Tuesday, November 18, 2025

Latest Posts

ಬಾಲ ಬಿಚ್ಚಿದ್ರೆ ಹುಷಾರ್ ಎಂದು ಎಚ್ಚರಿಸಲು ಬೆಳ್ ಬೆಳಿಗ್ಗೆ ರೌಡಿಗಳ ಮನೆ ಬಾಗಿಲು ತಟ್ಟಿದ ಪೊಲೀಸರು

- Advertisement -

Dharwad News: ಧಾರವಾಡ: ವಿದ್ಯಾನಗರಿ ಧಾರವಾಡದಲ್ಲಿ ಇಂದು ಬೆಳ್ಳಂಬೆಳಿಗ್ಗೆ ರೌಡಿಗಳ ನಿದ್ದೆ ಹಾಳಾಗಿತ್ತು, ಅವರೇಳುವ ಮುನ್ನವೇ ಬಾಗಿಲು ಬಡಿದು, ಎಚ್ಚರಿಸುವ ಜೊತೆಗೆ ಎಚ್ಚರಿಕೆಯನ್ನ ಮೂರು ಠಾಣೆಯ ಪೊಲೀಸರು ಮಾಡಿದ್ದಾರೆ.

ಧಾರವಾಡ ವಿದ್ಯಾಗಿರಿ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ, ಶಹರ ಠಾಣೆಯ ವಿಶ್ವನಾಥ ಚೌಗಲೆ ಹಾಗೂ ಉಪನಗರ ಠಾಣೆಯ ದಯಾನಂದ ಶೇಗುಣಿಸಿ ಅವರುಗಳು ತಮ್ಮ ವ್ಯಾಪ್ತಿಯ ರೌಡಿಗಳಿಗೆ ಎಚ್ಚರಿಕೆಯನ್ನ ನೀಡಿದ್ದಾರೆ.

ಎಸಿಪಿ ಬಿ.ಬಸವರಾಜ ಅವರ ಸೂಚನೆಯ ಆಧಾರದ ಮೇಲೆ ಸಂಘಟಿತವಾಗಿ ದಾಳಿ ಮಾಡಿದ ಪೊಲೀಸರು, ಅಹಿತಕರ ಘಟನೆಗಳು ನಡೆದರೇ, ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

ಹುಬ್ಬಳ್ಳಿಯಲ್ಲಿ ಎರಡು ಭೀಕರ ಕೊಲೆಗಳು ನಡೆದ ನಂತರ ಪೊಲೀಸರು ಸಾಕಷ್ಟು ಜಾಗೃತೆ ವಹಿಸುತ್ತಿದ್ದು, ಸಾರ್ವಜನಿಕರು ಭಯ ಬೀಳದಂತ ಸ್ಥಿತಿಯನ್ನ ನಿರ್ಮಾಣ ಮಾಡುತ್ತಿದ್ದಾರೆ. ಜನತೆ ಕೂಡಾ ಪೊಲೀಸರಿಗೆ ಸಹಾಯ ಮಾಡುವ ಜೊತೆಗೆ, ಅಹಿತಕರ ಘಟನೆಗಳು ನಡೆಯಬಹುದೆಂಬ ಸೂಚನೆ ಸಿಕ್ಕರೂ ಪೊಲೀಸರಿಗೆ ತಕ್ಷಣ ತಿಳಿಸುವ ಅವಶ್ಯಕತೆಯಿದೆ.

ಡಾ. ಎಂ. ಮೋಹನ ಆಳ್ವ -72: ಮೆ.31ರಂದು ಕಾರ್ಕಳ ಜ್ಞಾನಸುಧಾದಲ್ಲಿ ಸವ್ಯಸಾಚಿ ಸಂಭ್ರಮ

ಮಂಡ್ಯದಲ್ಲಿ ಡಾ.ಅಂಬರೀಷ್ ಫೌಂಡೇಷನ್ ಆರಂಭ: ವಿದ್ಯಾರ್ಥಿಗಳನ್ನು ದತ್ತು ಪಡೆದ ಸುಮಲತಾ

Udupi News: ದೈವದ ನುಡಿದಂತೆ ನಡೆಯಿತು ಘಟನೆ: ಕೊ* ಆರೋಪಿ ಅರೆಸ್ಟ್

- Advertisement -

Latest Posts

Don't Miss