಿರುವ ಹಣಕ್ಕೆ ದಂಡದ ರೂಪದಲ್ಲಿ ವಸೂಲಾತಿ ಮಾಡಬೇಕಾಗುತ್ತದೆ. ಜೊತೆಗೆ ಅಂಗಡಿಯ ಬೀಗವನ್ನು ಹಾಕಲಾಗುತ್ತದೆ ಎಂದರು.
ಮುಖ್ಯಾಧಿಕಾರಿ ಮಂಜುನಾಥ್ ಮಾತನಾಡಿ ನಮ್ಮಪುರಸಭೆಗೆ ಸೇರಿದ ಮಳಿಗೆಗಳಲ್ಲಿ ಐಡಿಎಂಸಿ ವಾಣಿ ಜ್ಯ ಸಂಕೀರ್ಣದಲ್ಲಿ ೬೪ ಮಳಿಗೆಗಳಿದ್ದು ಇದರಲ್ಲಿ ಅರ್ಧದಷ್ಟು ಬಾಡಿಗೆದಾರರು ಪಾವತಿಸುತ್ತಿದ್ದಾರೆ .ಕೆಲವರು ವರ್ಷಗಟ್ಟಲೆ ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ. ನಮ್ಮ ಕರವಸೂಲಿಗಾರರು ಹಲವಾರು ಬಂದು ಅವರಿಗೆ ಬಾಡಿಗೆ ನೀಡಲು ತಿಳಿಸಿದರೂ ಸಹ ಇದರ ಬಗ್ಗೆ ಗಮನ ಹರಿಸಿಲ್ಲ. ತರಕಾರಿ ಅಂಗಡಿಗಳಲಗಲಿ ಕಡಿಮೆ ಬಾಡಿಗೆ ಇದ್ದರೂ ಸಹ ಕಟ್ಟಿಲ್ಲ. ಇದು ಕೊನೆಯ ಎಚ್ಚರಿಕೆ ನೀಡಿದ್ದು ಜಿಲ್ಲಾಧಿಕಾರಿ ಗಳು ಸಹ ನಮಗೆ ಕರವಸೂಲಾತಿಯನ್ನು ಬೇಗನೆ ಮಾಡುವಂತೆ ಸೂಚನೆ ನೀಡಿದ್ದು ಅಧ್ಯಕ್ಷರ ಸೂಚನೆ ಮೇರೆಗೆ ಇಂದು ಅವರಿಗೆ ಖುದ್ದಾಗಿ ಬಾಡಿಗೆ ಪಾವತಿಸಲು ಸೂಚನೆ ನೀಡಿದ್ದೇವೆ . ಬಾಡಿಗೆಯನ್ನು ಒಂದು ವಾರದಲ್ಲಿ ಕಟ್ಟದಿದ್ದಲ್ಲಿ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಕರವಸೂಲಿ ಹೋದ ಸಂದರ್ಭದಲ್ಲಿ ಸುಮಾರು ೫ ಲಕ್ಷವನ್ನು ಸ್ಥಳದಲ್ಲೇ ಕೆಲ ಮಾಲೀಕರು ಪಾವತಿಸಿದರು.
ನಾಗರಾಜ್, ಕರ್ನಾಟಕ ಟಿವಿ, ಹಾಸನ
‘ಸಿದ್ದರಾಮಯ್ಯ ಅಂದ್ರೆ ಚಾಂಪಿಯನ್. ಇಡೀ ದೇಶಕ್ಕೆ ಉತ್ತಮ ಸಿಎಂ ಸಿಕ್ಕಿದ್ದಾರೆ. ಅದು ನಮ್ಮ ಹೆಮ್ಮೆ’
‘ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್. ನೆಹರು ಕಾಲದಿಂದ ಇದು ಆರಂಭವಾಗಿದೆ’
ನೀವೂ ಅಕ್ಕಿ ಖರೀದಿಸಿ ಜನರಿಗೆ ವಿತರಿಸಿ, ನಮ್ಮದೇನು ಅಭ್ಯಂತರವಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ