Tuesday, October 21, 2025

Latest Posts

ಓಂಕಾರ ಶಕ್ತಿಯ ರಹಸ್ಯ : ಮಂತ್ರಕ್ಕೂ ಜೀವ ಇದೆ: ಶಾಪ ನಿವಾರಿಸೋ ಮಂತ್ರ ಹೇಗಿದೆ?

- Advertisement -

Spiritual: ಪ್ರಶ್ನಾಶಾಸ್ತ್ರ ವಿದ್ವಾನ್, ದೀಪ ಯಕ್ಷಿಣಿ ಆರಾಧಕರಾದ ಸಂತೋಷ್ ಭಟ್ ಗುರೂಜಿ ಈಗಾಗಲೇ ಯಕ್ಷಿಣಿ ಆರಾಧನೆ ಬಗ್ಗೆ ಹಲವು ಮಾಹಿತಿಯನ್ನು ನೀಡಿದ್ದಾರೆ. ಅದೇ ರೀತಿ ಇಂದು ಮಂತ್ರಗಳನ್ನು ಹೇಳುವುದರ ಬಗ್ಗೆ ಮಾಹಿತಿ ನೀಡಿದ್ದಾರೆ.

ಆದಿ ಶಂಕರಾಚಾರ್ಯರು, ಮನುಷ್ಯ ಮಂತ್ರ ಪಠಣೆಯಿಂದ ತಾನು ಬಯಸಿದ್ದನ್ನು ಪಡೆಯಬಹುದು ಎಂದು ಹೇಳಿದ್ದಾರೆ. ದೇವರುಗಳೇ ಮಂತ್ರದ ಅಧೀನದಲ್ಲಿರುತ್ತಾರೆ. ಹಾಗಾಗಿ ನಾವು ಮಂತ್ರ ಹೇಳಿ, ದೇವತೆಗಳನ್ನು ಕೂಡ ಒಲಿಸಿಕೊಳ್ಳಬಹುದು ಎನ್ನಲಾಗಿದೆ. ಆದರೆ ಆಶ್ಚರ್ಯಪಡುವ ವಿಷಯ ಅಂದ್ರೆ, ಮಂತ್ರಕ್ಕೂ ಶಾಪವಿದೆ. ಹಾಗಾಗಿ ನಾವು ಮಂತ್ರ ಪಠಿಸುವ ಮುನ್ನ, ಆ ಶಾಪವನ್ನು ತೆಗೆದು ಹಾಕಿ ಮಂತ್ರ ಹೇಳಬೇಕು.

ಹಾಗೆ ಶಾಪವನ್ನು ತೆಗೆದು ಹಾಕಬೇಕು ಅಂದ್ರೆ, ಗುರುಗಳಿಂದ ಮಂತ್ರ ದೀಕ್ಷೆ ಪಡೆಯಬೇಕು. ಹಾಗೆ ಮಂತ್ರ ದೀಕ್ಷೆ ಪಡೆದು ಮಂತ್ರ ಹೇಳಿದಾಗಲೇ, ಅದರ ಪ್ರಯೋಜನವಾಗುತ್ತದೆ. ಏಕೆಂದರೆ, ದೀಕ್ಷೆ ನೀಡುವಾಗ, ಮಂತ್ರದ ಶಾಪ ತೆಗೆದು, ಅದಕ್ಕೆ ಜೀವ, ಶಕ್ತಿಯನ್ನು ತುಂಬಿಸಲಾಗುತ್ತದೆ. ಬಳಿಕ ಆ ಮಂತ್ರ ಉಚ್ಛರಿಸಲು ಹೇಳಲಾಗುತ್ತದೆ. ಹಾಗೆ ದೀಕ್ಷೆ ಪಡೆದ ಬಳಿಕವೇ ನಾವು ಮಂತ್ರೋಚ್ಛಾರಣೆ ಮಾಡಬೇಕು.

ಇನ್ನು ಮಂತ್ರಕ್ಕೆ ಶಾಪ ಹೇಗೆ ಬಂತು ಎಂಬ ಪ್ರಶ್ನೆಗೆ ಉತ್ತರ, ಪಾರ್ವತಿ ದೇವಿಯಿಂದ ಶಾಪ ಬಂತು ಎನ್ನಲಾಗುತ್ತದೆ. ಇದಕ್ಕೆ ಕಾರಣವೇನು ಅಂದ್ರೆ, ಪ್ರೇತ, ಪಿಶಾಚಿಗಳು, ರಾಕ್ಷಸರೆಲ್ಲ ಮಂತ್ರೋಚ್ಛಾರಣೆ ಮಾಡುವುದನ್ನು ಕಲಿತು, ಮಂತ್ರ ಹೇಳಿ, ದೇವತೆಗಳನ್ನು ಒಲಿಸಿಕೊಳ್ಳುತ್ತಿದ್ದರು. ಮಂತ್ರದಿಂದ ದುರ್ಜನರು ಉದ್ಧಾರವಾಗುವುದನ್ನು ಕಂಡ ಪಾರ್ವತಿ, ಲೋಕ ಕಲ್ಯಾಣಕ್ಕಾಗಿ, ಮಂತ್ರಕ್ಕೆ ಶಾಪ ನೀಡಿದಳು.

ಬರೀ ಮಂತ್ರೋಚ್ಛಾರಣೆ ಮಾಡಿದರೆ, ಅದರಿಂದ ಯಾವುದೇ ಪ್ರಯೋಜನವಾಗದಿರಲಿ. ಅದಕ್ಕೆ ಜೀವ ನೀಡಬೇಕು ಅಂದ್ರೆ, ದೀಕ್ಷೆ ಪಡೆಯಲೇಬೇಕು ಎಂದು ಶಾಪ ನೀಡಿದಳು. ಆದರೆ ರಾಕ್ಷಸರಿಗೆ, ಪ್ರೇತ, ಪಿಶಾಚಿಗಳಿಗೆ ಆ ರೀತಿ ಯಾರೂ ದೀಕ್ಷೆ ನೀಡಲು ಸಾಧ್ಯವಿಲ್ಲದ ಕಾರಣ, ಮಂತ್ರೋಚ್ಛಾರಣೆಯ ಶಕ್ತಿ ಕಡಿಮೆಯಾಯಿತು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss