‘ಅಯೋಧ್ಯೆ ಕಾರ್ಯಕ್ರಮದ ಆಹ್ವಾನ ತಿರಸ್ಕರಿಸುವುದಕ್ಕೆ ಕಾಂಗ್ರೆಸ್ ನೀಡಿರುವ ಕಾರಣವೇ ಹಾಸ್ಯಾಸ್ಪದ’

Political News: ಅಯೋಧ್ಯೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಬರಲು ಕಾಂಗ್ರೆಸ್ ಸರ್ಕಾರ ನಿರಾಕರಿಸಿದ್ದು, ಗೌರವಯುತವಾಗಿ ಕಾರ್ಯಕ್ರಮದಿಂದ ದೂರ ಉಳಿಯುತ್ತೇವೆ ಎಂದು ಅಧಿಕೃತವಾಗಿ ಪ್ರಕಟಣೆ ಹೊರಡಿಸಿದೆ. ಈ ಬಗ್ಗೆ ಬಿಜೆಪಿ ನಾಯಕ ಸುನೀಲ್ ಕುಮಾರ್ ಟ್ವೀಟ್ ಮಾಡಿ, ಕಿಡಿ ಕಾರಿದ್ದಾರೆ.

ಅಯೋಧ್ಯೆ ಕಾರ್ಯಕ್ರಮದ ಆಹ್ವಾನ ತಿರಸ್ಕರಿಸುವುದಕ್ಕೆ ಕಾಂಗ್ರೆಸ್ ನೀಡಿರುವ ಕಾರಣವೇ ಹಾಸ್ಯಾಸ್ಪದ. ಅಪೂರ್ಣ ಕಟ್ಟಡದ ಉದ್ಘಾಟನೆಗೆ ಬರುವುದಿಲ್ಲ ಎಂಬುದೊಂದು ಪಿಳ್ಳೆ ನೆವ. ನಿಮ್ಮ ಮನಸಿನಲ್ಲಿದ್ದ ರಾಮ ವಿರೋಧ, ಹಿಂದು ವಿರೋಧ ಈಗ ಮತ್ತೆ ಬಹಿರಂಗವಾಗಿದೆ.

ಕೋಟ್ಯಂತರ ಹಿಂದುಗಳ ಭಾವನೆಗೆ ಕಾಂಗ್ರೆಸ್ ಮತ್ತೆ ಧಕ್ಕೆ ಮಾಡಿದೆ. ಜ.೨೨ರಂದು ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರಲು ಕಾಂಗ್ರೆಸ್ ನಿರ್ಧರಿಸಿದೆ. ನೀವು ಭಾಗವಹಿಸದಿದ್ದರೆ ಚಿಂತೆ ಇಲ್ಲ. ಈ ಕ್ಷಣದಿಂದ ರಾಮಮಂದಿರ ಹಾಗೂ ಅಯೋಧ್ಯೆ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ ಎಂದು ಸುನಿಲ್ ಕುಮಾರ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಿಂದ ದೂರ ಉಳಿಯಲು ಕಾಂಗ್ರೆಸ್ ನಿರ್ಧಾರ

ಅನ್ನಪೂರ್ಣಿ ಸಿನಿಮಾ ಡೈಲಾಗ್ ವಿರುದ್ಧ ರಾಮಭಕ್ತರ ಆಕ್ರೋಶ..!

ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ನಿಖಿಲ್ ಕುಮಾರ್‌ಗೆ ಆಹ್ವಾನ..

About The Author