Thursday, December 12, 2024

Latest Posts

ಪತಿಯ ಗೈರು ಹಾಜರಿಯಲ್ಲಿ ಪತ್ನಿ ಈ ತಪ್ಪುಗಳನ್ನು ಮಾಡಲೇಬಾರದಂತೆ

- Advertisement -

Spiritual: ಸಮಾಜದಲ್ಲಿ ಹೆಣ್ಣು ಮಕ್ಕಳು ಸುರಕ್ಷಿತವಾಗಿ ಇರಬೇಕು ಅಂತಾ ಹಲವು ನಿಯಮಗಳನ್ನು ಮಾಡಲಾಗಿದೆ. ಅದರಲ್ಲೂ ಮದುವೆಯಾದ ಸ್ತ್ರೀಯ ರಕ್ಷಣೆಗಾಗಿ, ನಿಯಮಗಳಿದೆ. ಇಂದಿನ ಕಾಲದಲ್ಲಿ ಅಂಥ ನಿಯಮಗಳನ್ನು ಹಲವರು ಪಾಲಿಸುವುದಿಲ್ಲ. ಹೆಣ್ಣು ಮಕ್ಕಳಿಗೂ ಗಂಡು ಮಕ್ಕಳಷ್ಟೇ ಸ್ವಾತಂತ್ರ್ಯವಿದೆ ಎನ್ನುತ್ತಾರೆ. ಆದರೆ ಪತಿಯ ಅನುಪಸ್ಥಿತಿಯಲ್ಲಿ ಪತ್ನಿಯಾದವಳು ಕೆಲ ಕೆಲಸಗಳನ್ನು ಮಾಡಬಾರದು. ಅದೇನು ಅಂತಾ ತಿಳಿಯೋಣ ಬನ್ನಿ.

ಒಬ್ಬೊಬ್ಬರೇ ತಿರುಗಾಡಲು ಹೋಗುವುದು. ಪತ್ನಿಯಾದವಳು, ಮುಖ್ಯವಾದ ಕೆಲಸವಿದ್ದಲ್ಲಿ, ಅಥವಾ ಪತಿಗೆ ಬರಲು ಸಮಯವಿಲ್ಲದಿದ್ದಲ್ಲಿ ಮಾತ್ರ ಪತ್ನಿಯಾದವಳು ಒಬ್ಬಳೇ ಹೊರಗಡೆ ಹೋಗಬೇಕು. ಕತ್ತಲಾಗುವ ಮುನ್ನ ಹೋಗಿ ಬಂದರೆ ಉತ್ತಮ ಅಂತಾರೆ ಹಿರಿಯರು. ಈ ನಿಯಮ ತಂದಿರಲು ಕಾರಣ, ಮಹಿಳೆ ಸುರಕ್ಷಿತವಾಗಿರಲಿ ಎಂಬ ಕಾರಣಕ್ಕೆ, ಹಿರಿಯರು ಈ ನಿಯಮ ಹಾಕಿದ್ದರು.

ಇನ್ನು ಎರಡನೇಯದಾಗಿ ಮನೆಯ ಮುಂದೆ ನಿಲ್ಲುವುದು. ಪತಿ ಇಲ್ಲದ ಸಮಯದಲ್ಲಿ ಪತ್ನಿಯಾದವಳು, ಮನೆಯೊಳಗೇ ಇರಬೇಕು. ಬಾಗಿಲ ಬಳಿ, ಗೇಟಿನ ಬಳಿ ನಿಲ್ಲಬಾರದು. ಇದು ಪರ ಪುರುಷರಿಗೆ ತಪ್ಪು ಗ್ರಹಿಕೆಯಾಗುವಂತೆ ಮಾಡುತ್ತದೆ. ಅಲ್ಲದೇ, ಆಕೆಯ ಬಗ್ಗೆ ತಪ್ಪು ತಿಳಿದುಕೊಳ್ಳುವಂತೆ ಮಾಡುತ್ತದೆ.

ಮೂರನೇಯದಾಗಿ ಅತೀಯಾಗಿ ಶೃಂಗಾರ ಮಾಡಿಕೊಳ್ಳಬಾರದು. ಪತಿ ಇಲ್ಲದ ಸಮಯದಲ್ಲಿ ಪತ್ನಿಯಾದವಳು ಅತೀಯಾಗಿ ಶೃಂಗಾರ ಮಾಡಿಕೊಳ್ಳಬಾರದು. ಇದರಿಂದ ಪರಪುರುಷರು ಆಕೆಯನ್ನು ಕಾಮದ ಕಣ್ಣಿನಿಂದ ನೋಡಲಾರಂಭಿಸುತ್ತಾರೆಂದು ಹಿರಿಯರು ಈ ನಿಯಮ ತಂದಿದ್ದಾರೆ.

ಕೊನೆಯದಾಗಿ ಪತಿ ಮನೆಯಲ್ಲಿ ಅಥವಾ, ಜೊತೆಯಲ್ಲಿ ಇಲ್ಲದ ಸಮಯದಲ್ಲಿ ಪರಪುರುಷನೊಂದಿಗೆ ಪತ್ನಿಯಾದವಳು ಮಾತನಾಡಬಾರದು. ಮುಖ್ಯವಾದ ವಿಷಯ ಮಾತನಾಡಲೇಬೇಕು. ಇದಕ್ಕೆ ಪತಿಯ ಅನುಮತಿ ಇದೆ ಅನ್ನುವುದಾದರೆ ಮಾತ್ರ ಆಕೆ ಮಾತನಾಡಬಹುದು. ಅಥವಾ ಆ ಪುರುಷನನ್ನು ಈಕೆ ಸಹೋದರನಂತೆ ತಿಳಿದಿದ್ದರೆ, ಆಗ ಮಾತನಾಡಬಹುದು. ಆದರೆ ಪರಪುರುಷರೊಂದಿಗೆ ಪತ್ನಿಯಾದವಳು ನಗು ನಗುತ್ತ ಹರಟೆ ಹೊಡೆದರೆ, ಆಗ ಜನರಿಗೆ ತಪ್ಪು ಸಂದೇಶ ಹೋಗುತ್ತದೆ. ಹಾಗಾಗಿ ಪತಿ ಮನೆಯಲ್ಲಿ ಇಲ್ಲದಾಗ, ಪತ್ನಿಯಾದವಳು ಈ ನಿಯಮಗಳನ್ನು ಅನುಸರಿಸಬೇಕು.

- Advertisement -

Latest Posts

Don't Miss