Wednesday, September 24, 2025

Latest Posts

ಬೆಂಗಳೂರಿನಲ್ಲಿ 30ಕ್ಕೂ ಹೆಚ್ಚು ಕಾರ್‌ಗಳ ಗ್ಲಾಸ್ ಪುಡಿಗೈದಿದ್ದ ಪುಂಡರು ಅರೆಸ್ಟ್

- Advertisement -

Bengaluru News: ಬೆಂಗಳೂರು: ಲಗ್ಗೆರೆ (Laggere) ಬಳಿ ಸುಮಾರು 30 ಕಾರುಗಳ (Car) ಗಾಜನ್ನು ಪುಡಿ ಮಾಡಿದ್ದ ಆರು ಜನ ಆರೋಪಿಗಳನ್ನು ರಾಜಗೋಪಾಲನಗರ ಪೊಲೀಸರು (Police) ಬಂಧಿಸಿದ್ದಾರೆ.

ಏರಿಯಾದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಲು ಕಿಡಿಗೇಡಿಗಳ ಗುಂಪು ಮುಖವಾಡ ಧರಿಸಿ ಬೈಕ್‍ನಲ್ಲಿ ಬಂದು ರಾಡ್ ಮತ್ತು ಲಾಂಗ್‍ನಿಂದ ಕಾರಿನ ಗಾಜನ್ನು ಪುಡಿಗೈದಿದ್ದರು. ಬಳಿಕ ಜನ ಹೊರಗೆ ಬರುತ್ತಿದ್ದಂತೆ ಕಿಡಿಗೇಡಿಗಳು ಅಲ್ಲಿಂದ ಪರಾರಿಯಾಗಿದ್ದರು. ಬಂಧಿತ ಆರೋಪಿಗಳನ್ನು ಕಳ್ಳ ಮಣಿ ಹಾಗೂ ರಾಬರಿ ಸೋಮನ ಗ್ಯಾಂಗ್‍ನ ಸಹಚರರು ಎಂದು ತಿಳಿದು ಬಂದಿದೆ.

ಆರೋಪಿಗಳು ಗಾಂಜಾ ಹಾಗು ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಕೃತ್ಯದ ಬಳಿಕ ಆರೋಪಿಗಳು ಬೇರೆ ಬೇರೆಯಾಗಿ ತಲೆ ಮರೆಸಿಕೊಂಡಿದ್ದರು. ಘಟನೆ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರು ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಘಟನೆ ಬಳಿಕ ಸ್ಥಳಕ್ಕೆ ಶಾಸಕ ಮುನಿರತ್ನ ಅವರು ಭೇಟಿ ನೀಡಿ ಪರಿಶೀಲಿಸಿದ್ದರು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದರು.

ಕರ್ನಾಟಕದ ಕಲೆಕ್ಷನ್ ಕಿಂಗ್ ಅಪ್ಪ, ಕರ್ನಾಟಕದ ಕಲೆಕ್ಷನ್ ಪ್ರಿನ್ಸ್ ಮಗ: ಹೆಚ್.ಡಿ.ಕುಮಾರಸ್ವಾಮಿ

ನಮ್ಮ ಹುಡುಗರ ಆಟವು ಚಂದ, ಗೆಲವಿನ ಹಠವೂ ಬಲು ಚಂದ: ಕ್ರಿಕೇಟ್‌ ತಂಡಕ್ಕೆ ಅಭಿನಂದಿಸಿದ ಡಿಕೆಶಿ

ಧಾರವಾಡದಲ್ಲಿ ಬಿಜೆಪಿ ಭಿನ್ನಮತ, ಆಹ್ವಾನವಿದ್ದರೂ ಕಾರ್ಯಕ್ರಮಕ್ಕೆ ಗೈರಾದ ನಾಯಕರು

- Advertisement -

Latest Posts

Don't Miss