Political News: ರಾಜ್ಯದಲ್ಲಿ ಮಳೆಯಿಂದಾಗಿ ರೈತರಿಗೆ ಸರಿಯಾದ ಫಸಲು ಸಿಗುತ್ತಿಲ್ಲ. ಈ ಕಾರಣಕ್ಕೆ ರಾಜ್ಯ ಸರ್ಕಾರ ರೈತರ ಬಗ್ಗೆ ಕಾಳಜಿ ತೋರುತ್ತಿಲ್ಲವೆಂದು ವಿಪಕ್ಷಗಳು ವಾಗ್ದಾಳಿ ನಡೆಸುತ್ತಿದೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸಹ ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಅತಿವೃಷ್ಟಿ-ಅನಾವೃಷ್ಟಿಯಿಂದ ಈರುಳ್ಳಿ ಬೆಳೆ ನಾಶವಾಗುತ್ತಿದೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಹಾಗೂ ಕಮಿಷನ್ ಏಜೆಂಟರ ಹಾವಳಿಗೆ ಸಿಲುಕಿ ಟೊಮೇಟೊ ಬೆಳೆಗಾರರು ಕಣ್ಣೀರು ಹಾಕುತ್ತಿದ್ದಾರೆ. 14 ಕೆಜಿಯ ಟೊಮೇಟೊ ಬಾಕ್ಸ್ ಕೇವಲ 150 ರೂಪಾಯಿಗೆ ಇಳಿದು ರೈತರು ಬೀದಿಗೆ ಬಿದ್ದಿದ್ದಾರೆ! ಇಷ್ಟೆಲ್ಲಾ ಅನಾಹುತಗಳಾಗುತ್ತಿದ್ದರೂ ರೈತರ ಕಷ್ಟ ಕೇಳಲು ಈ ನಾಲಾಯಕ್ ಕಾಂಗ್ರೆಸ್ ಸರ್ಕಾರದಲ್ಲಿ ಒಬ್ಬ ಪೂರ್ಣಾವಧಿ ಕೃಷಿ ಸಚಿವರಿಲ್ಲ! ಎಂದು ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಆರ್.ಅಶೋಕ್ ಡಿ.ಕೆ.ಶಿವಕುಮಾರ್ ಅವರಿಗೆ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.
- ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ಮುಖ್ಯಮಂತ್ರಿಯಾಗಿ ಒಂದು ತಿಂಗಳು ಕಳೆದರೂ ಸಂಪುಟ ವಿಸ್ತರಣೆ ಮಾಡಲು ನಿಮಗೇಕೆ ಇಷ್ಟೊಂದು ಭಯ?
- ಸಂಪುಟ ವಿಸ್ತರಣೆಗೆ ಕೈಹಾಕಿದರೆ ನಿಮ್ಮದೇ ಪಕ್ಷದ ಶಾಸಕರ ಬಂಡಾಯ ಏಳುತ್ತಾರೆ ಎಂದು ಹೆದರಿದ್ದೀರಾ?
- ಸಚಿವಾಂಕ್ಷಿಗಳು ಬಂಡಾಯ ಎದ್ದರೆ ಅತ್ತು-ಸುರಿದು, ಕಾಡಿ-ಬೇಡಿ ಪಡೆದಿರುವ ಸಿಎಂ ಕುರ್ಚಿಯೇ ಅಲ್ಲಾಡಬಹುದು ಎನ್ನುವ ಭಯ ನಿಮ್ಮನ್ನು ಬೆಂಬಿಡದೆ ಕಾಡುತ್ತಿದೆಯೇ?
- ಅಥವಾ ಹೈಕಮಾಂಡ್ ರಬ್ಬರ್ ಸ್ಟ್ಯಾಂಪ್ ಆಗಿ ಸ್ವಂತ ನಿರ್ಧಾರ ತೆಗೆದುಕೊಳ್ಳುವ ತಾಕತ್ತೇ ಇಲ್ಲದಾಗಿದೆಯೇ?
- ನಿಮ್ಮ ಈ ರಾಜಕೀಯ ಪುಕ್ಕಲುತನಕ್ಕೆ ರಾಜ್ಯದ ಅನ್ನದಾತರು ಯಾಕೆ ಬಲಿಯಾಗಬೇಕು?
- ಚಿತ್ರದುರ್ಗ, ವಿಜಯಪುರ, ಗದಗ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಭಾಗದ ರೈತರು ಕಂಗಾಲಾಗಿದ್ದರೂ, ಕೃಷಿ ಇಲಾಖೆಗೆ ಒಬ್ಬ ಪೂರ್ಣಾವಧಿ ಸಚಿವರನ್ನು ನೇಮಿಸಲು ಸಾಧ್ಯವಾಗದ ನಿಮ್ಮಂತಹ ಪುಕ್ಕಲು ಮುಖ್ಯಮಂತ್ರಿ ಇದ್ದರೆಷ್ಟು, ಬಿಟ್ಟರೆಷ್ಟು ಡಿಕೆಶಿ ಅವರೇ?
- ರೈತರ ಹಿತರಕ್ಷಣೆ ಮಾಡುವುದಕ್ಕಿಂತ, ನಿಮ್ಮ ಆಂತರಿಕ ಕಲಹಗಳನ್ನು ಮರೆಮಾಚುವುದು ಮತ್ತು ಕುರ್ಚಿ ಭದ್ರಪಡಿಸಿಕೊಳ್ಳುವುದೇ ನಿಮಗೆ ಮುಖ್ಯವಾಗಿದೆಯೇ? ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ.?
- ಮುಖ್ಯಮಂತ್ರಿಯಾಗಿ ಒಂದು ತಿಂಗಳು ಕಳೆದರೂ ಸಂಪುಟ ವಿಸ್ತರಣೆ ಮಾಡಲು ನಿಮಗೇಕೆ ಇಷ್ಟೊಂದು ಭಯ?
- ಸಂಪುಟ ವಿಸ್ತರಣೆಗೆ ಕೈಹಾಕಿದರೆ ನಿಮ್ಮದೇ ಪಕ್ಷದ ಶಾಸಕರ ಬಂಡಾಯ ಏಳುತ್ತಾರೆ ಎಂದು ಹೆದರಿದ್ದೀರಾ?
- ಸಚಿವಾಂಕ್ಷಿಗಳು ಬಂಡಾಯ ಎದ್ದರೆ ಅತ್ತು-ಸುರಿದು, ಕಾಡಿ-ಬೇಡಿ ಪಡೆದಿರುವ ಸಿಎಂ ಕುರ್ಚಿಯೇ ಅಲ್ಲಾಡಬಹುದು ಎನ್ನುವ ಭಯ ನಿಮ್ಮನ್ನು ಬೆಂಬಿಡದೆ ಕಾಡುತ್ತಿದೆಯೇ?
- ಅಥವಾ ಹೈಕಮಾಂಡ್ ರಬ್ಬರ್ ಸ್ಟ್ಯಾಂಪ್ ಆಗಿ ಸ್ವಂತ ನಿರ್ಧಾರ ತೆಗೆದುಕೊಳ್ಳುವ ತಾಕತ್ತೇ ಇಲ್ಲದಾಗಿದೆಯೇ?
- ನಿಮ್ಮ ಈ ರಾಜಕೀಯ ಪುಕ್ಕಲುತನಕ್ಕೆ ರಾಜ್ಯದ ಅನ್ನದಾತರು ಯಾಕೆ ಬಲಿಯಾಗಬೇಕು?
- ಚಿತ್ರದುರ್ಗ, ವಿಜಯಪುರ, ಗದಗ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಭಾಗದ ರೈತರು ಕಂಗಾಲಾಗಿದ್ದರೂ, ಕೃಷಿ ಇಲಾಖೆಗೆ ಒಬ್ಬ ಪೂರ್ಣಾವಧಿ ಸಚಿವರನ್ನು ನೇಮಿಸಲು ಸಾಧ್ಯವಾಗದ ನಿಮ್ಮಂತಹ ಪುಕ್ಕಲು ಮುಖ್ಯಮಂತ್ರಿ ಇದ್ದರೆಷ್ಟು, ಬಿಟ್ಟರೆಷ್ಟು ಡಿಕೆಶಿ ಅವರೇ?
- ರೈತರ ಹಿತರಕ್ಷಣೆ ಮಾಡುವುದಕ್ಕಿಂತ, ನಿಮ್ಮ ಆಂತರಿಕ ಕಲಹಗಳನ್ನು ಮರೆಮಾಚುವುದು ಮತ್ತು ಕುರ್ಚಿ ಭದ್ರಪಡಿಸಿಕೊಳ್ಳುವುದೇ ನಿಮಗೆ ಮುಖ್ಯವಾಗಿದೆಯೇ?
ಅಧಿಕಾರಕ್ಕೆ ಬಂದು ಒಂದು ತಿಂಗಳಾದರೂ ಪೂರ್ಣ ಪ್ರಮಾಣದ ಸರ್ಕಾರ ನಡೆಸಲಾಗದ ನೀವು ರಾಜ್ಯದ ಜನತೆಗೆ ದ್ರೋಹ ಬಗೆಯುತ್ತಿದ್ದೀರಿ. ಡಿ.ಕೆ. ಶಿವಕುಮಾರ್ ಅವರೇ, ನಿಮ್ಮ ರಾಜಕೀಯ ಗೊಂದಲ ಹಾಗೂ ಪುಕ್ಕಲುತನಕ್ಕೆ ರಾಜ್ಯದ ಅನ್ನದಾತರನ್ನ, ಕೃಷಿ ಕ್ಷೇತ್ರವನ್ನ ಬಲಿಕೊಡುವುದನ್ನು ನಿಲ್ಲಿಸಿ. ತಕ್ಷಣವೇ ಈ ಸ್ವಾರ್ಥ ಚಿಂತನೆ, ಹೆದರಿಕೆ ಬಿಟ್ಟು ಕೃಷಿ ಸೇರಿದಂತೆ ಖಾಲಿ ಇರುವ ಪ್ರಮುಖ ಇಲಾಖೆಗಳಿಗೆ ಪೂರ್ಣಾವಧಿ ಸಚಿವರನ್ನು ನೇಮಿಸಿ ರೈತರ, ಜನಸಾಮಾನ್ಯರ ರಕ್ಷಣೆಗೆ ನಿಲ್ಲಿ. ಇಲ್ಲದಿದ್ದರೆ ರಾಜ್ಯದ ಜನತೆ ನಿಮ್ಮ ಅಸಮರ್ಥ ಆಡಳಿತಕ್ಕೆ ತಕ್ಕ ಪಾಠ ಕಲಿಸುವುದು ನಿಶ್ಚಿತ! ಎಂದು ಆರ್.ಅಶೋಕ್ ಕಿಡಿಕಾರಿದ್ದಾರೆ.