- Advertisement -
ಬೆಂಗಳೂರು: ರಾಜಧಾನಿಯ ಹಲವು ಕಡೆ ಇಂದು ಮಧ್ಯಾಹ್ನ 11:50 ರಿಂದ 12 :15 ರ ಒಳಗೆ ಒಂದು ಭಯಾನಕ ಶಬ್ದ ಕೇಳಿ ಬಂದಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರ, ಕೆಂಗೇರಿ, ಜ್ಞಾನಭಾರತಿ, ಹಾಗೂ ಹಲವು ಕಡೆ ಸರಿಸುಮಾರು 11:50 ರಿಂದ 12:15 ರ ಒಳಗೆ ಒಂದು ಭಯಾನಕ ಶಬ್ದ ಕೇಳಿ ಬಂದಿದ್ದು ಅದರಿಂದ ಅಲ್ಲಿನ ಜನ ಭಯ ಭೀತಿಗೊಳಗಾಗಿದ್ದಾರೆ. ಹಾಗೂ ಅಲ್ಲಿನ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸಹ ಈ ಶಬ್ದವನ್ನು ಕೇಳಿ ಭಯ ಗೊಂಡಿದ್ದಾರೆ. ಇದನ್ನು ತಿಳಿದ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಯಾವುದೇ ರೀತಿಯ ಭೂಕಂಪನದ ಮಾಹಿತಿ ಸಿಕ್ಕಿಲ್ಲವೆಂದು ತಿಳಿಸಿದ್ದಾರೆ.ಅದರ ಬಗ್ಗೆ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಶಬ್ದದ ಬಗ್ಗೆ ಕಂಡು ಹಿಡಿಯಲು ಪ್ರಯತ್ನಿಸುತ್ತಾರೆ.
- Advertisement -