ಕೇದಾರನಾಥದಲ್ಲಿ 1 ನೀರಿನ ಬಾಟಲ್ ಬೆಲೆ 80 ರೂಪಾಯಿ.. ಯಾಕೆ ಗೊತ್ತಾ..?

National News: ಚಾರ್‌ಧಾಮ್ ಯಾತ್ರೆಗೆ ಅವಕಾಶ ಕಲ್ಪಿಸಲಾಗಿದ್ದು, ಜನ ಎದ್ನೋಬಿದ್ನೋ ಅಂತಾ ಕೇದಾರನಾಥನ ದರ್ಶನಕ್ಕಾಗಿ ಹೋಗುತ್ತಿದ್ದಾರೆ. ಕೆಲವರು ಸತ್ಯ ಭಕ್ತಿಯಿಂದ ಹೋದರೆ, ಇನ್ನು ಕೆಲವರು ರೀಲ್ಸ್ ಮಾಡಲೆಂದೇ ಹೋದಂತಿದೆ. ಆದರೆ ಇಲ್ಲಿ ಮೊದಲ ದಿನ ಹೋದವರ ಪರಿಸ್ಥಿತಿ ದೇವರಿಗೇ ಪ್ರೀತಿ ಅನ್ನುವಂತಿತ್ತು.

ಇನ್ನು ಪ್ರವಾಸಿ ತಾಣಗಳಲ್ಲಿ ನೀರು, ಪಾನೀಯ, ಆಹಾರಗಳ ಬೆಲೆ ದುಪ್ಪಟ್ಟಾಗಿರೋದು ಎಲ್ಲರಿಗೂ ಗೊತ್ತೇ ಇದೆ. ಆದರೆ ಕೇದಾರನಾಥದಲ್ಲಿ ೊ ಚಿಕ್ಕ ಬಾಟಲಿ ನೀರಿನ ಬೆಲೆ 80 ರೂಪಾಯಿಯಾಗಿದೆ. ಓರ್ವ ಪ್ರವಾಸಿ, ಈ ಬಗ್ಗೆ ವೀಡಿಯೋ ಮಾಡಿ, ನೀರು ಮಾರಾಟ ಮಾಡುವವರ ಬಳಿಯೇ ನೀರಿಗ್ಯಾಕೆ ಇಷ್ಟು ಬೆಲೆ ಅನ್ನೋ ಬಗ್ಗೆ ವಿವರಣೆ ಕೊಡಿಸಿದ್ದಾರೆ.

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರಲ್ಲಿ ನೀರು ಮಾರುವ ವ್ಯಕ್ತಿ ಯಾಕೆ ನೀರಿನ ಬೆಲೆ ಹೆಚ್ಚು ಅಂತಾ ವಿವರಿಸಿದ್ದಾರೆ. ಈ ಸ್ಥಳದಲ್ಲಿ ನೀರಿನ ಬಾಟಲಿ ತಂದು ಕೊಡುವವರಿಗೆ 1,500 ರೂಪಾಯಿ ನೀಡಬೇಕಾಗುತ್ತದೆ. ಬರೀ 3 ಸೆಟ್ ನೀರಿಗೆ ಇಷ್ಟು ಕೊಡಬೇಕು. ಅದಕ್ಕಾಗಿ ನಾವೇ ಅದನ್ನೆಲ್ಲ ಹೊತ್ತು ತರುತ್ತೇವೆ. ಅಥವಾ ಕತ್ತೆ ಮೇಲೆ ತರಬೇಕಾಗುತ್ತದೆ. ಅಲ್ಲದೇ, ಇಲ್ಲಿ ಅಂಗಡಿ ಹಾಕಲು ಹೆಚ್ಚು ಬಾಡಿಗೆ ನೀಡಬೇಕು. ಬರೀ 4ರಿಂದ 5 ತಿಂಗಳು ಮಾತ್ರ ದೇವಸ್ಥಾನದ ಬಾಗಿಲು ತೆರೆಯುವ ಕಾರಣ, ನಮಗೆ 6 ತಿಂಗಳು ಮಾತ್ರ ದುಡಿಯಲು ಸಾಧ್ಯ. ಈ ಎಲ್ಲ ಕಾರಣಗಳಿಂದ ನೀರಿನ ಬಾಟಲಿಯ ಬೆಲೆ 80 ರೂಪಾಯಿ ಎಂದು ಮಾರಾಟಗಾರ ಹೇಳಿದ್ದಾನೆ.

ಈ ವೀಡಿಯೋಗೆ ಹಲವು ಕಾಮೆಂಟ್ಸ್ ಬಂದಿದೆ. ಇದಕ್ಕೆ ವಿರುದ್ಧವಾಗಿಯೇ ಹಲವು ಕಾಮೆಂಟ್ಸ್ ಬಂದಿದೆ. ನೀವು ಸೀಲ್ಡ್ ಬಾಟಲಿಯಿಂದಲೇ ಯಾಕೆ ನೀರು ಕುಡಿಯಬೇಕು. ಖಾಲಿ ಬಾಟಲಿ ತೆಗೆದುಕೊಂಡು ಹೋದರೆ, ಕೇದಾರನಾಥದಲ್ಲೇ ಹರಿಯುವ ಶುದ್ಧ ನೀರನ್ನೇ ನೀವು ಕುಡಿಯಬಹುದು ಅಂತಾ ಒಬ್ಬರು ಕಾಮೆಂಟ್ ಮಾಡಿದ್ದಾರೆ.

About The Author