Dharwad News: ಧಾರವಾಡ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮರಳಿ ಬಿಜೆಪಿಗೆ ಸೇರಿದ ವಿಚಾರದ ಬಗ್ಗೆ ಧಾರವಾಡದಲ್ಲಿ ಮಾತನಾಡಿರುವ ಸಚಿವ ಸಂತೋಷ್ ಲಾಡ್, ಬಹಳ ಖುಷಿಯಾಗಿದೆ ನನಗೆ. ತುಂಬಾ ಖುಷಿಯಾಗಿದೆ ಎಂದಿದ್ದಾರೆ.
ಅವರು ಯಾಕೆ ಕಾಂಗ್ರೆಸ್‌ಸಿಗೆ ಬಂದರು. ಮತ್ತೆ ಮರಳಿ ಬಿಜಪಿಗೆ ಹೋದರು ಎಂದು ನೀವು ಅವರಿಗೇ ಕೇಳಿ. ಬಿಟ್ಟು ಬರುವಾಗ ಒಂದು ಹೇಳ್ತಾರೆ. ಹೋಗುವಾಗ ಒಂದು ಹೇಳ್ತಾರೆ. ಆದರೆ ಶೆಟ್ಟರ್ ಬಿಜೆಪಿಗೆ ಮರಳಿ ಹೋಗಿದ್ದು, ನನಗೆ ವೈಯಕ್ತಿಕವಾಗಿ ಖುಷಿಯಾಗಿದೆ. ಕಾಂಗ್ರೆಸ್ ಪಕ್ಷ ಅವರಿಗೆ ಗೌರವ ಕೊಟ್ಟಿದೆ. ಮತ್ತೆ ಅವರು ಬಿಜೆಪಿಗೆ ಹೋಗಿದ್ದಾರೆ ಎಂದು ಲಾಡ್ ಹೇಳಿದ್ದಾರೆ.
ಅಲ್ಲದೇ, ಶೆಟ್ಟರ್ ಮೊದಲೇ ಬಿಜೆಪಿಗೆ ಹೋಗಬೇಕಿತ್ತು. ಅವರು ಸೀನಿಯರ್ ಲೀಡರ್. ಅವರು ಯಾಕೆ ಹೀಗೆ ಮಾಡಿದ್ದಾರೆ ಗೊತ್ತಿಲ್ಲ. ಅವರ ಪರ್ಸನಲ್ ಸಮಸ್ಯೆ ಏನಾದರೂ ಇರಬಹುದು. ಇದರಿಂದ ನಮಗೇನೂ ವ್ಯತ್ಯಾಸವಾಗುವುದಿಲ್ಲ. ಕಾಂಗ್ರೆಸ್ ಪಾರ್ಟಿ ಡೋರ್ ಇಲ್ಲದ ಪಕ್ಷ. ಇಲ್ಲಿ ಯಾರು ಬೇಕಾದ್ರೂ ಬರಬಹುದು, ಹೋಗಬಹುದು. ನಮ್ಮ ಪಕ್ಷಕ್ಕೆ ಹಲವು ಶಾಸಕರು ಸೇರ್ಪಡೆಯಾಗುವವರಿದ್ದಾರೆ. ಕಾದು ನೋಡಿ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ಶೋಯೇಬ್ ಸನಾಗೂ ಡಿವೋರ್ಸ್ ಕೊಟ್ಟು ಇನ್ನೊಬ್ಬಳನ್ನು ಮದುವೆಯಾಗ್ತಾನೆ: ಬಾಂಗ್ಲಾ ಲೇಖಕಿಯ ಭವಿಷ್ಯ
ಬಿಜೆಪಿಗೆ ಜಗದೀಶ್ ಶೆಟ್ಟರ್ ಅನಿವಾರ್ಯತೆ ಇಲ್ಲ: ಶಾಸಕ ಮಹೇಶ ಟೆಂಗಿನಕಾಯಿ..!