Hassan Political News: ಹಾಸನ : ಹಾಸನದಲ್ಲಿ ಸಂಸದ ಪ್ರಜ್ವಲ್ರೇವಣ್ಣ ಮಾತನಾಡಿದ್ದು, ನಾನು ಒಂದು ದಿನನೂ ಕ್ಷೇತ್ರದಿಂದ ಹೊರಗೆ ಹೋದವನಲ್ಲ. ಜಿಲ್ಲೆಯ ನೊಂದ ಜನರಿಗೆ ನ್ಯಾಯ ಒದಗಿಸಿದ್ದೀನಿ. ನಾನು ಪ್ರಚಾರಕ್ಕೆ ಹೋದ ಕಡೆಯಲೆಲ್ಲಾ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ನೀವು ಗೆಲ್ತಿರಾ ಅಂತ ಜನರು ಹೇಳ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಐದು ವರ್ಷದಲ್ಲಿ ಹನ್ನೆರಡುವರೆ ಸಾವಿರ ಕೋಟಿ ಕೇಂದ್ರದಿಂದ ಅನುದಾನ ತಂದಿದ್ದೇನೆ. ಅದಕ್ಕೆ ನರೇಂದ್ರ ಮೋದಿಯವರು, ಎಚ್.ಡಿ.ದೇವೇಗೌಡರು ಹಾಗೂ ಎಲ್ಲರೂ ಸಹಕಾರ ಕೊಟ್ಟಿದ್ದಾರೆ. ಅವರ ಆಶೀರ್ವಾದದ ಮೇಲೆ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ. ಜನರು ಮತ್ತೊಮ್ಮೆ ಅವಕಾಶ ಕೊಡಬೇಕು ಎಂದು ಮಾತನಾಡುತ್ತಿದ್ದಾರೆ. ದೇವರ ಆಶೀರ್ವಾದ, ಜನರ ಆಶೀರ್ವಾದ ಇದ್ದರೆ ಮುಂದಿನ ದಿನಗಳಲ್ಲಿ ಗೆದ್ದು ಬರ್ತಿನಿ. ಬಿಜೆಪಿ ಜೊತೆ ಹೊಂದಾಣಿಕೆ ನೂರಕ್ಕೆ ನೂರು ಅನುಕೂಲವಾಗುತ್ತೆ. ಬಿಜೆಪಿ ಕಾರ್ಯಕರ್ತರು, ಮುಖಂಡರು ಬಹಳಷ್ಟು ಜನ ನನ್ನ ಜೊತೆ ಟಚ್ನಲ್ಲಿ ಇದ್ದಾರೆ. ಜೆಡಿಎಸ್ ಕಾರ್ಯಕರ್ತರು, ಮುಖಂಡರು ಒಗ್ಗಾಟ್ಟಾಗಿ ಹೋಗುವ ಕೆಲಸ ಮಾಡುತ್ತಿದ್ದೇವೆ. ಎಲ್ಲರದ್ದು ಒಂದೇ ಉದ್ದೇಶ, ನಾವು ಕಾಂಗ್ರೆಸ್ನ ತಿರಸ್ಕಾರ ಮಾಡಬೇಕು. ನರೇಂದ್ರಮೋದಿಯ ಅವರಿಗೆ ಮತ್ತೊಂದು ಬಾರಿ ಶಕ್ತಿ ಕೊಡುವ ಕೆಲಸ ಮಾಡಬೇಕು. ಈ ದೇಶದ ಅಭಿವೃದ್ಧಿ, ಈ ದೇಶವನ್ನು ಕಟ್ಟಲು ಎಲ್ಲರೂ ಒಂದಾಗಿದ್ದೇವೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ಬಿಜೆಪಿ ಮುಖಂಡರು ಸಲಹೆ ಕೊಡುತ್ತಿದ್ದಾರೆ. ಜೆಡಿಎಸ್ ಮುಖಂಡರು ಬಿಜೆಪಿ ಮುಖಂಡರ ಜೊತೆ ವಿಶ್ವಾಸ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅನುಕೂಲ ಆಗುತ್ತೆ, ಖಂಡಿತವಾಗಿಯೂ ಒಳ್ಳೆಯದು ಆಗುತ್ತೆ. ನಾವು ಮಾಡಿರುವ ಕೆಲಸ, ನಾವು ತಂದಿರುವ ಯೋಜನೆಗಳು ನಮ್ಮ ಕೈ ಹಿಡಿಯುತ್ತೆ. ಈ ಜಿಲ್ಲೆಯ ಜನ ಹೋದ ಚುನಾವಣೆಯಲ್ಲಿ ಆಶೀರ್ವಾದ ಮಾಡಿದ್ರು ಅದಕ್ಕೆ ತಕ್ಕಂತೆ ದುಡಿಮೆ ಮಾಡಿದ್ದೇನೆ. ನನಗೆ ಮತ್ತೊಂದು ಅವಕಾಶ ಕೊಟ್ಟರೆ ಇನ್ನೂ ಹೆಚ್ಚಿನ ಕೆಲಸವನ್ನು ನಮ್ಮ ಜಿಲ್ಲೆಗೆ, ಜಿಲ್ಲೆಯ ಜನರಿಗೆ ಮಾಡ್ತಿನಿ. ನಾನು ಮಾಡಿರುವ ಕೆಲಸ, ತಂದಿರುವ ಅನುದಾನದ ಬಗ್ಗೆ ಒಂದು ಪುಸ್ತಕದ ಮೂಲಕ ಇಡೀ ಜಿಲ್ಲೆಯ ಜನರಿಗೆ ತಲುಪಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಇನ್ನು ನಿನ್ನೆ ಮಾಜಿ ಪ್ರಧಾನಿ ದೇವೇಗೌಡರು ಆಸ್ಪತ್ರೆ ಸೇರಿದ್ದರ ಬಗ್ಗೆ ಮಾತನಾಡಿದ ಪ್ರಜ್ವಲ್ ರೇವಣ್ಣ, ದೊಡ್ಡವರು ಕೂಡ ಆರೋಗ್ಯವಾಗಿದ್ದಾರೆ ಏನು ತೊಂದರೆಯಿಲ್ಲ. ನಾನು ನಿನ್ನೆ, ಇಂದು ಬೆಳಿಗ್ಗೆ ಮಾತನಾಡಿದೆ, ಸ್ವಲ್ಪ ಕೆಮ್ಮು ಇತ್ತು ಅಂದರು. ಇಂದು ಸಂಜೆ ಅಥವಾ ನಾಳೆ ಡಿಸ್ಚಾರ್ಜ್ ಆಗ್ತಾರೆ. ಅವರ ದಿನಾಂಕ ತಗೊಂಡು ನನ್ನ ಸಾಧನೆಯ ಬಗ್ಗೆ ಪುಸ್ತಕವನ್ನು ಅವರ ಮುಖಾಂತರ ಬಿಡುಗಡೆ ಮಾಡುತ್ತೇನೆ. ಆ ಆಸೆ ನನಗೂ ಕೂಡ ಇದೆ ಎಂದು ಪ್ರಜ್ವಲ್ ಹೇಳಿದ್ದಾರೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪ್ರಜ್ವಲ್, ನಾನು ಅದರ ಬಗ್ಗೆ ಚರ್ಚೆ ಮಾಡಲ್ಲ. ಅದು ಅವರ ಪಕ್ಷದ ವಿಚಾರ, ಅವರು ಕುಳಿತುಕೊಂಡು ಸರಿ ಮಾಡುವ ಕೆಲಸ ಮಾಡ್ತಾರೆ. ನಮ್ಮ ಪಕ್ಷದಲ್ಲಿ ಯಾರಾದರೂ ಧ್ವನಿ ಎತ್ತಿದರೆ ಕುಮಾರಣ್ಣ ಮಾತಾಡ್ತಾರೆ. ಅವರ ಪಕ್ಷದವರು ಅದರ ಬಗ್ಗೆ ಚರ್ಚೆ ಮಾಡಬೇಕು. ಬಿಜೆಪಿ-ಜೆಡಿಎಸ್ ಹೊಂದಾಣಿಕೆಯಿಂದ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆದ್ದೆ ಗೆಲ್ಲುತ್ತೆ ಎನ್ನುವ ಭಾವನೆ ಇದೆ, ದೆಹಲಿಯಲ್ಲೂ ಮಾತನಾಡುತ್ತಿದ್ದಾರೆ. ಹಾಗಾಗಿ ಎಲ್ಲರೂ ಒಟ್ಟಿಗೆ ಹೋಗುವಂತಹ ಕೆಲಸವನ್ನು ನಾವು ಮಾಡ್ತಿವಿ. ಮುಂದಿನ ದಿನಗಳಲ್ಲಿ ಅವೆಲ್ಲವನ್ನೂ ಬಗೆಹರಿಸುವಂತೆ ಕೆಲಸವನ್ನು ಅವರ ಪಕ್ಷದಲ್ಲೂ ಮಾಡ್ತಾರೆ. ನಮ್ಮ ಪಕ್ಷದಲ್ಲೂ ಮಾಡ್ತಾರೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ಅಬುಧಾಬಿಯ ಮೊದಲ ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡಿದ ಬಾಲಿವುಡ್ ದಿಗ್ಗಜರು
ಪಾರ್ಕಿಂಗ್ ವಿಚಾರಕ್ಕಾಗಿ ಗಲಾಟೆ: ಡಾಕ್ಟರ್ಗೆ ಕಪಾಳ ಮೋಕ್ಷ ಮಾಡಿದ ಕಾಂಗ್ರೆಸ್ ಮುಖಂಡ ಅರೀಫ್ ದೇಸಾಯಿ
ಪತ್ನಿ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡಿಗೆ ರೀಲ್ಸ್ ಮಾಡಿದ್ದಕ್ಕೆ, ಪತಿ ಆತ್ಮಹತ್ಯೆಗೆ ಶರಣು..!