Wednesday, September 11, 2024

Latest Posts

ಈ ಬಾರಿಯ ಬಿಗ್‌ಬಾಸ್-೯ರ ಸ್ಪರ್ಧಿಗಳ ಟ್ರೆಂಡಿಂಗ್ ಲಿಸ್ಟ್..!

- Advertisement -

ಬಿಗ್‌ಬಾಸ್-9 ಕ್ಕೆ ಎಂಟ್ರಿ ಕೊಡಲಿದ್ದಾರಾ ಸೆಲೆಬ್ರೆಟೀಸ್..?

ಕನ್ನಡ ಕಿರುತೆರೆಯಲ್ಲಿ ಹಲವಾರು ರಿಯಾಲಿಟಿ ಶೋಗಳಿವೆ. ಆದರೆ ಮನೆಯಲ್ಲಿರೋ ಪ್ರತಿಯೊಬ್ಬ ಸದಸ್ಯರೂ ಒಟ್ಟಿಗೆ ಕೂತು ನೋಡೋ ಒನ್ ಅಂಡ್ ಓನ್ಲೀ ಶೋ ಅಂದ್ರೆ ಅದು ಬಿಗ್‌ಬಾಸ್ ರಿಯಾಲಿಟಿ ಶೋ. ಎಂದಿನAತೆ ಈ ಬಾರಿಯೂ ಬಿಗ್‌ಬಾಸ್ ಸೀಸನ್ ಮತ್ತೊಂದು ಶುರುವಾಗೋದಕ್ಕೆ ಸಜ್ಜಾಗ್ತಿದೆ. ಸೀಸನ್ 1 ರಿಂದ ಶುರುವಾಗಿ  ಸೀಸನ್ 8 ರವರೆಗೂ ಅದ್ಧೂರಿಯಾದ ಜರ್ನಿ ಮಾಡಿರೋ ಬಿಗ್‌ಬಾಸ್ ಈಗ ಒಂಬತ್ತರ ಮೆಟ್ಟಿಲೇರೋದಕ್ಕೆ ರೆಡಿಯಾಗ್ತಿದೆ.

ಕಳೆದ ಸೀಸನ್‌ನಲ್ಲಿ ಕರೋನ ಕಾರಣದಿಂದ ಎಲ್ಲಾ ಅದಲು ಬದಲಾದರೂ ಪ್ರೇಕ್ಷಕರನ್ನ ಮನರಂಜಿಸುವುದರಲ್ಲಿ ಹಿಂದೇಟಾಕಲಿಲ್ಲ ಬಿಗ್‌ಬಾಸ್ ಕನ್ನಡ ಶೋ. ಅದೇ ರೀತಿ ಈ ಬಿಗ್‌ಬಾಸ್-9 ನಲ್ಲಿ ಇದುವರೆಗೂ ಇದ್ದ ರೀತಿಗಿಂತ ಸಾಕಷ್ಟು ಬದಲಾವಣೆ ಮಾಡುವ ನಿಟ್ಟಿನಲ್ಲಿ ಬಿಗ್‌ಬಾಸ್ ಟೀಂ ಎಫರ್ಟ್ ಹಾಕ್ತಿದೆ. ಸದ್ಯ ಬಿಗ್‌ಬಾಸ್ ಹೌಸ್ ಕೂಡ ರೆಡಿಯಾಗ್ತಿರೋದ್ರ ಬಗ್ಗೆ ಫೋಟೋ ಹಂಚಿಕೊAಡಿರುವ ಪರಮೇಶ್ವರ್ ಗುಂಡ್ಕಲ್ ಬಿಗ್ಬಾಸ್ ಅಪ್ಡೇಟ್‌ಗಳನ್ನ ಇನ್ನು ಬ್ಯಾಕ್ ಟು ಬ್ಯಾಕ್ ಕೊಡಲಿದ್ದಾರೆ.

ಈ ಬಾರಿ ಬಿಗ್‌ ಬಾಸ್‌ ಪ್ರಿಯರಿಗೆ ಸಿಹಿ ವಿಚಾರವಿದೆ. ಎರಡೆರಡು ಬಿಗ್‌ ಬಾಸ್‌ ಕನ್ನಡದಲ್ಲಿ ಬರಲಿವೆ. ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ನೋಡಲು ಜನರು ಕಾದು ಕುಳಿತಿರುತ್ತಾರೆ. ಬಿಗ್ ಬಾಸ್ ಸೀಸನ್ 9 ಗಾಗಿ ಪ್ರೇಕ್ಷಕರು ಕಾತುರರಾಗಿದ್ದಾರೆ. ಅದಕ್ಕೂ ಮುನ್ನ ಮಿನಿ ಬಿಗ್ ಬಾಸ್ ಶುರುವಾಗಲಿದ್ದು, ಇದು ಪ್ರೇಕ್ಷಕರ ಸಂತಸಕ್ಕೆ ಕಾರಣವಾಗಿದೆ. ಈ ವರ್ಷವೂ ಬಿಗ್‌ಬಾಸ್‌ ಮಿನಿ ಸೀಸನ್ ಇರಲಿದೆ ಎಂಬ ವಿಚಾರ ಹೊರಬಿದ್ದಿದೆ. ಕಲರ್ಸ್‌ ವಾಹಿನಿಯಲ್ಲಿ ಬಿಗ್‌ ಬಾಸ್‌ ಪ್ರಸಾರ ಆರಂಭವಾಗುವ ಮೊದಲೇ ವೂಟ್‌ ಸೆಲೆಕ್ಟ್ ನಲ್ಲಿ ಬಿಗ್‌ ಬಾಸ್‌ ಮಿನಿ ಸೀಸನ್‌ ಪ್ರಸಾರವಾಗಲಿದೆ. ಬಿಗ್‌ ಬಾಸ್‌ ಮಿನಿ ಸೀಸನ್‌ 42 ದಿನಗಳ ಕಾಲ ಪ್ರಸಾರವಾಗಲಿದೆ.

ಈ ಬಿಗ್‌ ಬಾಸ್‌ ಮಿನಿ ಸೀಸನ್‌ ಮುಗಿದ ಬಳಿಕ ಬಿಗ್‌ಬಾಸ್ ಸೀಸನ್ 9 ಶುರುವಾಗಲಿದೆ.  ಸೋಶಿಯಲ್ ಮೀಡಿಯಾ  ಸ್ಟಾರ್‌ಗಳು, ಇನ್‌ಫ್ಲುಯೆನ್ಸರ್‌ಗಳು ಈ ಬಾರಿ ಬಿಗ್‌ ಬಾಸ್‌ನಲ್ಲಿರಲಿದ್ದಾರೆ. ವೂಟ್ ಸೆಲೆಕ್ಟ್‌ನಲ್ಲಿ 15 ಸ್ಪರ್ಧಿಗಳನ್ನ ಆಯ್ಕೆ ಮಾಡಿಕೊಳ್ಳಲಾಗುತ್ತೆ. ಇಲ್ಲಿ ದೊಡ್ಡ ದೊಡ್ಡ ಸೆಲಿಬ್ರಿಟಿಗಳ ಬದಲು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡಿದವರು, ಇನ್‌ಫ್ಲುಯೆನ್ಸರ್‌ಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಈ ಪೈಕಿ ಯಾರು ಜನರಿಗೆ ಹೆಚ್ಚು ಮನರಂಜನೆ ನೀಡ್ತಾರೋ, ಯಾರು ಜನರನ್ನ ಹೆಚ್ಚು ಸೆಳೆಯುವ ಇಬ್ಬರನ್ನು ಬಿಗ್‌ಬಾಸ್‌ ಮೈನ್ ಶೋಗೆ ಸೆಲೆಕ್ಟ್‌ ಮಾಡಲಿದ್ದಾರಂತೆ. ಈ ಮಿನಿ ಬಿಗ್‌ ಬಾಸ್‌ ಸೀಸನ್‌ನಲ್ಲಿ ಆಯ್ಕೆಯಾದ ಒಂದಿಬ್ಬರು ಸ್ಪರ್ಧಿಗಳು, ಕಲರ್ಸ್‌ ವಾಹಿನಿಯಲ್ಲಿ ಪ್ರಸಾರವಾಗುವ ಪೂರ್ಣ ಪ್ರಮಾಣದ ಸೀಸನ್‌ನಲ್ಲಿ ಭಾಗವಹಿಸುವ ಅವಕಾಶ ಪಡೆಯುತ್ತಾರೆ.

ಇವ್ರಿದ್ರೆ ಡೈಲಿ ಬಿಗ್ ಬಾಸ್ ನೋಡೋದು ಮಿಸ್ಸೇ ಇಲ್ವಂತೆ..!

ಪ್ರಸ್ತುತ ಸಾಮಾಜಿಕ ಮಾಧ್ಯಮಗಳ ಮೂಲಕ ಜನರಿಗೆ ಚಿರ ಪರಿಚಿತರಾಗಿರುವ ಅಹೋರಾತ್ರ, ಲಾಯರ್ ಜಗದೀಶ್, ಚರಣ್, ಶಿವ ಪುತ್ರ, ರೂರಲ್‌ ರಂಜನ್‌, ಡ್ರೋನ್‌ ಪ್ರತಾಪ್‌, ವರ್ಷಿಣಿ, ದೀಪಿಕಾ ಪಿಲ್ಲಿ, ನವ್ಯಾ ಸ್ವಾಮಿ, ಧನ್ಶು, ಚಿತ್ರಾ ರೈ ಸೇರಿದಂತೆ ಇನ್ನೂ ತಮ್ಮ ಆಕ್ಟಿಂಗ್‌, ಡಿಫರಂಟ್‌ ಕಂಟೆಂಟ್‌ ಮೂಲಕ ಜನರನ್ನು ಸೋಶಿಯಲ್‌ ಮೀಡಿಯಾದಲ್ಲಿ ರಂಜಿಸುತ್ತಿರುವ ಜನರ ಪಟ್ಟಿ ಸಿದ್ಧವಾಗಿದ್ದು, ಇನ್ನಷ್ಟೇ ಅಂತಿಮವಾಗಬೇಕಿದೆ. ಈಗಾಗಲೇ ಬಿಗ್‌ ಬಾಸ್‌ ಮಿನಿ ಸೀಸನ್‌ ಸ್ಪರ್ಧಿಗಳ ಆಯ್ಕೆಗೆ ತಂಡವೊಂದು ಕೆಲಸ ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಮಿಂಚಿರುವ ವ್ತಕ್ತಿಗಳ ಜೊತೆಮಾತನಾಡುತ್ತಿದ್ದಾರಂತೆ. ಆದರೆ ಇವರಲ್ಲಿ ಯಾರೆಲ್ಲ ಮಿನಿ ಬಿಗ್‌ ಬಾಸ್‌ನಲ್ಲಿರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಈ ಸ್ಪರ್ಧಿಗಳೆಲ್ಲಾ ಬಿಗ್‌ಬಾಸ್ ಹೌಸ್‌ನಲ್ಲಿದ್ರೆ ಜಸ್ಟ್ ಇಮ್ಯಾಜಿನ್ ಮಾಡ್ಕೊಳಿ ಹೇಗಿರುತ್ತೆ ಅಂತ..ಹೀಗೆ ಈ ಸೋಶಿಯಲ್ ಮೀಡಿಯಾ ಸ್ಟಾರ್ಸ್ ಹಾಗೂ ಟ್ರೆಂಡಿಂಗ್ನಲ್ಲಿರೋರ ಫೋಟೋಸ್‌ಗಳನ್ನ ಅಭಿಮಾನಿಗಳೇ ಪೋಸ್ಟ್ ಮಾಡಿ ಹಾರೈಸ್ತಿದ್ದಾರೆ. ಅಷ್ಟೇ ಅಲ್ಲ ಇವ್ರೆಲ್ಲಾ ಇದ್ರೆ ಎಂಟರ್ಟೈನ್ಮೆಂಟ್ ಫಿಕ್ಸು ಅಂತ ಕಮೆಂಟ್ಸ್ ಮಾಡ್ತಿದ್ದಾರೆ.

- Advertisement -

Latest Posts

Don't Miss