Sunday, April 20, 2025

Latest Posts

ತಮ್ಮೆಲ್ಲರ ಗೆಲುವು ನಾಡಿನ ನ್ಯಾಯದ ಕೂಗಿಗೆ ಬಲ ತಂದಿದೆ: ರಾಜ್ಯಸಭಾ ಗೆಲುವಿನ ಬಗ್ಗೆ ಸಿಎಂ ಮಾತು

- Advertisement -

Political News: ಇಂದು ಬೆಳಿಗ್ಗೆ ಸಿಎಂ ಸಿದ್ದರಾಮಯ್ಯ ಮೈತ್ರಿ ಎದುರು ನಮ್ಮ ಕಾಂಗ್ರೆಸ್ ಮೂರು ಸೀಟು ಗೆಲ್ಲಲಿದೆ ಎಂದಿದ್ದರು. ಅದರಂತೆ, ಕಾಂಗ್ರೆಸ್ ರಾಜ್ಯ ಸಭಾ ಚುನಾವಣೆಯಲ್ಲಿ ಮೂರು ಸೀಟು ಗೆದ್ದಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಗೆದ್ದವರಿಗೆ ಅಭಿನಂದನೆ ತಿಳಿಸಿದ್ದಾರೆ. ರಾಜ್ಯಸಭೆಯ 4 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜಯಗಳಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳಾದ ಅಜಯ್ ಮಾಕನ್, ನಾಸಿರ್ ಹುಸೇನ್ ಹಾಗೂ ಜಿ.ಸಿ. ಚಂದ್ರಶೇಖರ್ ಅವರಿಗೆ ಅಭಿನಂದನೆಗಳು. ತೆರಿಗೆ ಪಾಲು ಕಡಿತ, ವಿಶೇಷ ಅನುದಾನ ನಿರಾಕರಣೆ, ಅಭಿವೃದ್ಧಿ ಯೋಜನೆಗಳಿಗೆ ದೊರಕದ ಅನುದಾನ ಸೇರಿದಂತೆ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ರಾಜ್ಯಸಭೆಯಲ್ಲಿ ಧ್ವನಿಯೆತ್ತಿ, ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಲು ಶ್ರಮಿಸುತ್ತೀರೆಂದು ಭಾವಿಸಿದ್ದೇನೆ. ತಮ್ಮೆಲ್ಲರ ಗೆಲುವು ನಾಡಿನ ನ್ಯಾಯದ ಕೂಗಿಗೆ ಬಲ ತಂದಿದೆ ಎಂದಿದ್ದಾರೆ.

ಕಾಂಗ್ರೆಸ್‌ನ ಅಜಯ್ ಮಾಕೇನ್, ನಾಸಿರ್ ಹುಸೇನ್, ಚಂದ್ರಶೇಖರ್ ಗೆಲುವು ಸಾಧಿಸಿದ್ದಾರೆ, ಬಿಜೆಪಿಯಿಂದ ನಾರಾಯಣ ಸಾ ಭಾಂಡಗೆ 47 ಮತ ಪಡೆದು ಗೆದ್ದಿದ್ದಾರೆ. ಕುಪೇಂದ್ರ ರೆಡ್ಡಿಗೆ 35 ಮತಗಳು ಬಿದ್ದಿದ್ದು, ಮೈತ್ರಿ ಅಭ್ಯರ್ಥಿ ಸೋಲು ಕಂಡಿದ್ದಾರೆ. ಜೆಡಿಎಸ್‌ನಿಂದ 19 ಮತಗಳು ಮತ್ತು ಬಿಜೆಪಿಯಿಂದ 16 ಮತ ಬಿದ್ದ ಪರಿಣಾಮ ಕುಪೇಂದ್ರ ರೆಡ್ಡಿಗೆ ಸೋಲಾಗಿದೆ.

ನಾಸಿರ್ ಹುಸೇನ್ ಗೆದ್ದ ತಕ್ಷಣ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಬೆಂಬಲಿಗರು..

ಅಡ್ಡಮತ ಪರಿಕಲ್ಪನೆಯ ಜನಕನೇ ಕಾಂಗ್ರೆಸ್: ಜೆಡಿಎಸ್‌ನವರಿಗೆ ಆತ್ಮನೇ ಇಲ್ಲ ಎಂದ ಸಿಎಂಗೆ ಕುಮಾರಸ್ವಾಮಿ ತಿರುಗೇಟು

ರಾಜ್ಯಸಭಾ ಚುನಾವಣೆ ಫಲಿತಾಂಶ ಪ್ರಕಟ: ಮೈತ್ರಿ ಅಭ್ಯರ್ಥಿಗೆ ಸೋಲು, 3 ಸ್ಥಾನ ಗೆದ್ದ ಕಾಂಗ್ರೆಸ್..

- Advertisement -

Latest Posts

Don't Miss