New York News: ಪ್ರತಿಷ್ಠಿತ ವೀವರ್ಕ್ ಕಂಪನಿ ದಿವಾಳಿಯ ಸ್ಥಿತಿಗೆ ಬಂದಿದ್ದು, ದಿವಾಳಿ ತಡೆಗೆ ಮನವಿ ಅರ್ಜಿ ಸಲ್ಲಿಸಿದೆ. ಆರ್ಥಿಕ ಮುಗ್ಗಟ್ಟಿನಿಂದಾಗಿ, ಕಂಪನಿ ಈ ಸ್ಥಿತಿಗೆ ಬಂದಿದ್ದು, ಈ ಹಿಂದೆ ಕಂಪನಿ ನಷ್ಟ ಅನುಭವಿಸುತ್ತಿದೆ ಎಂದು ಸುದ್ದಿಯಾಗಿತ್ತು.
ಒಂದು ಕಾಲದಲ್ಲಿ ಅಮೆರಿಕದ ಅತ್ಯಂತ ಭರವಸೆಯ ಟಾಪ್ ಕಂಪನಿಯಾಗಿದ್ದ ವೀವರ್ಕ್ ಬಳಿ ಈಗ, ಕಂಪನಿ ಉಳಿಸಿಕೊಳ್ಳುವಷ್ಟು ಕೂಡ ಹಣ ಇಲ್ಲದಂತಾಗಿದೆ. ಬೇರೆ ಬೇರೆ ಉದ್ಯೋಗಿಗಳಿಗೆ ಕೆಲಸ ಮಾಡಲು, ಸ್ಥಳ ಒದಗಿಸುವ ಕೆಲಸ ಈ ಕಂಪನಿ ಮಾಡುತ್ತಿತ್ತು. ಬೇರೆ ಬೇರೆ ಕಂಪೆನಿಯ ಕೆಲಸಗಾರರು ಕೂಡ, ವೀವರ್ಕ್ ಒದಗಿಸುವ ಸ್ಥಳಗಳಿಗೆ ಹೋಗಿ, ಅಲ್ಲಿ ಕೆಲಸ ಮಾಡುತ್ತಿತ್ತು.
ಆಫೀಸಿಗೆ ಬಂದು ಕೆಲಸ ಮಾಡಲು ಅಥವಾ ಮನೆಯಿಂದ ಕೆಲಸ ಮಾಡಲು ಕಷ್ಟ ಆಗುವವರಿಗೆ, ವೀವರ್ಕ್ ಕೆಲಸಕ್ಕಾಗಿ ಸ್ಥಳ ಕಲ್ಪಿಸಿಕೊಡುತ್ತಿತ್ತು. ಆ ಸ್ಥಳಕ್ಕೆ ಬಂದು ಅವರು ಕೆಲಸ ಮಾಡಬಹುದಿತ್ತು. ಆದರೆ ಹಲವು ಕಂಪನಿಗಳು ತಮ್ಮ ಆಫೀಸ್ ಕೆಲಸವನ್ನು, ತಮ್ಮ ಆಫೀಸಿಗೆ ಬಂದೇ ಮಾಡಬೇಕು ಎಂದು ಹೇಳಿದ್ದರು. ಮತ್ತು ವೀವರ್ಕ್ ಕಂಪೆನಿಗಳ ಜೊತೆಗಿನ ಸಬ್‌ಸ್ಕ್ರಿಪ್ಕ್ಷನ್ ಕಡಿತಗೊಳಿಸಿದ್ದರು. ಈ ಕಾರಣಕ್ಕೆ ವೀವರ್ಕ್ ಕಂಪೆನಿ ದಿವಾಳಿಯ ಸ್ಥಿತಿ ಬಂದು ತಲುಪಿದೆ.
ಸ್ಥಳದ ಬಾಡಿಗೆ ಕಟ್ಟಲು, ತಮ್ಮ ಕೆಲಸಗಾರರಿಗೆ ಸಂಬಳ ನೀಡಲು ಕೂಡ ಸಂಸ್ಥೆಯ ಬಳಿ ಹಣವಿಲ್ಲ. ಹಾಗಾಗಿ ಕಂಪನಿ ಮುಚ್ಚುವ ಹಂತಕ್ಕೆ ಬಂದಿದೆ. ಈ ಕಾರಣಕ್ಕೆ ಸಂಸ್ಥೆ ಬ್ಯಾಕ್ರಪ್ಸಿಗೆ, ದಿವಾಳಿ ತಡೆಗೆ ಮನವಿ ಮಾಡಿ, ಅರ್ಜಿ ಸಲ್ಲಿಸಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಗೇಟ್ ಮೇಲೆಯೇ ಬಟ್ಟೆ ಒಣ ಹಾಕಿದ ಮಹಿಳೆ, ಫೋಟೋ ವೈರಲ್
ಅನುಮಾನಕ್ಕೆ ಬಾಣಂತಿ ಪತ್ನಿಯನ್ನೇ ಕೊಂದ ಪತಿ: ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಪೊಲೀಸಪ್ಪ




