Saturday, July 27, 2024

Latest Posts

ನೇಹಾ ಪ್ರಕರಣವನ್ನಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸೋದು ಅವರ ಉದ್ದೇಶ: ಸಂತೋಷ್ ಲಾಡ್

- Advertisement -

Political News: ಧಾರವಾಡ: ಈಶ್ವರಪ್ಪ ಹೇಳಿಕೆಗೆ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದು, ಅವರು ಈ ರೀತಿ ಮೊದಲಿನಿಂದಲೂ ಮಾತನಾಡ್ತಾರೆ. ಅವರ ಬಗ್ಗೆ ನನಗೆ ಬಹಳ ಗೌರವ ಇದೆ. ನಮ್ಮ ಕುಟುಂಬದಲ್ಲಿ ಈ ರೀತಿಯಾಗಿ ಅವರಿಗೆ ಖುಷಿ ಆಗೋದಾದ್ರೆ. ಈ ರೀತಿ ಮಾತನಾಡಿ ಅವರಿಗೆ ತೃಪ್ತಿ ಆಗೋದಾದ್ರೆ. ಈಗ ಆಗಿರೋ ಘಟನೆಯಿಂದ ಅವರಿಗೆ ತೃಪ್ತಿ ಆಗೋದಾದ್ರೆ ದೇವರು ಅವರಿಗೆ ಒಳ್ಳೇದು ಮಾಡ್ಲಿ. ಅದರ ಬಗ್ಗೆ ನಾನು ಕಾಮೆಂಟ್ ಮಾಡೋಕೆ ಹೋಗಲ್ಲ ಎಂದು ಲಾಡ್ ಹೇಳಿದ್ದಾರೆ.

ಆದ್ರೆ ಒಂದು ಬೇಜಾರು, ಇತರ ಘಟನೆಗಳು ಭಾರತದಲ್ಲಿ ಎನ್ ಸಿ ಆರ್ ವರದಿ ಪ್ರಕಾರ ವರ್ಷಕ್ಕೆ 13.13 ಲಕ್ಷ ಹೆಣ್ಣು ಮಕ್ಕಳು ನಾಪತ್ತೆ ಆಗಿದ್ದಾರೆ. ಇದರ ಬಗ್ಗೆ ಏನು ಮಾತನಾಡ್ತಾರೆ ಇವರು. ಇಲ್ಲಿ ಮುಸ್ಲಿಂ ಸಮಾಜದ ಯುವಕ ಇದ್ದಾನೆ ಅಂತಾ ಇಷ್ಟು ಪ್ರಮುಖ ಆಗಿದೆ. ಆಗಿರೋ ಬಗ್ಗೆ ಖಂಡನೆ ಇದೆ. ಕಾನೂನಿನ ಪ್ರಕಾರ ಅವನಿಗೆ ಯಾವ ಶಿಕ್ಷೆ ಆಗಬೇಕು ಅದನ್ನ ಸರ್ಕಾರ ಮಾಡುತ್ತೆ. ಮುಖ್ಯಮಂತ್ರಿ, ಗೃಹ ಸಚಿವರು ಮಾತನಾಡಿದ್ದಾರೆ. ಈಗಾಗಲೇ ಯುವಕ ಅರೆಸ್ಟ್ ಆಗಿದ್ದಾನೆ. ಕರ್ನಾಟಕದಲ್ಲಿರುವ ಎಲ್ಲಾ ಹಿಂದೂ ಹೆಣ್ಣುಮಕ್ಕಳಿಗೆ ಈ ರೀತಿ ಆದರೆ ಇವರು ಹೋಗ್ತಾರಾ? ಎಂದು ಲಾಡ್ ಪ್ರಶ್ನಿಸಿದ್ದಾರೆ.

ಅಲ್ಲದೇ, ಮುಸ್ಲಿಂ ಯುವಕ ಮಾಡಿರುವುದಕ್ಕೆ ತಾನೆ ಈ ರೀತಿ ಆಗಿದ್ದು. ಇಷ್ಟು ಹೈಪ್ ಯಾಕೆ? ರಾಜಕೀಯವಾಗಿ ಉಪಯೋಗಿಸಬೇಕು ಅನ್ನೋ ಉದ್ದೇಶ. ತೊಂದರೆಯಾದ ಕುಟುಂಬಕ್ಕೆ ಸಾಂತ್ವನ ಹೇಳುವುದು ಅವರದ್ದಲ್ಲ. ರಾಜಕೀಯ ಬೇಳೆ ಬೆಯಬೇಕು, ಹಿಂದುತ್ವದ ಬಗ್ಗೆ ಮಾತನಾಡಬೇಕು ಅನ್ನೋದು. ಮುಸ್ಲಿಂ ಯುವಕ ಮಾಡಿರುವುದಕ್ಕೆ ಹೀಗೆ ಮಾಡ್ತಿದ್ದಾರೆ ಅನ್ನೋದು ನನ್ನ ವಾದ. ಇದರಲ್ಲಿ ರಾಜಕೀಯ ಬೇಡ, ಏನಾಗಿದೆ ಅದರ ಬಗ್ಗೆ ನಾವು ಮಾತನಾಡೋಣ. ಈ ರೀತಿ ಯಾರಿಗೂ ಆಗಬಾರದು. ಬೇರೆ ಕಡೆಯಿಂದ ನಾಯಕರುಗಳು ಬಂದು ಈ ರೀತಿ ಹೇಳೋದು ಫ್ಯಾಶನ್ ಆಗ್ಬಿಟ್ಟಿದೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

ಈ ಘಟನೆಯನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ಎರಡು ತಿಂಗಳ ಹಿಂದೆ ಇದೇ ರೀತಿ ಘಟನೆ ತುಮಕೂರಿನಲ್ಲಿ ನಡೆದಿತ್ತು. ಒಬ್ಬ ಹಿಂದೂ ಹುಡುಗ ಮುಸಲ್ಮಾನ್ ಹುಡುಗಿಗೆ ಹೊಡೆದಿದ್ದ, ಅವಾಗ ಯಾಕೆ ಇವರು ಹೋಗಲಿಲ್ಲ. ಇಲ್ಲಿ ಮುಸ್ಲಿಂ ಅನ್ನೋ ವಿಷಯ ಬಂದಿದೆ ಅಂತಾ ಈ ರೀತಿ ಮಾಡ್ತಾ ಇದ್ದಾರೆ. ನಮಗೆ ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ. ಇಲ್ಲಿ ನಡೆದಂತ ಘಟನೆಗೆ ನಮ್ಮ ಖಂಡನೆ ಇದೆ. ಅವರಿಗೆ ಖಂಡಿತವಾಗಲೂ ನ್ಯಾಯವನ್ನೂ ನಮ್ಮ ಸರ್ಕಾರ ಕೊಡುತ್ತೆ. ಇದನ್ನು ರಾಜಕೀಯವಾಗಿ ಬಳಸಬಾರದು ಅಂತ ಕೈಮುಗಿದು ಬೇಡಿಕೊಳ್ಳುತ್ತೇನೆ ಎಂದು ಲಾಡ್ ಮನವಿ ಮಾಡಿದ್ದಾರೆ.

ದಿಂಗಾಲೇಶ್ವರ ಶ್ರೀಗಳ ಬಗ್ಗೆ ಯತ್ನಾಳ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿರುವ ಲಾಡ್, ಯತ್ನಾಳ ಸಾಹೇಬರು ಏನು ಬೇಕು ಅದನ್ನೇ ಮಾತನಾಡುತ್ತಾರೆ. ಒನ್ ಟು ತ್ರಿ ಆಲ್ ಇಂಡಿಯಾ ಫ್ರೀ ಯಂತೆ. ಅವರ ಹೇಳಿಕೆಗೆ ಅವರನ್ನೇ ಕೇಳಬೇಕು ಎಂದು ಲಾಡ್ ವ್ಯಂಗ್ಯವಾಡಿದ್ದಾರೆ.

ಸಿಎಂ, ಗೃಹ ಸಚಿವರ ಬಗ್ಗೆ ಜೋಶಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಲಾಡ್,  ಇಂತಹ ಘಟನೆ ಇಡೀ ದೇಶದಲ್ಲಿ ಯಾರಿಗೂ ಕೂಡ ಆಗಬಾರದು. ಇಂಥವರಿಗೆ ಯಾಕೆ ಸರ್ಕಾರ ಪ್ರೋತ್ಸಾಹ ಕೊಡುತ್ತೆ, ಈ ರೀತಿ ಮಾಡಿ ಅಂತ. ಬಿಜೆಪಿ ಸರ್ಕಾರವು ಈ ರೀತಿ ತುಷ್ಟಿಕರಣ ಕೊಡುತ್ತಾ? ಎಲದಕ್ಕೂ ಒಂದು ಮಿತಿ ಅನ್ನೋದು ಬೇಕಲ್ವಾ? ಇವರೇ ಪ್ರೋತ್ಸಾಹ ಕೊಡ್ತಾರೆ ಇವರೇ ಪ್ರೋತ್ಸಾಹ ಕೊಡ್ತಾರೆ ಅಂತಾರೆ. ನಾವು ಮನುಷ್ಯರಲ್ವಾ? ನಮಗೆ ಸಾಮಾನ್ಯ ಜ್ಞಾನ ಇಲ್ವಾ. ನಾವು ಈ ರೀತಿ ಮಾಡುವುದಕ್ಕೇನೆ ಆರಿಸಿ ಬಂದಿದ್ದೆವಾ? ನಮಗೆ ಜೀವನದಲ್ಲಿ ಬೇರೆ ಉದ್ದೇಶಾನೇ ಇಲ್ವಾ..? ಕಾಂಗ್ರೆಸ್ ಕಳೆದ 70 ವರ್ಷದಿಂದ ಬೇರೇನು ಮಾಡೆ ಇಲ್ವಾ? ಇದನ್ನೇ ಮಾಡಿಕೊಂಡು ಬಂದಿದ್ದೇವಾ? ಎಂದು ಪ್ರಶ್ನಿಸಿದ್ದಾರೆ.

ನಾವು ದೇಶವನ್ನು ರಾಜ್ಯವನ್ನು ಕಟ್ಟಿದ್ದೇವೆ. ದೇಶಕ್ಕೆ ಪ್ರತಿಯೊಬ್ಬರು, ಪಕ್ಷ ಪ್ರತಿಯೊಂದು ಪಕ್ಷ ಕೊಡುಗೆ ಕೊಟ್ಟಿದೆ. ಇಂತಹ ಘಟನೆಗಳು ಆದಾಗ ಎಲ್ಲರೂ ಒಂದಾಗಿರಬೇಕು. ಇದಕ್ಕೆ ಕಾನೂನು ತರಬೇಕು, ಈ ರೀತಿ ಆದರೆ ಎನ್ಕೌಂಟರ್ ಮಾಡಬೇಕು. ಈ ರೀತಿಯಾದಾಗಾ ಇರೋ ಬರೋರೆಲ್ಲರೂ ಮಾತನಾಡೋದು. ಒಂದು ವಾರದ ನಂತರ ಯಾರು ಏನು ಮಾತನಾಡುತ್ತಾರೆ ನೋಡೋಣ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ರಾಜ್ಯದಲ್ಲಿ ಉತ್ತರ ಪ್ರದೇಶದ ಮಾದರಿಯಲ್ಲಿ ಕಾನೂನು ಜಾರಿಗೆ ತರಬೇಕು: ಚಕ್ರವರ್ತಿ ಸೂಲಿಬೆಲೆ

ವಿಧಾನಸಭೆ ಸೋಲನ್ನ ಬದಿಗಿಡೋಣ.. ಲೋಕಸಭೆಯಲ್ಲಿ Modi ಗೆಲ್ಲಿಸೋಣ: ಬಿ.ವೈ.ವಿಜಯೇಂದ್ರ

ಕಾಂಗ್ರೆಸ್ 28 ಸ್ಥಾನ ಸೋತರೆ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಖುಷಿ: ಬಿ.ವೈ.ವಿಜಯೇಂದ್ರ

- Advertisement -

Latest Posts

Don't Miss