News: ಕಳೆದ ವರ್ಷ ಸರ್ಕಾರದಿಂದ ಆಯೋಜಿಸಿದ್ದ ಕೊಪ್ಪಳದ ಕನಕಗಿರಿ ಉತ್ಸವ ನಡೆಸಿಕೊಟ್ಟಿದ್ದ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮಾಲೀಕನಿಗೆ 3 ಕೋಟಿಗೂ ಅಧಿಕ ಹಣ ವಂಚಿಸಿದ ಆರೋಪದಡಿ ದೂರು ದಾಖಲಾಗಿದೆ.
5 ಜನರ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದ್ದು, ಇಸ್ಪೆಂಟಿ ರಸ್ತೆಯ ಪ್ರಸ್ತುತ್ ಇನೋವೆಟಿವ್ ಕ್ರಿಯೇಷನ್ಸ್ ಮತ್ತು ಸೆಲ್ಯೂಷನ್ಸ್ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮಾಲೀಕ ಎನ್.ವಿನಯ್ ವಂಚನೆಗೆ ಒಳಗಾದವರು.
ಇವರು ನೀಡಿರುವ ದೂರಿನ ಮೇರೆಗೆ ಆಂತರ್ಯ ಮೀಡಿಯಾದ ಎಂ.ಎನ್.ವರುಣ್ ಕುಮಾರ್, ಪಾರ್ಥಸಾರಥಿ, ಕಾಮರ್ಸ್ ಅಕೌಂಟಿಂಗ್ ಸೆಲ್ಯೂಷನ್ಲ್ಸ್ ಶಶಿಧರ್, ಸುಧಾ ಮತ್ತು ಲಿಂಜ್ ಕಂಪನಿಯ ವೈಭವ್ ಕುಮಾರ್ ಎಂಬುವವರ ವಿರುದ್ಧ ವಂಚನೆ, ನಂಂಬಿಕೆ ದ್ರೋಹದ ಕೇಸ್ ದಾಖಲಿಸಿ, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಬಗ್ಗೆ ದೂರು ನೀಡಿರುವ ವಿನಯ್, ಕಳೆದ ವರ್ಷ ಮಾರ್ಚ್‌ನಲ್ಲಿ ಕೊಪ್ಪಳದಲ್ಲಿ ಕನಕಗಿರಿ ಉತ್ಸವ ನಡೆಸಲು ನಮ್ಮ ಸಂಸ್ಥೆಗೆ ಅವಕಾಶ ಸಿಕ್ಕಿತ್ತು. ಪಾರ್ಥಸಾರಥಿ, ಸುಧಾ, ವಿಶ್ವಾಸ್ ಭಾರಧ್ವಾಜ್ ಜೊತೆ ಕೆಲಸದ ಬಗ್ಗೆ ಚರ್ಚಿಸಿದ್ದು, ಸಿಕ್ಕ ಲಾಭವನ್ನು ನಾಲ್ವರು ಪಾಾಲು ಮಾಡಿಕೊಳ್ಳುವುದು ಎಂದು ಮಾತಾಗಿತ್ತು. ಅದರಂತೆ ಕಾಾರ್ಯಕ್ರಮವೂ ನಡೆಯಿತು.
ಬಳಿಕ ಕನಕಗಿರಿ ಉತ್ಸವಕ್ಕೆ ಖರ್ಚಾಾಗಿದ್ದ 5 ಕೋಟಿಗೂ ಹೆಚ್ಚು ಮೌಲ್ಯವನ್ನು ಖಜಾನೆಯಿಂದ ಬಿಡುಗಡೆ ಮಾಡಲು ಜಿಎಸ್‌ಟಿ ಸಹಿತ ಬಿಲ್‌ಗಳನ್ನು ಸಲ್ಲಿಸುವಂತೆ ಹೇಳಲಾಗಿತ್ತು. ನನ್ನ ಬಳಿ ಜಿಎಸ್‌ಟಿ ಸಲ್ಲಿಸಲು ಸಾಧ್ಯವಾಗದ ಕಾರಣ, ಪರಿಚಯಸ್‌ಥರಾದ ಲಿಂಝ್ ಕಂಪನಿ ವೈಭವ್ ನಾಯಕ್ ಕಡೆಯಿಂದ, 1.72 ಕೋಟಿ, ಆಂತರ್‌ಯ ಮೀಡಿಯಾದ ವರುಣ್ ಕುಮಾರ್ ಅವರ ಕಡೆಯಿಂದ 1.97 ಕೋಟಿ, ಶಶಿಧರ್ ಕಡೆಯಿಂದ 2 ಕೋಟಿ ಬಿಲ್‌ಗಳನ್ನು ಸಲ್ಲಿಸಿದ್ದೆ.
ಈ ಬಳಿಕ ಕಮಿಷನ್ ವಿಷಯವಾಗಿ ಒಪ್ಪಂದವಾಗಿ, ಕೆಲವು ಪೇಪರ್ಸ್‌ಗೆ ಸಹಿ ಹಾಕಿದ್ದೆವು. ಬಂದ ಚೆಕ್‌ನಲ್ಲಿ ಸುಧಾ 2 ಚೆಕ್ ತೆಗೆದುಕೊಂಡಿದ್ದರು. ಉಳಿದ ಮೂರು ಚೆಕ್ ನನ್ನ ಆಫೀಸಿನಲ್ಲೇ ಇದ್ದವು. ಆದರೆ ಬಳಿಕ ವರುಣ್‌ಗೆ ಹಣ ಬಂದಿದ್ದು, ಅದರಲ್ಲಿ ಹಣ ನೀಡದೇ ಮೋಸ ಮಾಡಿದ್ದಾರೆ. ಬಾಕಿ ಹಣ ನೀಡದೇ ವಂಚಿಸಿದ್ದಾರೆ. ಹಣ ಕೇಳಿದರೆ, ಬೆದರಿಕೆ ಹಾಕುತ್ತಿದ್ದಾರೆ. ಹಣ ನೀಡುವುದಿಲ್ಲ ಏನು ಬೇಕಾದ್ರೂ ಮಾಡಿಕೋ ಎಂದು ಬೆದರಿಕೆ ಹಾಕಿದ್ದಾರೆ ಎಂದು ವಿನಯ್ ಐವರ ವಿರುದ್ಧ ದೂರು ನೀಡಿದ್ದಾರೆ.