Thursday, October 23, 2025

Latest Posts

ನ. 19ಕ್ಕೆ ರಾಜ್ಯಕ್ಕೆ ರಾಹುಲ್‌ ಗಾಂಧಿ ಆಗಮನ

- Advertisement -

ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಬದಲಾವಣೆಯ ಬಿರುಗಾಳಿ ಎದ್ದಿದೆ. ಇದರ ಭಾಗವಾಗೇ ನವೆಂಬರ್‌ 19ರಂದು ರಾಹುಲ್‌ ಗಾಂಧಿ ಕರ್ನಾಟಕಕ್ಕೆ ಬರ್ತಿದ್ದಾರೆ ಎನ್ನಲಾಗ್ತಿದೆ. ನವೆಂಬರ್‌ 15ರಿಂದ 20ರೊಳಗೆ ದೊಡ್ಡ ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ. ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಆಹ್ವಾನ ಕೊಡುವ ಬಗ್ಗೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರಮುಖವಾಗಿ ಡಿ.ಕೆ. ಶಿವಕುಮಾರ್‌ ಅತಿ ಹೆಚ್ಚು ಆಸಕ್ತಿ ವಹಿಸಿ, ಕಾರ್ಯಕ್ರಮಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ.

ಮತ್ತೊಂದೆಡೆ ನವೆಂಬರ್‌ 20ರೊಳಗೆ ಸಂಪುಟ ಪುನಾರಚನೆಗೆ ಸಿಎಂ ಸಿದ್ದರಾಮಯ್ಯ ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಈ ತಯಾರಿಯ ಭಾಗವಾಗಿ ಕೆ.ಸಿ. ವೇಣುಗೋಪಾಲ್‌ ಬಳಿ ದೂರವಾಣಿ ಮೂಲಕ ಮಾತಾಡಿದ್ದಾರೆ. ರಾಹುಲ್‌ ಭೇಟಿಗೆ ಸಮಯ ಕೊಡಿ ಎಂದು ಮನವಿ ಮಾಡಿದ್ರಂತೆ. ಆದರೆ ಭೇಟಿಗೆ ಅವಕಾಶ ಸಿಕ್ಕಿಲ್ಲ. ಆದ್ರೀಗ ರಾಹುಲ್‌ ಗಾಂಧಿ ರಾಜ್ಯಕ್ಕೆ ಬಂದಾಗ, ಸಂಪುಟ ಪುನಾರಚನೆಯ ಬಗ್ಗೆ ಮಹತ್ವದ ಚರ್ಚೆ ನಡೆಸುವ ಸಾಧ್ಯತೆ ಇದೆ.

ಡಿಕೆಶಿ ಮಾತ್ರ, ಯಾವುದೇ ಕಾರಣಕ್ಕೂ ಸಚಿವ ಸಂಪುಟ ಪುನಾರಚನೆ ಆಗಬಾರದು. ಸಂಪುಟ ಪುನಾರಚನೆ ಮಾಡಲೇಬೇಕಿದ್ರೆ, ಅದಕ್ಕೂ ಮುನ್ನವೇ ಸಿಎಂ ಸ್ಥಾನ ಬದಲಾವಣೆ ಬಗ್ಗೆ ಕ್ಲಾರಿಟಿ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ. ಈ ಹಿಂದೆ ಹೈಕಮಾಂಡ್‌ ನಾಯಕರನ್ನ ಭೇಟಿಯಾದಾಗಲೂ, ಈ ಬಗ್ಗೆಯೇ ಮಾತನಾಡಿಕೊಂಡೇ ಬಂದಿದ್ದಾರೆ. ಏನೇ ಮಾಡಿದ್ರೂ ನವೆಂಬರ್‌ 20ರೊಳಗೆ ತೀರ್ಮಾನ ಮಾಡಿ ಎಂದು ಒತ್ತಡ ಹಾಕಿದ್ದಾರಂತೆ.

ಒಟ್ನಲ್ಲಿ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿ.ಕೆ. ಶಿವಕುಮಾರ್‌, ನವೆಂಬರ್‌ ಡೆಡ್‌ಲೈನ್‌ ಹಾಕಿಕೊಂಡಿದ್ದಾರೆ. ಆದ್ರೆ, ಸಿಎ ಸಿದ್ದರಾಮಯ್ಯ, ಅದಕ್ಕೂ ಮುನ್ನವೇ ಸಚಿವ ಸಂಪುಟ ಪುನಾರಚನೆ ಮಾಡುವ ತಂತ್ರ ರೂಪಿಸಿದ್ದಾರೆ. ಇದೆಕ್ಕೆಲ್ಲಾ ಪೂರಕವಾಗಿ ರಾಗಾ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ರಾಜ್ಯಕ್ಕೆ ರಾಹುಲ್‌ ಗಾಂಧಿ ಬಂದಾಗ ಎಲ್ಲದರ ಬಗ್ಗೆ ತೀರ್ಮಾನ ಆಗುತ್ತಾ? ಎಲ್ಲಾ ಗೊಂದಲಗಳಿಗೆ ಉತ್ತರ ಸಿಗುತ್ತಾ? ಅಥವಾ ದಿಲ್ಲಿಗೆ ಬನ್ನಿ ಅಂತಾರಾಗಾ ಹೇಳ್ತಾರಾ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.

ಇದೆಲ್ಲದರ ನಡುವೆ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ನವೆಂಬರ್‌ 20ರ ಬಳಿಕ ಕ್ಯಾಬಿನೆಟ್‌ಗೆ ಹೊಸ ಸ್ವರೂಪ ಬರಲಿದೆ ಎಂದು ಹೇಳಿರೋದು, ದೊಡ್ಡ ಬದಲಾವಣೆಯ ಸುಳಿವು ಕೊಟ್ಟಿದೆ.

- Advertisement -

Latest Posts

Don't Miss