Tuesday, August 5, 2025

Latest Posts

ನಾವು ತಲುಪಲು ಸಾಧ್ಯವಾಗದ ಒಂದು ಸ್ಥಳವೂ ಗಾಜಾದಲ್ಲಿಲ್ಲ: ಬೆಂಜಮಿನ್ ನೆತನ್ಯಾಹು

- Advertisement -

International News: ಇಸ್ರೇಲ್- ಹಮಾಸ್ ಯುದ್ಧ ಕುರಿತಂತೆ, ಹಲವು ರಾಷ್ಟ್ರಗಳು ಆತಂಕ ವ್ಯಕ್ತಪಡಿಸುತ್ತಿದ್ದರೆ, ಇಸ್ರೇಲ್ ಪ್ರಧಾನಿ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಹಮಾಸ್ ಉಗ್ರರನ್ನು ಸದೆಬಡಿಯುವುದೇ, ನಮಗೆ ಯುದ್ಧ ವಿರಾಮ ಎಂದು ಹೇಳಿದ್ದ ಬೆಂಜಮಿನ್ ಮಾತನ್ನು, ಅವರ ಸೇನೆ ಸತ್ಯ ಮಾಡಿ ತೋರಿಸುತ್ತಿದೆ. ಹಮಾಸ್ ಉಗ್ರರ ಮುಖ್ಯ ಬೀಡಾಗಿದ್ದ ಅಲ್- ಶಿಫಾ ಆಸ್ಪತ್ರೆ ಮೇಲೆ, ಇಸ್ರೇಲ್ ದಾಳಿ ನಡೆಸಿದ್ದು, ಅಲ್ಲಿನ ಹಮಾಸ್ ಕಮಾಂಡ್ ಸೆಂಟರ್ ನಾಶ ಮಾಡಿದೆ.

ಹಮಾಸ್ ಉಗ್ರರು ನಿರ್ಮಿಸಿದ್ದ ಸುರಂಗ ಮಾರ್ಗವನ್ನೂ ಪತ್ತೆ ಹಚ್ಚಿ, ಕೆಲವು ಉಗ್ರರನ್ನು, ಅವರ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದೆ. ಅಲ್-ಶಿಫಾ ಆಸ್ಪತ್ರೆ ಮೇಲಾದ ದಾಳಿಯನಮ್ನು ಖಂಡಿಸಿ, ಹಲವು ದೇಶಗಳು ಇಸ್ರೇಲ್ ವಿರುದ್ಧ ವಾಗ್ದಾಳಿ ನಡೆಸಿತ್ತು. ಆಸ್ಪತ್ರೆ ಯುದ್ಧ ಭೂಮಿಯಲ್ಲ.  ಅಲ್ಲಿರುವ ನಾಗರಿಕರು, ಶಿಶುಗಳು, ರೋಗಿಗಳು, ಆಸ್ಪತ್ರೆ ಸಿಬ್ಬಂದಿಗಳನ್ನು ರಕ್ಷಿಸಬೇಕು ಎಂದು ಹೇಳಿತ್ತು.

ಆದರೆ ಈ ಬಗ್ಗೆ ಮಾತನಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ನಾವು ತಲುಪಲು ಸಾಧ್ಯವಾಗದ ಯಾವ ಸ್ಥಳವೂ ಗಾಜಾದಲ್ಲಿಲ್ಲ. ನಾವು ಗಾಜಾದ ಹೊರವಲಯ ತಲುಪುವುದಿಲ್ಲ ಎಂದು ಹೇಳಿದ್ದರು. ಆದರೆ ನಾವು ಹೊರವಲಯವನ್ನು ತಲುಪಿದೆವು. ನಾವು ಅಲ್-ಶಿಫಾ ಆಸ್ಪತ್ರೆ ತಲುಪುವುದಿಲ್ಲ ಎಂದು ಹೇಳಿದ್ದರು. ಆದರೆ ನಾವು ಅಲ್ –ಶಿಫಾ ಆಸ್ಪತ್ರೆಯನ್ನೂ ತಲುಪಿದೆವು ಎಂದು ಹೇಳಿದ್ದಾರೆ.

ಈ ಮೊದಲೇ ದಾಳಿಯ ಬಗ್ಗೆ ಮಾತನಾಡಿದ್ದ ಬೆಂಜಮಿನ್, ದಾಳಿ ಶುರು ಮಾಡಿದ್ದು ಅವರು, ಆದರೆ ಯುದ್ಧದ ಅಂತ್ಯ ನಮ್ಮಿಂದಲೇ. ಅವರು ಎಲ್ಲಿಯವರೆಗೂ ಯುದ್ಧ ಮಾಡುತ್ತಾರೋ, ನಾವು ಅಲ್ಲಿಯವರೆಗೂ ಯುದ್ಧ ಮಾಡುತ್ತೇವೆ. ಹಮಾಸ್ ಉಗ್ರರನ್ನು ಬುಡ ಸಮೇತ ಕಿತ್ತು ಹಾಕುವುದೇ, ನಮಗೆ ಕದನ ವಿರಾಮ. ನಮ್ಮ ಇಸ್ರೇಲ್ ಸೇನೆ ವ್ಯವಸ್ಥಿತಿ ಕಾರ್ಯಾಚರಣೆ ನಡೆಸಿ, ಹಮಾಸ್ ಉಗ್ರರನ್ನು ತೊಡೆದು ಹಾಕುತ್ತದೆ ಎಂಬ ವಿಶ್ವಾಸ ನನಗಿದೆ. ಇನ್ನು ಇಸ್ರೇಲ್‌ನಲ್ಲಿ ಹಮಾಸ್ ಉಗ್ರರಿಗೆ ಯಾವುದೇ ಸುರಕ್ಷಿತ ತಾಣವಿರಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಈಗ ಅವರ ಮಾತು ಸತ್ಯವಾಗುತ್ತಿದೆ.

ಇಸ್ರೇಲ್ ಸಪೋರ್ಟ್‌ಗೆ ಬಂದ ಅಮೆರಿಕ: ಮಿಡಲ್‌ ಈಸ್ಟ್‌ನಲ್ಲಿ ಪಡೆಗಳ ನಿಯೋಜನೆ ವಿಸ್ತರಣೆ

ಅಲ್ ಶಿಫಾ ಆಸ್ಪತ್ರೆಗೆ ನುಗ್ಗಿದ ಇಸ್ರೇಲ್ ಸೇನೆ: ಶಂಕಿತ ಹಮಾಸ್ ಕಮಾಂಡ್ ಸೆಂಟರ್ ನಾಶ್

ಗಾಜಾದಲ್ಲಿರುವ ಹಮಾಸ್ ಉಗ್ರರ ಸಂಸತ್ತ ಕಟ್ಟಡವನ್ನೇ ವಶಪಡಿಸಿಕೊಂಡ ಇಸ್ರೇಲ್ ಸೇನೆ

- Advertisement -

Latest Posts

Don't Miss