Monday, March 31, 2025

Latest Posts

ಬೆಲೆ ಏರಿಕೆ ಎಂಬ ಬಯಸದ ಭಾಗ್ಯವನ್ನು ರಾಜ್ಯ ಸರ್ಕಾರ ಜನರಿಗೆ ನೀಡುತ್ತಿದೆ: ಮಹೇಶ್ ಟೆಂಗಿನಕಾಯಿ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಶಾಸಕ ಮಹೇಶ್ ಟೆಂಗಿನಕಾಯಿ, ವಿದ್ಯುತ್ ಮತ್ತು ಹಾಲಿನ ದರ ಏರಿಕೆ ವಿರುದ್ಧ ಕಿಡಿಕಾರಿದ್ದಾರೆ.

ಕಾಂಗ್ರೆಸ್ ಸರ್ಕಾರ ಜನ ಬಯಸದಿರುವ ಭಾಗ್ಯವನ್ನು ನೀಡುತ್ತಿದೆ. ಐದು ಗ್ಯಾರಂಟಿಗಳ ಜತೆಗೆ ಬಯಸದೇ ಕೇಳದಿರುವ ಬೆಲೆ ಏರಿಕೆ ಗ್ಯಾರಂಟಿ ನೀಡುತ್ತಿದೆ. ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ತುಂಬುತ್ತಿದೆ. ಆದರೆ ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯಲ್ಲಿಯೇ ಬ್ಯೂಸಿಯಾಗಿದೆ. 6ನೆ ಭಾಗ್ಯವಾಗಿ ವಿದ್ಯುತ್ ಬಿಲ್ ಏರಿಕೆ ಮಾಡಿದೆ. 7ನೇ ಭಾಗ್ಯವಾಗಿ ಹಾಲಿನ ದರ 4 ರೂಪಾಯಿ ಹೆಚ್ಚಳ ಮಾಡಿದೆ. 8ನೇ ಗ್ಯಾರಂಟಿಯಾಗಿ ಅಲ್ಕೊಹಾಲ್ ದರ ಏರಿಕೆ ಮಾಡಿದೆ ಎಂದು ಮಹೇಶ್ ಟೆಂಗಿನಕಾಯಿ ಕಿಡಿಕಾರಿದ್ದಾರೆ.

ಹೀಗೆ ಎಲ್ಲ ಕ್ಷೇತ್ರದಲ್ಲಿಯು ಬೆಲೆ ಏರಿಕೆ ಮಾಡಲಾಗಿತ್ತಿದೆ. 5 ಪ್ಲಸ್ 5 ಎಡಿಷನಲ್ ಗ್ಯಾರಂಟಿಯನ್ನು ರಾಜ್ಯ. ಸರ್ಕಾರ ಜನರಿಗೆ ನೀಡುತ್ತಿದೆ. ಈ ಸರ್ಕಾರಕ್ಕೆ ನಾಚಿಕೆ ಮಾನಾ ಮರ್ಯಾದೆ ಇಲ್ಲಾ. ಸುಳ್ಳು ಆಶ್ವಾಸನೆ ನೀಡುವುದರಲ್ಲಿ ಕಾಂಗ್ರೆಸನವರು ನಿಸ್ಸೀಮರು. ಒಂದು ಕಡೆ ಫ್ರೀ ಅನ್ನೋದು ಮತ್ತೊಂದು ಕಡೆ ಬೆಲೆ ಏರಿಕೆಯ ಮೂಲಕ ವಸೂಲಿ ಮಾಡೋದು ಕೈ ಸರ್ಕಾರದ ತಂತ್ರವಾಗಿದೆ. ಕಾಂಗ್ರೆಸ್ ಸರ್ಕಾರದ ಈ ಬೆಲೆಗಳ ಏರಿಕೆ ನಡೆಯನ್ನು ಖಂಡಿಸುತ್ತದೆ. ಅನಿವಾರ್ಯತೆ ಬಂದಲ್ಲಿ ಬಿಜೆಪಿ ಪಕ್ಷ ಇದರ ವಿರುದ್ಧ ಹೋರಾಟಕ್ಕೂ ಇಳಿಯಕು ಸಿದ್ಧವಾಗಿದೆ ಎಂದು ಮಹೇಶ್ ಟೆಂಗಿನಕಾಯಿ ಎಚ್ಚರಿಕೆ ನೀಡಿದ್ದಾರೆ.

ನಾಲ್ಕು ರೂಪಾಯಿ ಹಾಲಿನ ದರ ಏರಿಸುವ ಮೂಲಕ ಮದ್ಯಮ ಹಾಗೂ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲದ ಕೈ ಸರ್ಕಾರ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿರೋ ಜನರಿಗೆ ಈಗ ಎಲ್ಲವೂ ಅರ್ಥವಾಗುತ್ತಿದೆ. ಜನ ಮನಸ್ಸನಲ್ಲಿಯೇ ಈ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ ಎಂದರು.  ಬಿಜೆಪಿಯಿಂದ ವಿಜಯಪುರ ಶಾಸಕ ಬಸನಗೌಡಾ ಪಾಟೀಲ್ ಯತ್ನಾಳ ವಿಚಾರದ ಬಗ್ಗೆ ಮಾತನಾಡಲು ಮಹೇಶ್ ಟೆಂಗಿನಕಾಯಿ ನಿರಾಕರಿಸಿದ್ದಾರೆ.

- Advertisement -

Latest Posts

Don't Miss