- Advertisement -
ಜಮೀನು ಖಾತೆ ಬದಲಾವಣೆಗಾಗಿ ಲಂಚ ಸ್ವೀಕರಿಸುತ್ತಿದ್ದ, ಗ್ರಾಮ ಆಡಳಿತಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಮಾಚನಹಳ್ಳಿ ವಾಸಿ ಯೋಗೀಶ್, ತಾತನ ಹೆಸರಿನಲ್ಲಿದ್ದ 38 ಗುಂಟೆ ಜಮೀನನ್ನ, ತಂದೆ ಹೆಸರಿಗೆ ಬದಲಾವಣೆ ಮಾಡಿಸಲು ಹೋಗಿದ್ರು. ಇದಕ್ಕಾಗಿ ಮಂಜುನಾಥ್ 10 ಸಾವಿರ ರೂ. ಲಂಚ ಕೇಳಿದ್ರು. ಯೋಗೇಶ್ ಹಣ ನೀಡಿದ್ರು.
ಆದರೂ ಮತ್ತೆ 10 ಸಾವಿರಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಈ ಬಾರಿ ಯೋಗೀಶ್ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಊರ್ಡಿಗೆರೆ ಹೋಬಳಿಯ ಕಂದಾಯ ನಿರೀಕ್ಷಕರ ಕಚೇರಿ ಬಳಿ, ಲಂಚ ತೆಗೆದುಕೊಳ್ಳುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಲೋಕಾಯುಕ್ತ dysp ಸಂತೋಷ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಮಂಜುನಾಥ್‌ರನ್ನ ವಶಕ್ಕೆ ಪಡೆದಿದ್ದಾರೆ.
- Advertisement -

