Friday, September 20, 2024

Latest Posts

ಮನಮುಟ್ಟುವಂತಿದೆ ಅಪ್ಪ ಮಗಳ ಕೈ ಹಿಡಿದ ಕಥೆ….!

- Advertisement -

Turkey-syria-Earthquake

ಬೆಂಗಳೂರು(ಫೆ.10): ಟರ್ಕಿ ಸಿರಿಯಾದಲ್ಲಿ ನಡೆದ ಭೂಕಂಪನ ಎಂಥಹ ಹೃದಯವನ್ನೂ ಕೂಡ ನಲುಗಿಸುತ್ತದೆ. ಇಂತಹ ಭೀಕರ ದುರಂತವನ್ನು ಎಂದೂ ಕಾಣದ ಟರ್ಕಿ ಜನ ಪ್ರತೀ ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ, ಈ ಸಂದರ್ಭದಲ್ಲಿ ಹಲವಾರು ಕರುಣಾಜನಕ ಕಥೆಗಳು ಕರುಳು ಹಿಂಡುತ್ತಿವೆ. ಇದೀಗ ಮತ್ತೊಂದು ಅಂತಹದ್ದೇ ಒಂದು ಮನಕಲಕುವ ಸನ್ನಿವೇಶ ಟರ್ಕಿಯಲ್ಲಿ ಕಾಣಸಿಕ್ಕಿದೆ.

ತನ್ನ 15ರ ಹರೆಯದ ಮಗಳು ಭೂಕಂಪದಲ್ಲಿ ಸಾವಿಗೀಡಾಗಿದ್ದಾಳೆ.ಅವಶೇಷಗಳಡಿಯಲ್ಲಿ ಆಕೆಯ ದೇಹ ಸಿಕ್ಕಿಬಿದ್ದಿದ್ದು, ಆಕೆಯ ಕೈ ಮಾತ್ರ ಹೊರಗೆ ಕಾಣತ್ತದೆ. ಆ ಬಾಲಕಿಯ ಅಪ್ಪ ಆಕೆಯ ಕೈ ಹಿಡಿದು ಕೂತಿದ್ದಾನೆ. ಮೆಸುಟ್ ಹ್ಯಾನ್ಸರ್ ಎಂಬಾತ ಇಟ್ಟಿಗೆಗಳ ರಾಶಿಯ ಮೇಲೆ ಹೆಪ್ಪುಗಟ್ಟುವ ಚಳಿಯಲ್ಲಿ ಒಬ್ಬಂಟಿಯಾಗಿ ಕುಳಿತುಕೊಂಡಿದ್ದಾರೆ. ಅವರ ಮನೆ ನೆಲಸಮವಾಗಿದೆ. ಅವರ ಮಗಳು ಇರ್ಮಾಕ್ ಸತ್ತಿದ್ದಾಳೆ. ಆದರೆ ಅವನು ಅವಳ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು, ನೀ ಹೋಗ ಬೇಡ ಅನ್ನುವ ಫೋಟೋ ಇದೀಗ ಸೋಷಿಯಲ್  ಮೀಡಿಯಾದಲ್ಲಿ ಮನಮುಟ್ಟುವಂತಿದೆ.

ಮೊದಲ ಭೂಕಂಪ ಸಂಭವಿಸಿದಾಗ ಹಾಸಿಗೆಯಲ್ಲಿ ಮಲಗಿದ್ದ ಮಗಳು ಭೂಕಂಪಕ್ಕೆ ಬಲಿಯಾಗಿದ್ದಾಳೆ. ಅಲ್ಲಿ ರಕ್ಷಣಾ ತಂಡಗಳು ಇರಲಿಲ್ಲ. ಬದುಕುಳಿದವರು ತಮ್ಮ ಪ್ರೀತಿಪಾತ್ರರನ್ನು ಹುಡುಕಲು ಅವಶೇಷಗಳನ್ನು ಸರಿಸುತ್ತಿದ್ದರು. ಅಲ್ಲಿ ರಾಶಿ ಬಿದ್ದಿದ್ದು ಅವರ ಮನೆಗಳ ತುಣುಕುಗಳಾಗಿತ್ತು. ಛಿದ್ರಗೊಂಡ ಬಾಲ್ಕನಿಗಳ ಮೇಲೆ ಬೆಡ್‌ಫ್ರೇಮ್‌ಗಳು ಬಿದ್ದಿವೆ. ಹರಿದ ಬಟ್ಟೆಗಳು ಮತ್ತು ಆಟಿಕೆಗಳು ಕಳೆದುಹೋದ ಜೀವಗಳ ಕತೆ ಹೇಳುತ್ತಿತ್ತು.

ಒಂದು ಶತಮಾನದಲ್ಲಿ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಶಕ್ತಿಶಾಲಿ ಭೂಕಂಪದಲ್ಲಿ ಸುಮಾರು 20,000 ಜನರು ಸಾವಿಗೀಡಾಗಿದ್ದಾರೆ. ಮಗಳ ಕೈ ಹಿಡಿದು ಮೌನವಾಗಿ ರೋದಿಸುತ್ತಿರುವ ಅಪ್ಪನ ಚಿತ್ರವನ್ನು ಅಂಕಾರಾದ AFP ಯ ಹಿರಿಯ ಛಾಯಾಗ್ರಾಹಕ ಅಡೆಮ್ ಅಲ್ಟಾನ್ ಸೆರೆಹಿಡಿದಿದ್ದಾರೆ. AFP ಯೊಂದಿಗೆ 15 ವರ್ಷಗಳು ಸೇರಿದಂತೆ 40 ವರ್ಷಗಳ ಕಾಲ ಫೋಟೊಗ್ರಾಫರ್ ಆಗಿ ಕೆಲಸ ಮಾಡಿದ ಅಲ್ಟಾನ್ ಅವರು ಛಾಯಾಚಿತ್ರವು ಟರ್ಕಿಯ ನೋವನ್ನು ಪ್ರತಿನಿಧಿಸುತ್ತದೆ ಎಂದು ಅಂದುಕೊಂಡಿದ್ದರು. ಈ ಫೋಟೊ ಈಗ ವೈರಲ್ ಆಗಿದೆ.ಆಲ್ಟಾನ್ ಗೆ ಹಲವಾರು ಮಂದಿ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. “ಈ ಚಿತ್ರವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹಲವರು ನನಗೆ ಹೇಳಿದರು” ಎಂದು ಅಲ್ಟಾನ್ ಧನ್ಯತಾಭಾವದಿಂದ ಹೇಳಿದ್ದಾರೆ.

- Advertisement -

Latest Posts

Don't Miss