Political News: ಪುತ್ತೂರು ಬಿಜೆಪಿ ಮುಖಂಡನ ಪುತ್ರ ಕೃಷ್ಣ.ಜೆ.ರಾವ್ ಪ್ರೀತಿ, ಪ್ರೇಮದ ಹೆಸರಿನಲ್ಲಿ ಯುವತಿಯ ಜೊತೆ ಲೈಂಗಿಕ ಸಂಬಂಧ ಹೊಂದಿ, ಮಗು ನೀಡಿರುವ ಪ್ರಕರಣದ ವಿಚಾರಣೆ ನಡೆದಿದ್ದು, ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಆ ಮಗುವಿನ ಪಾಲನೆ ಪೋಷಣೆಗಾಗಿ ಕೃಷ್ಣ.ಜೆ.ರಾವ್ ಯುವತಿಗೆ ಪ್ರತೀ ತಿಂಗಳು 75 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಪ್ರಕರಣ ರದ್ದುಪಡಿಸುವಂತೆ ಕೋರಿ, ಕೃಷ್ಣ.ಜೆ.ರಾವ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ. ಈ ಪ್ರಕರಣದ ವಿಚಾರಣೆ ವೇಳೆ ಕೋರ್ಟ್ ಮಹತ್ವದ ಆದೇಶ ನೀಡಿದೆ. ಮುಂದಿನ ವಿಚಾರಣೆವರೆಗೂ ಈ ಆದೇಶ ಮುಂದುವರೆಯಲಿದೆ.
ಕೃಷ್ಣ ಜೆ.ರಾವ್ ಕಳೆದ ವರ್ಷ ಆತನದ್ದೇ ಕ್ಲಾಸಿನಲ್ಲಿ ಓದುತ್ತಿದ್ದ ಯುವತಿಯನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಹೊಂದಿದ್ದಾನೆ. ಆಕೆ ಗರ್ಭಿಣಿ ಎಂದು ತಿಳಿದ ಬಳಿಕ, ನನಗಿನ್ನೂ ಮದುವೆ ವಯಸ್ಸಾಗಿಲ್ಲ. ಇನ್ನು ಕೆಲವೇ ತಿಂಗಳಲ್ಲಿ ಹುಟ್ಟುಹಬ್ಬವಿದ್ದು, 21 ವಯಸ್ಸಾದ ಬಳಿಕ ವಿವಾಹವಾಗುತ್ತೇನೆ ಎಂದು ಹೇಳಿದ್ದು, ಇಬ್ಬರ ಮನೆಯವರು ಕೂಡ ಪೋಲೀಸ್ ಠಾಣೆಯಲ್ಲಿ ಈ ಬಗ್ಗೆ ರಾಜಿ ಮಾತುಕತೆ ನಡೆಸಿದ್ದರು.
ಆದರೆ ಹುಟ‘್ಟುಹಬ್ಬ ಆದರೂ ಕೃಷ್ಣ ತಾನು ಮದುವೆಯಾಗುವುದಿಲ್ಲ. ಮಗುವನ್ನು ತೆಗೆಸಿಬಿಡಿ. ಹಣ ನೀಡುತ್ತೇನೆ ಎಂದು ಹೇಳಿದ್ದನೆಂದು ಆರೋಪಿಸಲಾಗಿದೆ. ಆತನ ತಂದೆ ತಾಯಿ ಕೂಡ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದರೆಂಬ ಆರೋಪವಿದೆ. ಡಿಎನ್ಎ ಪರೀಕ್ಷೆ ನಡೆಸಿದಾಗ, ಮಗು ಕೃಷ್ಣನದ್ದೇ ಎಂದು ಸಾಬೀತಾಗಿದೆ. ಇದೀಗ ಮಗುವಿಗೆ 10 ತಿಂಗಳು ತುಂಬಿದ್ದು, ನ್ಯಾಯಕ್ಕಾಗಿ ಇನ್ನೂ ಹೋರಾಟ ಮುಂದುವರೆದಿದೆ.
ಇದೀಗ ಹೈಕೋರ್ಟ್ ಮಗುವಿನ ಆರೈಕೆಗಾಗಿ 75 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಆದೇಶ ನೀಡಿದ್ದು, ಮುಂದಿನ ವಿಚಾರಣೆವರೆಗೂ ಈ ಆದೇಶ ಪಾಲಿಸಬೇಕೆಂದು ಹೇಳಿದೆ.




