Shivamogga News: ಶಿವಮೊಗ್ಗದಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಮಾಜಿ ಶಾಸಕ ಸಿ.ಟಿ.ರವಿ, ಸಿಎಂ ಸಿದ್ದರಾಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.
ಅನ್ನಭಾಗ್ಯ ಅಕ್ಕಿ ಸರಬರಾಜು ಮಾಡುವ ಲಾರಿ ಮಾಲೀಕರಿಗೆ ಸರ್ಕಾರ ಸರಿಯಾಗಿ ಹಣ ನೀಡದ ಹಿನ್ನೆಲೆ, ಆ ಯೋಜನೆಯನ್ನೇ ಸ್ಥಗಿತಗ“ಳಿಸಲಾಗಿದೆ. ಅಂಗೈ ಹುಣ್ಣಿಗೆ ಕನ್ನಡಿ ಏಕೆ ಅನ್ನೋ ಹಾಗೆ, ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ ಅನ್ನೋದಕ್ಕೆ ಇನ್ನೇನು ಸಾಕ್ಷಿ ಬೇಕು ಅಂತಾ ರವಿ ಪ್ರಶ್ನಿಸಿದ್ದಾರೆ.
ಅಲ್ಲದೇ, ಅಂಗನವಾಡಿ ಕಾರ್ಯಕರ್ತೆಯರಿಗೆ, ಆಶಾ ಕಾರ್ಯಕರ್ತೆಯರಿಗೆ ಸಮಯಕ್ಕೆ ಸರಿಯಾಗಿ ಗೌರವ ಧನ ನೀಡಲು ಸಾಧ್ಯವಾಗುತ್ತಿಲ್ಲ. ಶಾಲೆ ಪ್ರಾರಂಭವಾಗಿ ತಿಂಗಳಾಯಿತು. ಆದರೆ ಶಾಲಾ ಮಕ್ಕಳಿಗೆ ಶೂ, ಸಾಕ್ಸು ನೀಡುವ ಯೋಗ್ಯತೆ ಇಲ್ಲ. ಅದಕ್ಕಾಗಿ ಈಗ ಚಂದಾ ಎತ್ತರು ರೆಡಿಯಾಗಿದ್ದಾರಂತೆ. ಇದು ಪರಿಸ್ಥಿತಿ. ಖಜಾನೆ ಖಾಲಿಯಾಗಿದೆ ಅನ್ನೋದಕ್ಕಿಂತ, ಲೂಟಿಯಾಗುತ್ತಿದೆ ಅನ್ನೋ ಅನುಮಾನ ಬರುತ್ತಿದೆ ಎಂದು ರವಿ ಹೇಳಿದ್ದಾರೆ.
ಅತಿಥಿ ಶಿಕ್ಷಕರು ಪ್ರತಿಭಟಿಸುತ್ತಿದ್ದಾರೆ. ಆಶಾಕಾರ್ಯಕರ್ತೆಯರು ಹೋರಾಡುತ್ತಿದ್ದಾರೆ. ಲಾರಿ ಮಾಲೀಕರು, ಕಾರ್ಮಿಕರು ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿನಲ್ಲೇ ಹೋರಾಟ ನಡೆಯುತ್ತಿದೆ ಎಂದು ರವಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

