Spiritual: ಸುದರ್ಶನ ಚಕ್ರ ಮತ್ತು ಗರುಡನ ಅಹಂಕಾರ ಮುರಿದ ಹನುಮಂತನ ಕಥೆ

Spiritual: ಶ್ರೀವಿಷ್ಣುವಿನ ಕೈಯಲ್ಲಿರುವ ಸುದರ್ಶನ ಚಕ್ರ ಮತ್ತು ವಿಷ್ಣುವಿನ ವಾಹನವಾದ ಗರುಡ ದೇವನಿಗೆ ತಾವು ಅತ್ಯುತ್ತಮರು ಎಂಬ ಅಹಂ ಇರುತ್ತದೆ. ಆ ಅಹಂನ್ನು ರಾಮಬಂಟ ಹನುಮ ಮುರಿಯುತ್ತಾರೆ. ಅದು ಹೇಗೆ..? ಏನು ಕಥೆ ಅಂತಾ ತಿಳಿಯೋಣ ಬನ್ನಿ.

ಒಮ್ಮೆ ಶ್ರೀವಿಷ್ಣು ಗರುಡ ದೇವನನ್ನು ಕುರಿತು. ನಾನು ಹನುಮನ ಬಳಿ ಮಾತನಾಡಬೇಕು. ಹನುಮನನ್ನು ಕರೆದು ತಾ ಎಂದು ಹೇಳಿದ. ಅದಕ್ಕೆ ಒಪ್‌ಪಿಗೆ ಸೂಚಿಸಿದ ಗರುಡ ದೇವ, ಹನುಮನನ್ನು ಕರೆತರಲು ಹೊರಟ. ಆದರೆ ಹನುಮನ ಬಳಿ ಹೋದಾಗ, ಹನುಮನಿಗೆ ವಯಸ್ಸಾದಂತೆ ತೋರುತ್ತಿತ್ತು. ವಯಸ್ಸಾದ ಮೇಲೆ ದೇಹದಲ್ಲಿ ಶಕ್ತಿ ಇರುವುದಿಲ್ಲ, ಇವರನ್ನು ನಾನೇ ಹೊತ್ತುಕೊಂಡು ಹೋಗುತ್ತೇನೆ ಎಂದು ಗರುಡದೇವ ಮನಸ್ಸಿನಲ್ಲೇ ಎಣಿಸಿದ.

ಏಕೆಂದರೆ, ಗರುಡನಿಗೆ ತಾನೇ ಇಡೀ ಪ್ರಪಂಚದಲ್ಲಿ ಎಲ್ಲರಿಗಿಂದ ವೇಗವಾಗಿ ಚಲಿಸುವ ಪಕ್ಷಿ ಎಂಬ ಅಹಂ ಇತ್ತು. ಹನುಮನ ಬಳಿ ಬಂದ ಗರುಡದೇವ, ಹನುಮದೇವ ನಿಮ್ಮನ್ನು ಶ್ರೀ ವಿಷ್ಣು ಆಹ್ವಾನಿಸಿದ್ದಾರೆ ಎಂದು ಹೇಳುತ್ತಾನೆ. ಆಗಲಿ, ನೀವು ಹೋಗಿ, ನಾನು ಬರುತ್ತೇನೆ ಎಂದು ಹನುಮದೇವ ಹೇಳುತ್ತಾರೆ. ಆಗ ಗರುಡದೇವ, ನಿಮಗೆ ನಡೆಯಲು ಶಕ್ತಿ ಇಲ್ಲ, ನಾನೇ ಕರೆದುಕೊಂಡು ಹೋಗುತ್ತೇನೆ ಬನ್ನಿ ಎನ್ನುತ್ತಾನೆ. ಆಗಲೂ ಹನುಮ, ನೀವು ಹೋಗಿರಿ, ನಾನೇ ಬರುತ್ತೇನೆ ಎನ್ನುತ್ತಾರೆ.

ಗರುಡ ತಮಾಷೆಯಾಗಿ ನಕ್ಕು, ಶ್ರೀ ವಿಷ್ಣುವಲ್ಲಿಗೆ ಹೋಗುತ್ತಾನೆ. ಗರುಡ ಹೋಗಿ ಶ್ರೀ ವಿಷ್ಣುವಿನ ಬಳಿ ತಲುಪವಷ್ಟರಲ್ಲಿ, ಹನುಮ ಶ್ರೀವಿಷ್ಣುವಿನ ಬಳಿ ಕುಳಿತು ಮಾತನಾಡುತ್ತಿರುತ್ತಾನೆ. ಆಗ ಗರುಡನಿಗೆ, ಹನುಮಂತ ಇಷ್ಟು ಬೇಗ ಒಳಗೆ ಬಂದು ಕುಳಿತರೆಂದರೆ, ಶ್ರೀವಿಷ್ಣುವನ್ನು ಕಾಯುವ ಕಾವಲುಗಾರ, ಸುದರ್ಶನ ಚಕ್ರ ಇವರನ್ನು ಒಳಗೆ ಹೇಗೆ ಬಿಟ್ಟನು ಎಂಬ ಯೋಚನೆ ಬರುತ್ತದೆ.

ಆಗ ಶ್ರೀವಿಷ್ಣು ಹನುಮನಲ್ಲಿ ತನ್ನ ಸುದರ್ಶನ ಚಕ್ರ ಎಲ್ಲಿದ್ದಾನೆ ಎಂದು ಕೇಳುತ್ತಾನೆ. ಹನುಮ ತನ್ನ ಬಾಯಿ ತೆಗೆದಾಗ, ಬಾಯಿಯಿಂದ ಸುದರ್ಶನ ಚಕ್ರ ಹೊರಗೆ ಬರುತ್ತದೆ. ಅದನ್ನು ನೋಡಿ ಗರುಡ ದೇವ ಆಶ್ಚರ್ಯ ಪಡುತ್ತಾನೆ. ಇದು ಹೇಗೆ ಸಾಧ್ಯ ಎಂದು ಕೇಳಿದಾಗ, ಸುದರ್ಶನ ಚಕ್ರಕ್ಕೆ ತಾನು ಎಲ್ಲಗಿಂತ ಬಲಿಷ್ಠನೆಂಬ ಅಹಂ ಇರುತ್ತದೆ. ಹಾಗಾಗಿ ಹನುಮನೊಂದಿಗೆ ಪೈಪೋಟಿಗಿಳಿದು, ಸೋತು ಹನುಮನ ಬಾಯಿ ಸೇರಿರುತ್ತಾನೆ ಎಂದು ಗೊತ್ತಾಗುತ್ತದೆ. ಹೀಗೆ ಹನುಮ, ಗರುಡ ಮತ್ತು ಸುದರ್ಶನ ಚಕ್ರದ ಅಹಂಕಾಾರವನ್ನು ಮುರಿಯುತ್ತಾನೆ.

About The Author