Hubli News: ಹುಬ್ಬಳ್ಳಿ: ಯತೀಂದ್ರ ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ಸಿದ್ಧರಾಮಯ್ಯನವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಹಣವನ್ನು ಕೊಟ್ಟಿದ್ದಾರೆ. ಗ್ಯಾರಂಟಿಗಾಗಿ ಸಾಕಷ್ಟು ವ್ಯಯ ಮಾಡಿದರೂ ಪಕ್ಷಾತೀತವಾಗಿ ಹಣವನ್ನು ಕೊಟ್ಟಿದ್ದಾರೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಬಿಜೆಪಿಯವರು ಬೇಕಾಬಿಟ್ಟಿಯಾಗಿ ಮಾತನಾಡುತ್ತಾರೆ. ಹೈಕಮಾಂಡ್ ಎಲ್ಲಿಯವರೆಗೂ ಸಿದ್ಧರಾಮಯ್ಯನವರನ್ನು ಸಿಎಂ ಆಗಿ ಇರು ಅಂತಾರೆ ಅಲ್ಲಿವರೆಗೂ ಇರ್ತಾರೆ. ಸಿಎಂ ಬದಲಾವಣೆ ಗೊಂದಲವಿಲ್ಲ. ಈಗ ಯಾವುದೇ ವಿಚಾರ ಚರ್ಚೆಯಲ್ಲಿ ಇಲ್ಲ. ಸಿಎಂ ಉತ್ತಮವಾದ ಕೆಲಸ ಮಾಡ್ತಿದ್ದಾರೆ ಎಂದರು.
ಒಳಮೀಸಲಾತಿಯನ್ನು ಬಿಜೆಪಿಯವರು ಮಾಡಬೇಕಿತ್ತು.35 ವರ್ಷಗಳ ಸಮುದಾಯದ ಹೋರಾಟಕ್ಕೆ ಸರ್ಕಾರ ಬದ್ದವಾಗಿದೆ. 95% ಜಾತಿಗಣತಿಯಾಗಿದೆ. ಆದಷ್ಟು ಬೇಗ ಒಳ ಮೀಸಲಾತಿ ಜಾರಿಯಾಗುತ್ತದೆ. ಬಿಜೆಪಿಯವರು ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ಕರ್ನಾಟಕ ಸರ್ಕಾರ ಎಲ್ಲ ಕೆಲಸವನ್ನು ಚಾಚುತಪ್ಪದೇ ಮಾಡುತ್ತಿದೆ ಎಂದು ಅವರು ಹೇಳಿದರು.




