ಮೇಕೆದಾಟು ಪಾದಯಾತ್ರೆ (Mekedatu hiking) ಕೊರೊನಾ (corona) ಕಾರಣದಿಂದ ಅರ್ಧಕ್ಕೆ ನಿಂತಿತ್ತು. ಈಗ ಕಾಂಗ್ರೆಸ್ ನಾಯಕರ ಪಾದಯಾತ್ರೆಯನ್ನು ಮತ್ತೆ ನಿನ್ನೆಯಿಂದ ಆರಂಭಿಸಿದ್ದಾರೆ. ಜನವರಿ 9 ರಿಂದ ಶುರುವಾಗಿದ್ದ ಮೇಕೆದಾಟು ಪಾದಯಾತ್ರೆ ಅರ್ಧಕ್ಕೆ ನಿಲ್ಲಿಸಲಾಗಿತ್ತು. ರಾಮನಗರದಲ್ಲಿ (ramanagara) ನಿಂತಿದ್ದ ಮೇಕೆದಾಟು ಪಾದಯಾತ್ರೆಗೆ ನಿನ್ನೆ ಚಾಲನೆ ಸಿಕ್ಕಿದೆ. 2ನೇ ಹಂತದ ಪಾದಯಾತ್ರೆ ಮಾರ್ಚ್ (martch) 3ನೇ ತಾರೀಕು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನ (National College College grounds) ತಲುಪಲಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (D. K. Shivakumar) ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಈ ಪಾದಯಾತ್ರೆ ಸಾಗುತ್ತಿದೆ. ನಿನ್ನೆ ರಾಮನಗರದಿಂದ ಶುರುವಾದ ಪಾದಯಾತ್ರೆ ನಿನ್ನೆ ಸಂಜೆ ಬಿಡದಿ (bidadi) ತಲುಪಿ ಅಲ್ಲೇ ವಾಸ್ತವ್ಯ ಹೂಡಿದ್ದರು. ಬಿಡದಿಯಿಂದ ಬೆಂಗಳೂರಿಗೆ ಹೊರಟಿರುವ ಪಾದಯಾತ್ರೆ ಇಂದು ಸಂಜೆ ಕೆಂಗೇರಿ (Kengeri) ತಲುಪಲಿದೆ. ರಾಮನಗರ ತಾಲೂಕಿನ ಬಿಡದಿಯಿಂದ ಬೆಳಿಗ್ಗೆ 9 ಗಂಟೆಗೆ ಪಾದಯಾತ್ರೆ ಹೊರಟಿದೆ. ಇಂದು ಸುಮಾರು 20 ಕಿಲೋಮೀಟರ್ ನಡೆಯುತ್ತಾರೆ. ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಬಾನಂದೂರಿನ ಆಂಜನೇಯ ಸ್ವಾಮಿ ಹಾಗೂ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಮಾಗಡಿ ಮಾಜಿ ಶಾಸಕ ಹೆಚ್ ಸಿ ಬಾಲಕೃಷ್ಣ ಹುಟ್ಟುಹಬ್ಬ (Ex MLA H C Balakrishna’s birthday) ಹಿನ್ನೆಲೆ ಇದೇ ವೇಳೆ ದೇವಸ್ಥಾನದ ಮುಂಭಾಗ ಡಿಕೆಶಿ ಹುಟ್ಟುಹಬ್ಬ ಆಚರಿಸಿದರು. ಬಿಡದಿ ಸರ್ಕಲ್ ಬಳಿ ಡಿಕೆ ಶಿವಕುಮಾರ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಕಾರ್ಯಕರ್ತರು ಮುಗಿಬಿದ್ದ ಘಟನೆ ನಡೆದಿದೆ. ಪಾದಯಾತ್ರೆ ಹಿನ್ನೆಲೆ ಬಿಡದ ಮುಖ್ಯ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜ್ಯಾಮ್ (Traffic jam) ಆಗಿದೆ. ಪಾದಯಾತ್ರೆಗೆ ಬಿಬಿಎಂಪಿ ಅನುಮತಿ ನಿರಾಕರಣೆ ಹಿನ್ನೆಲೆ, ನಮಗೆ ಅನುಮತಿ ನೀಡದಿದ್ದರೂ ಹೋರಾಟ ಮಾಡುತ್ತೇವೆ ಅಂತ ಬಿಡದಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅನುಮತಿ ಸಿಕ್ಕಿದೆ. ಕೊವಿಡ್ ನಿಯಮ ಗಮನದಲ್ಲಿಟ್ಟುಕೊಂಡು ಹೋರಾಟ ಮಾಡುತ್ತಿದ್ದೇವೆ ಅಂತ ಹೇಳಿದರು. ಮಹಿಳಾ ಕಾರ್ಯಕರ್ತೆಯರು ಪಾದಯಾತ್ರೆ ಸಾಗುವ ರಸ್ತೆಯಲ್ಲಿ ರಂಗೋಲಿ ಬಿಡಿಸಿ ಗಮನ ಸೆಳೆದಿದ್ದಾರೆ. ಕಾಂಗ್ರೆಸ್ ಕೈ ಗುರುತು ಸೇರಿದಂತೆ ವಿಭಿನ್ನ ರೀತಿಯ ರಂಗೋಲಿಗಳನ್ನ ಬಿಡಿಸಿ ಕೈ ನಾಯಕರ ಗಮನ ಕಾರ್ಯಕರ್ತೆಯರು ಸೆಳೆದ್ದಿದ್ದರೆ. ಮೇಕೆದಾಟು ಯೋಜನೆಗಾಗಿ ನಾವೂ ನಿರಂತರ ಹೋರಾಟ ಮಾಡ್ತಿವಿ. ನಾನೊಬ್ಬ ಬೆಂಗಳೂರಿನವಳಾಗಿ ನನಗೆ ಇದು ತುಂಬಾ ಮುಖ್ಯ ಎಂದು ಕುಸುಮ ರವಿ ತಿಳಿಸಿದ್ದಾರೆ. ಬಿಜೆಪಿಯವರು ಮೇಕೆದಾಟು ಯೋಜನೆ ಮಾಡದೇ ಕಾಲಹರಣ ಮಾಡ್ತಿದ್ದಾರೆ. ನಮ್ಮ ನೀರಿಗಾಗಿ ನಾವೂ ಹೋರಾಟ ಮಾಡುತ್ತಿದ್ದೇವೆ. ಬಿಜೆಪಿಯವರು ಬರೀ ಟೀಕೆ ಮಾಡೋದ್ರಲ್ಲಿ ಕಾಲ ಕಳೆಯೋದು ಬಿಟ್ಟು ಯೋಜನೆ ಜಾರಿಮಾಡಲಿ ಎಂದು ಹೇಳಿದ್ದಾರೆ.