ಕೋರ್ಟ್ ವಿಚಾರಣೆ ವೇಳೆ ನ್ಯಾಯಾಧೀಶರ ಮೇಲೆಯೇ ದಾಳಿ ಮಾಡಿದ ಖೈದಿ..

International News: ನ್ಯಾಯಾಧೀಶರು ಎಂದರೆ, ಅವರಿಗೆ ಅವರದ್ದೇ ಆದ ಗೌರವವಿರುತ್ತದೆ. ಅವರು ಕೋರ್ಟ್‌ಗೆ ಬಂದಾಗ, ಜನ ಎದ್ದು ನಿಂತು ಅವರಿಗೆ ಕೈಮುಗಿಯುತ್ತಾರೆ. ಅವರೊಂದಿಗೆ ಗೌರವದಿಂದ ವರ್ತಿಸದಿದ್ದಲ್ಲಿ, ಅಂಥವರಿಗೆ ಕಠಿಣ ಶಿಕ್ಷೆ ಕೂಡ ಕೊಡಲಾಗುತ್ತದೆ. ಆದರೆ ಇಲ್ಲೋರ್ವ ಖೈದಿ, ನ್ಯಾಯಾಧೀಶೆಯ ಮೇಲೆ ದಾಳಿ ಮಾಡಿದ್ದಾನೆ.

ಅಮೆರಿಕದ ನೆವಾಡಾ ಕೋರ್ಟ್ ರೂಂನಲ್ಲಿ ಈ ಘಟನೆ ನಡೆದಿದ್ದು, 30 ವರ್ಷದ ಡಿಯೋಬ್ರಾ ರೆಡ್ಡೆನ್ ಎಂಬುವವ ಈ ದಾಳಿ ಮಾಡಿದ್ದಾನೆ. ಆತನ ಮೇಲಿರುವ ವಿಚಾರಣೆ  ನಡೆಸಬೇಕಾದರೆ, ಸಿಟ್ಟಿಗೆದ್ದ ಖೈದಿ ಈ ರೀತಿ, ನ್ಯಾಯಾಧೀಶೆಯ ಮೇಲೆ ಕೈ ಮಾಡಿದ್ದಾನೆ. ಈತನ ಮೇಲೆ ಅನೇಕ ಪ್ರಕರಣಗಳಿದ್ದು, ಬ್ಯಾಟರಿ ದಂಧೆಯಲ್ಲಿ ತೊಡಗಿದ್ದಕ್ಕಾಗಿ, ಈತನನ್ನು ಅರೆಸ್ಟ್ ಮಾಡಿ, ಜೈಲಿಗೆ ಹಾಕಲಾಗಿತ್ತು.

ಬಳಿಕ ಬುಧವಾರ ಬೆಳಿಗ್ಗೆ ವಿಚಾರಣೆಗೆ ಕೋರ್ಟ್‌ ರೂಂಗೆ ತರಲಾಗಿದೆ. ತನ್ನ ವಿರುದ್ಧ ಜಡ್ಜ್ ತೀರ್ಪು ನೀಡುತ್ತಿದ್ದಂತೆ, ಖೈದಿಗೆ ಸಿಟ್ಟು ಬಂದು ಹಲ್ಲೆ ಮಾಡಿದ್ದಾನೆ. ಈತ ಮಾಡಿದ ಹಲ್ಲೆಗೆ, ನ್ಯಾಯಾಧೀಶೆಯ ತಲೆಗೆ ಪೆಟ್ಟಾಗಿದೆ. ಅಲ್ಲದೇ, ಆಕೆಯನ್ನು ಕಾಪಾಡಲು ಬಂದವರಿಗೂ ಪೆಟ್ಟಾಗಿದ್ದು, ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಮತ್ತು ಖೈದಿಯನ್ನು ಜೈಲಿಗೆ ಹಾಕಲಾಗಿದೆ.

ಗೋಧ್ರಾ ವಿವಾದಾತ್ಮಕ ಹೇಳಿಕೆ: ಹರಿಪ್ರಸಾದರನ್ನು ಬಂಧಿಸಿ ಎಂದ ಪ್ರಮೋದ್ ಮುತಾಲಿಕ್

ಹಿಂದೂ ರಾಷ್ಟ್ರ ಮಾಡೇ ಮಾಡ್ತೀವಿ ಗಂಡಸ್ತನ ಇದ್ರೆ ತಡಿರಿ: ಕಾಂಗ್ರೆಸ್‌ಗೆ ಮುತಾಲಿಕ್ ಸವಾಲ್

ಜೋಶಿ ಬದಲು ಶ್ರೀಕಾಂತ್ ಗೆ ಟಿಕೆಟ್ ಕೊಡಿ ಅಭಿಯಾನ ಆರಂಭಿಸಿದ ಕಾಂಗ್ರೆಸ್..!

About The Author