Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದೋ ಜೋಶಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ನಾವೇನು ಮುಚ್ಚಿಕೊಂಡಿದ್ದೇವೆ…? ನಾವು ಯಾವಾಗಲೂ ಮರ್ಯಾದೆ ಮುಚ್ಚಿಕೊಂಡಿದ್ದೇವೆ. ಅವರತರಹ ನಾವೇನು ಬಿಟ್ಟಿಲ್ಲ. ಕಾಂಗ್ರೆಸ್ ನಲ್ಲಿ ಕಲ್ಚರ್ ಅನ್ನೋದೇ ಇಲ್ಲ. ಕಾಂಗ್ರೆಸ್ ನಲ್ಲಿ ಕಲ್ಚರ್ ಅನ್ ಸಿವಿಲೈಜ್ಡ್ ಫೇಲೋ ತುಂಬಾ ಜನ ಇದ್ದಾರೆ. ಇದುದ್ದರಲ್ಲೇ ಕೆಲವೊಬ್ಬರು ಸೆನ್ಸಿಬಲ್ ಇದ್ದಾರೆ. ನಿಮ್ಮ ಹೋಂ ಮಿನಿಸ್ಟರ್ ಇಡೀ ಓಡಾಡಿಸಿದ್ದು ಗೊತ್ತಿಲ್ಲ ಅಂತಾರೆ. ಜಿಲ್ಲಾ ಉಸ್ತುವಾರಿ ಸಹ ಪೊಲೀಸರ ತಪ್ಪು ಮಾಡಿದ್ದಾರೆ ಅಂತ ಹೇಳುತ್ತಾರೆ. ಎಲ್ಲಾ ಮಂತ್ರಿಗಳು ಎಲ್ಲರು ಒಂದೇ ಹೇಳಬೇಕು ಅಂತ ತೀರ್ಮಾನ ಮಾಡಿ. ಗೃಹ ಸಚಿವ ಜಂಟಲ್ಮೆನ್ ಅಂತ ಭಾವಿಸಿದ್ದೆವು. ಹೋಂ ಮಿನಿಸ್ಟರ್ ಅವರನ್ನ ಡಾರ್ಕ್ ನಲ್ಲಿಟ್ಟು ಇದೆಲ್ಲಾ ಮಾಡಿದ್ದಾರೆ. ಗೃಹ ಮಂತ್ರಿಗಳನ್ನ ಡಾರ್ಕ್ ನಲ್ಲಿಡತ್ತಾರೆ ಅಂದರೆ ಕಾಂಗ್ರೆಸ್ ಏನು ಸರ್ಕಾರ ನಡೆಸುತ್ತಿದೆ. ಇದರ ಹಿಂದಿನ ಸೂತ್ರಧಾರ ಯಾರು ಅಂತ ಸಿಎಂ ಹೇಳಬೇಕು ಎಂದು ಜೋಶಿ ಹೇಳಿದ್ದಾರೆ.
ಡಿಕೆ ಶಿವಕುಮಾರ್ ಹೇಳಿಕೆ ನಾಗರಿಕ ಸಮಾಜಕ್ಕೆ ಶೋಭೆ ತರುವುದಿಲ್ಲ. ಸಿಟಿ ರವಿ ಅವರ ಮೇಲಿನ ಆರೋಪವನ್ನು ಪೊಲೀಸರೇ ಅಪಘಾನಿಸ್ತಾನದಲ್ಲಿ ಮಾಡೋ ತರ ಮಾಡ್ತಾರಾ..? ಕಾಂಗ್ರೆಸ್ ಪಾರ್ಟಿ ಏನು ನಾನ್ಸೆನ್ ಮಾತನಾಡುತ್ತಿದೆ. ಎಂ ಬಿ ಪಾಟೀಲ್ , ಎಚ್ ಕೆ ಪಾಟೀಲ್ ಸೆನ್ಸೆಬಲ್ ಆಗಿ ಮಾತನಾಡುತ್ತಾರೆ ಅಂದುಕೊಂಡಿದ್ದೆ. ಅವರು ಸಹ ನಾನ್ಸೆಸ್ ಮಾತಾನಾಡುತ್ತಿದ್ದಾರೆ ಎಂದು ಜೋಶಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಗಾಂಧಿ ಭಾರತ ಮತ್ತು ಕಾಂಗ್ರೆಸ್ ಕಾರ್ಯಕ್ರಮದ ಬಗ್ಗೆ ಜೋಶಿ ಪ್ರತಿಕ್ರಿಯೆ ನೀಡಿದ್ದು, ಈಗ ಇರುವುದು ಡೂಪ್ಲಿಕೇಟ್ ಕಾಂಗ್ರೆಸ್ ನಕಲಿ ಗಾಂಧಿಗಳು. ಈಗಿನ ಕಾಂಗ್ರೆಸ್ ಗೂ ಮಹಾತ್ಮ ಗಾಂಧಿಗೂ ಏನು ಸಂಬಂಧ..? ಈಗಿನ ಕಾಂಗ್ರೆಸ್ ಡೂಪ್ಲಿಕೇಟ್ ಕಾಂಗ್ರೆಸ್, ಹಳೇ ಕಾಂಗ್ರೆಸ್ ತುಂಡಾಗಿ ಹಾಳಾಗಿ ಹೋಗಿದೆ. ನಿಮ್ಮದು ಕಳ್ಳ ಕಾಕರ ಗುಂಪು, ನಕಲಿ ಗಾಂಧಿಗಳು, ನಕಲಿ ಕಾಂಗ್ರೆಸ್ ಗೆ ಸರ್ಕಾರಿ ದುಡ್ಡು ಯಾಕೆ ಹಾಕ್ತೀರಾ?. ಇವರು ಮಹಾತ್ಮಾ ಗಾಂಧಿಯವರ ಕಾಂಗ್ರೆಸ್ ವಾರಸುದಾರಲ್ಲ. ಜನ ಮೂರ್ಖರಲ್ಲಾ ಜನತೆಗೆ ಎಲ್ಲವೂ ಗೊತ್ತಾಗುತ್ತೆ. ಮಹಾತ್ಮಾ ಗಾಂಧೀಗೂ ಕಾಂಗ್ರೆಸ್ ಗೆ ಯಾವುದೇ ಸಂಬಂಧವಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ತಮಗೆ ಓಟು ಹಾಕದ , ವಿರೋಧ ಇರುವವರು ಯಾರಾದರೂ ಪ್ರತಿಭಟನೆ ಮಾಡಿದ್ರೆ ಕಾಂಗ್ರೆಸ್ ಅವರ ಮೇಲೆ ಲಾಠಿ ಚಾರ್ಜ್ ಮಾಡಿಸುತ್ತದೆ. ಮತ್ತು ಲಾಠಿ ಚಾರ್ಜ್ ಮಾಡಿದವರಿಗೆ ಬಹುಮಾನ ಕೊಡುತ್ತಾರೆ. ಸರ್ಕಾರದ ನಡೆ ಸರಿಯಲ್ಲ ಎಂದು ಜೋಶಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.