Hubli News: ಹುಬ್ಬಳ್ಳಿಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಪ್ರಸಾದ್ ಅಬ್ಬಯ್ಯ, ಪ್ರಜ್ವಲ್ ರೇವಣ್ಣ ಅವರ ರಾಸಲೀಲೆ ಖಂಡಿಸಿ ಪ್ರತಿಭಟನೆ ಮಾಡಿದ್ದೇವೆ ಎಂದಿದ್ದಾರೆ.
ಇದು ಮೋದಿ ಪರಿವಾರಾನಾ..? ರೇವಣ್ಣ ಅವರ ಪರಿವಾರ ನಿಮ್ಮ ಪರಿವಾರವಾ.? ನೀವು ಬಹಳ ಸಂಸ್ಕೃತದಿಂದ ಮಾತಾಡ್ತೀರಿ. ಇದೇನಾ ನಿಮ್ಮ ಪರಿವಾರವಾ ..? ಇವತ್ತು ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆ. ಅತ್ಯಾಚಾರ ಮಾಡಿದ್ದಾನೆ. ಬಿಜೆಪಿ ಜೆಡಿಎಸ್ ಎರಡು ಮಿಲಾಪಿಯಾಗಿವೆ. ಮಹಿಳೆಯರ ಬಗ್ಗೆ ಯಾವ ರೀತಿ ಗೌರವ ಇದೆ ಅನ್ನೋದ ತೋರಸ್ತಿದೆ. ಇವತ್ತು ಜರ್ಮನ್ ಗೆ ಯಾಕೆ ಕಳಸಿದ್ರಿ..? ಅಲ್ಲೂ ಪೆನ್ ಡ್ರೈವ್ ಮಾಡೋಕೆ ಕಳಸಿದ್ರಾ.? ಎಂದು ಪ್ರಸಾದ್ ಅಬ್ಬಯ್ಯ ಪ್ರಶ್ನಿಸಿದ್ದಾರೆ.
ಇಲ್ಲಿ ಪೆನ್ ಡ್ರೈವ್ ಖಾಲಿಯಾಗಿದೆ ಅಂತಾ ಜರ್ಮನ್ ಗೆ ಕಳಸಿದ್ರಾ..? ಪ್ರಜ್ವಲ್ ರೇವಣ್ಣ ಅವರಿಗೆ ಗಲ್ಲು ಶಿಕ್ಷೆಯಾಗಬೇಕು. ರಾಸಲೀಲೆ ಇವತ್ತು ಬಯಲಾಗಿದೆ. ಸಾವಿರಾರು ಮಹಿಳೆಯರ ಮಾನ ಹಾನಿಯಾಗಿದೆ. ಜರ್ಮನ್ ಗೆ ಹೋಗೋಕೆ ಕುಮ್ಮಕ್ಕು ಕೊಡ್ತಾರೆ ಅಂದ್ರೆ ಏನ ಅರ್ಥ..? ಲಲಿತ್ ಮೋದಿ, ವಿಜಯ ಮಲ್ಯ ದೇಶದ ಸಂಪತ್ತು ದೋಚಿಕೊಂಡು ಹೋಗಿದ್ದಾರೆ. ಇವರು ಮಾನ ದೋಚಕೊಂಡು ಹೋಗಿದ್ದಾರೆ.. ಎಂದು ಅಬ್ಬಯ್ಯ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಜನ ಸ್ವಾವಲಂಬಿಯಾಗಲು ಮೋದಿಯವರು ಅನೇಕ ಸ್ಕೀಮ್ ಕೊಟ್ಟಿದ್ದಾರೆ: ಪ್ರಹ್ಲಾದ್ ಜೋಶಿ
ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ: ಸಂತ್ರಸ್ತೆಯ ಅತ್ತೆಯಿಂದ ಸ್ಪೋಟಕ ಹೇಳಿಕೆ..