Friday, April 11, 2025

Latest Posts

ಹುಬ್ಬಳ್ಳಿಯಲ್ಲಿ ಕಳ್ಳತನ ಮಾಡಿದ್ದ ಕಳ್ಳನನ್ನ ಮಹಾರಾಷ್ಟ್ರದಲ್ಲಿ ಬಂಧಿಸಿದ ಪೊಲೀಸರು..

- Advertisement -

National News: ಹುಬ್ಬಳ್ಳಿ: ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಾಲ್ಕು ಅಂಗಡಿಗಳಲ್ಲಿ ಕಳ್ಳತನ ಮಾಡಿ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದ ಅಂತರ್ ರಾಜ್ಯ ಆರೋಪಿಯನ್ನ ಬಂಧನ ಮಾಡುವಲ್ಲಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಯನ್ನ ಮಹಾರಾಷ್ಟ್ರದ ಅಕ್ಕಲಕೋಟೆಯ ಮಹೇಶ ಪೂಜಾರಿ ಎಂದು ಗುರುತಿಸಲಾಗಿದ್ದು, ಆರೋಪಿಯಿಂದ 104000 ನಗದು ಹಾಗೂ ಕಳ್ಳತನಕ್ಕೆ ಬಳಸಿದ್ದ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ.

ಇನ್ಸಪೆಕ್ಟರ್ ಎಂ.ಎಸ್.ಹೂಗಾರ, ಪಿಎಸ್ಐ ಮಲ್ಲಿಕಾರ್ಜುನ ಹೊಸೂರ, ಸಿಬ್ಬಂದಿಗಳಾದ ಎಸ್.ವಿ.ಯರಗುಪ್ಪಿ, ಪ್ರಕಾಶ ಕಲಗುಡಿ, ಗುಳೇಶ ಎಚ್.ಎಂ, ಮಂಜುನಾಥ ಹಾಲವರ, ಎಸ್.ಬಿ.ಯಳವತ್ತಿ, ರೇಣಪ್ಪ ಶಿಕ್ಕಲಗಾರ, ತರುಣ ಗಡ್ಡದವರ, ಅರುಣ ಡೊಳ್ಳಿನ, ಆರೂಢ ಕರೆಣ್ಣನವರ, ಜ್ಞಾನೇಶ ಮಾಂಗ, ತಾಂತ್ರಿಕ ವರ್ಗದ ಎಂ.ಜಿ.ಚಿಕ್ಕಮಠ ಕಾರ್ಯಾಚರಣೆ ನಡೆಸಿದ್ದರು.

ಉಪನಗರ ಠಾಣೆ ಪೊಲೀಸರ ಕಾರ್ಯಾಚರಣೆಗೆ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅವರು ಶ್ಲಾಘಿಸಿದ್ದಾರೆ.

ಹುಬ್ಬಳ್ಳಿಯ ಬಾಷಾಪೀರ್ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ಯತ್ನಾಳ ಹಠಾವೋ ಆರಂಭಿಸುತ್ತೇವೆ: ಬಿಜೆಪಿ ವಕ್ತಾರರಿಂದ ಎಚ್ಚರಿಕೆ

ಠಾಣೆಯ ಆವರಣದಲ್ಲಿಯೇ ತಾಳಿ ಕಟ್ಟಿದ ಯುವಕ: ಜೈ ಶ್ರೀರಾಮ್ ಘೋಷಣೆ

- Advertisement -

Latest Posts

Don't Miss