Thursday, April 3, 2025

Latest Posts

‘ಜ್ಞಾನ ವ್ಯಾಪಿ ಎಂಬ ಹೆಸರಿನ ಮಸೀದಿ ಎಲ್ಲಿಯೂ ಇಲ್ಲ. ಔರಂಗಜೇಬ್ ಒಡೆದ ದೇವಸ್ಥಾನ ಅದು.’

- Advertisement -

Dharwad News: ಧಾರವಾಡ : ಜ್ಞಾನವ್ಯಾಪಿಯಲ್ಲಿ ಪೂಜೆಗೆ ಅವಕಾಶ ಹಿನ್ನೆಲೆ, ಈ ಬಗ್ಗೆ ಧಾರವಾಡದಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಾತನಾಡಿದ್ದಾರೆ.

ನಮ್ಮ ದೇಶದ ಮೇಲೆ‌ ಮೊಘಲರ ದಾಳಿ ಆಗಿತ್ತು. ಆಗಿನ ಕಾಲದ ರಾಜರುಗಳು ಹಿಂದೂ ದೇವಸ್ಥಾನಗಳ ಮೇಲೆ ದಾಳಿ ಮಾಡಿದ್ದರು. ಅದಕ್ಕೆ ಸಂಬಂಧಿಸಿದಂತೆ ದಾಖಲೆಗಳೇ ಇವೆ. ಈ ಸಂಬಂಧ ಅಶೋಕ ಸಿಂಘಾಲ್ ಮನವಿ ಕೊಟ್ಟಿದ್ದರು. 30 ಸಾವಿರ ದೇವಸ್ಥಾನ ಬೇಡ, ಮೂರೇ ದೇವಸ್ಥಾನ ಕೊಡಿ ಎಂದು ಕೇಳಿದ್ದರು. ರಾಷ್ಟ್ರಪತಿಗಳಿಗೆ ಮನವಿ ಕೊಟ್ಟಿದ್ದರು. ಆದರೂ ಅವಕಾಶ ಸಿಗಲಿಲ್ಲ. ಜ್ಞಾನವ್ಯಾಪಿಯಲ್ಲಿ ಮೊದಲು ಪೂಜೆಗೆ ಅವಕಾಶ ಇತ್ತು. 1993ರಲ್ಲಿ ಕಾಂಗ್ರೆಸ್ ಸರ್ಕಾರ ಪೂಜೆಗೆ ತಡೆ ಹಾಕಿತ್ತು. ಆಗ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಈಗ ಅಲ್ಲಿನ ಜಿಲ್ಲ ನ್ಯಾಯಾಲಯದ ಅವಕಾಶ ಕೊಟ್ಟಿದೆ. ನ್ಯಾಯಾಲಯದ ತೀರ್ಪು ಸ್ವಾಗತಾರ್ಹವಾಗಿದೆ ಎಂದಿದ್ದಾರೆ.

ಮುಸ್ಲಿಂ ಸಮಾಜ ಸಂಘರ್ಷ ಬಿಡಬೇಕು. ಸೌಹಾರ್ದತೆಯಿಂದ ಜ್ಞಾನ ವ್ಯಾಪಿ ಹಿಂದೂಗಳಿಗೆ ಒಪ್ಪಿಸಬೇಕು. ಭಂಡತನ, ಹಠದಿಂದ ನಡೆದರೇ, ಹಿಂದೂ ದ್ವೇಷ ಮಾಡಿದರೆ ನೀವು ಒಡೆದದ್ದು ನಿಜ ಅಂತಾಯ್ತು. ಜ್ಞಾನ ವ್ಯಾಪಿ ಎಂಬ ಹೆಸರಿನ ಮಸೀದಿ ಎಲ್ಲಿಯೂ ಇಲ್ಲ. ಔರಂಗಜೇಬ್ ಒಡೆದ ದೇವಸ್ಥಾನ ಅದು. ಹೀಗಾಗಿ ಮರಳಿ ಕೊಡಬೇಕು. ಇಲ್ಲದೇ ಹೋದಲ್ಲಿ ಮತ್ತೇ ಕಾನೂನು ಹೋರಾಟ ಆಗುತ್ತದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಪಾಕಿಸ್ತಾನದ ವಿರುದ್ಧ ಡೆವೀಸ್ ಕಪ್ ಟೈಗಾಗಿ ಹೊರಟ ಭಾರತ ತಂಡ

ತಮ್ಮ ಅಧಿಕಾರಾವಧಿಯ ಯೋಜನೆಗಳ ಸಾಧನೆ ವಿವರಿಸಿದ ಸಚಿವೆ ನಿರ್ಮಲಾ ಸೀತಾರಾಮನ್

ಕಾರವಾರದಲ್ಲಿ ಮತಾಂತರ ಮಾಡಲು ಯತ್ನಿಸಿದ ಆರು ಮಂದಿ ಬಂಧನ.

- Advertisement -

Latest Posts

Don't Miss