Thursday, August 7, 2025

Latest Posts

ಏಳು ವಿಧಾನಸಭಾ ಕ್ಷೇತ್ರದ ಮತಯಂತ್ರ ಹಾಸನದ ಸ್ಟ್ರಾಂಗ್ ರೂಂನಲ್ಲಿ ಭದ್ರ

- Advertisement -

ಹಾಸನ: ಈಗಾಗಲೇ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದ ಚುನಾವಣೆ ನಡೆದು ಎಲ್ಲಾ ಮಂತಯಂತ್ರಗಳು ಹಾಸನ ನಗರದ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಿರ್ಮಿಸಲಾಗಿರುವ ಸ್ಟ್ರಾಂಗ್ ರೂಮ್ ನಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಇಡಲಾಗಿದ್ದು, ಮೇ.13ರ ರಂದು ನಡೆಯುವ ಮತ ಏಣಿಕೆ ಕಡೆ ಮತದಾರರು ಲೆಕ್ಕಚಾರದಲ್ಲಿ ತೊಡಗಿದ್ದಾರೆ.

ಶನಿವಾರ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗುವ ಮತ ಏಣಿಕೆಗೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದು, ಸಿಆರ್‌ಪಿ ಸೇನಾ ಪಡೆ ಹಾಗೂ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಭದ್ರವಾಗಿ ಏಳು ವಿಧಾನಸಭಾ ಕ್ಷೇತ್ರದ ಮತಯಂತ್ರವನ್ನು ಇರಿಸಲಾಗಿದೆ. ಸ್ಟ್ರಾಂಗ್ ರೂಂನ ಭದ್ರತೆ ಹಾಗೂ ವ್ಯವಸ್ಥೆಯನ್ನು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಅರ್ಚನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೇ. 13ರಂದು ಮತ ಎಣಿಕೆ ನಡೆಯಲಿದ್ದು, 7 ವಿಧಾನಸಭಾ ಕ್ಷೇತ್ರಗಳಿಗೂ ಪ್ರತ್ಯೇಕವಾದ ಸ್ಟ್ರಾಂಗ್ ರೂಂ ಮತ್ತು ಎಣಿಕೆ ಕೇಂದ್ರವನ್ನು ತೆರೆಯಲಾಗಿದೆ. ಮತ ಎಣಿಕೆ ಕಾರ್ಯಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲಾ ರೀತಿಯ ಸಿದ್ದತೆಯನ್ನು ನಡೆಸಲಾಗಿದೆ.ಮತ ಎಣಿಕೆಗೆ ಸಂಬಂಧಿಸಿದಂತೆ ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಮತ ಏಣಿಕೆ ವೇಳೆ ಫಲಿತಾಂಶವನ್ನು ಪ್ರಕಟಿಸಲು ಧ್ವನಿವರ್ಧಕವನ್ನು ಕಾಲೇಜಿನ ಆವರಣದಲ್ಲಿ ಅಳವಡಿಸಲಾಗಿದೆ.

ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಗೃತ ಕ್ರಮವಾಗಿ ಕಾಲೇಜಿನ ಸುತ್ತಾ-ಮುತ್ತಾ ಸಿಸಿ ಕ್ಯಾಮಾರ ಅಳವಡಿಸಲಾಗಿದೆ. ವಿಡಿಯೋ ವೀಕ್ಷಣೆಯನ್ನು ವೀಕ್ಷಿಸಲು ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸಲಾಗಿದೆ. ಮತ ಏಣಿಕೆ ಮಾಡುವ ಕಾಲೇಜಿನ ಮುಖ್ಯಧ್ವಾರದಲ್ಲಿ ಶಸ್ತ್ರ ಸಜ್ಜಿತ ಭದ್ರತೆಯನ್ನು ಮಾಡಲಾಗಿದೆ. ಕಾಲೇಜಿನ ಆವರಣದ ಸುತ್ತಾ ವಿಶೇಷ ಗಮನ ಇಡಲಾಗಿದೆ.

ಒಟ್ಟಾರೆ ಮತಏಣಿಕೆ ಸಮಯದಲ್ಲಿ ಯಾವುದೇ ಗೊಂದಲ ಬಾರದಂತೆ ಪ್ರತಿ ಹಂತದಲ್ಲೂ ವಿಶೇಷ ಗಮನ ನೀಡಿ ನಿಗವಹಿಸಲಾಗಿದೆ. ಇನ್ನು ಅಭ್ಯರ್ಥಿಗಳು ಒಳ ಬಂದು ಅವರು ಕೂರುವ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಒಟ್ಟಾರೆ ಮೇ.13ರ ದಿನದತ್ತ ಎಲ್ಲಾರ ಗಮನವಿದ್ದು, ಯಾರಿಗೆ ಮತದಾನ ಪ್ರಭುಗಳು ಒಲವು ತೋರಲಿದ್ದಾರೆ ಕಾದು ನೋಡಬೇಕಾಗಿದೆ..

ಕಾರ್ಪ್ಸ್ ಕಮಾಂಡರ್ ಮನೆಗೆ ನುಗ್ಗಿ ಕೆಚಪ್, ಸಲಾಡ್, ನವಿಲು ಕಳ್ಳತನ ಮಾಡಿದ ಇಮ್ರಾನ್ ಬೆಂಬಲಿಗರು..

ಖುಷಿಯಿಂದ ಡಾನ್ಸ್ ಮಾಡುತ್ತಲೇ, ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿ: ವೀಡಿಯೋ ವೈರಲ್

ವರದಕ್ಷಿಣೆಯಲ್ಲಿ ಬೈಕ್ ಕೇಳಿದ್ದಕ್ಕೆ, ಅಪ್ಪನಿಂದಲೇ ಚಪ್ಪಲಿ ಏಟು ತಿಂದ ವರ: ವೀಡಿಯೋ ವೈರಲ್

- Advertisement -

Latest Posts

Don't Miss