Tuesday, October 14, 2025

Latest Posts

ಬಿಜೆಪಿಯಲ್ಲಿ ಒಗ್ಗಟ್ಟಿಲ್ಲ – ಬಿ.ಎಲ್. ಸಂತೋಷ್ ವಾರ್ನಿಂಗ್!

- Advertisement -

ಕರ್ನಾಟಕ ಬಿಜೆಪಿ ಚಿಂತನಾ ಸಭೆಯ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ರಾಜ್ಯ ಬಿಜೆಪಿ ನಾಯಕರಿಗೆ ಕಠಿಣ ಸಂದೇಶ ನೀಡಿದ್ದಾರೆ. ಪಕ್ಷದ ಆಂತರಿಕ ಭೇದಭಾವ, ನಿರ್ಗತಿಕ ನಾಯಕತ್ವ ಮತ್ತು ಹೋರಾಟದ ಕೊರತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಯಕರಿಗೆ ಶಿಸ್ತಿನ ಪಾಠ ನೀಡಿ, ಸಂಘಟನೆಯ ಶಕ್ತಿಯನ್ನು ಮರೆತಿದ್ದಾರೆಂದು ಪರೋಕ್ಷವಾಗಿ ಟೀಕೆ ಮಾಡಿದ್ದಾರೆ.

ಸಮಾರಂಭದಲ್ಲಿ ಮಾತನಾಡಿದ ಅವರು ಪಕ್ಷದಲ್ಲಿ ಆಂತರಿಕ ಸ್ಪರ್ಧೆ ಇದ್ದರೂ ಅದು ಅಶಿಸ್ತಿಗೆ ಕಾರಣವಾಗಬಾರದು. ಮುಂದಾಳತ್ವ ಗುಣ ಎಲ್ಲರಲ್ಲೂ ಇರಬೇಕು. ಮಧ್ಯವರ್ತಿಗಳ ಮೂಲಕ ಮಾತುಕತೆ ನಡೆಸುವುದು ಬೇಡ – ನೇರವಾಗಿ ಮಾತನಾಡುವುದು ಉತ್ತಮ ಎಂದು ಹೇಳಿದ್ದಾರೆ. ಪಕ್ಷದ ನಾಯಕರು ಪರಸ್ಪರ ನಂಬಿಕೆ ಮತ್ತು ಸಮನ್ವಯದಿಂದ ಕೆಲಸ ಮಾಡಬೇಕೆಂಬುದನ್ನು ಈ ಮೂಲಕ ಅವರು ಒತ್ತಿಹೇಳಿದರು.

ಬಿಜೆಪಿ ಮುಂದಿನ ಚುನಾವಣೆಯಲ್ಲಿ ಗೆಲ್ಲಬೇಕೆಂದರೆ ಕೇವಲ ಕಾಂಗ್ರೆಸ್ ಹೀನಾಯತೆಯಿಂದ ಅಲ್ಲ. ಪಕ್ಷದ ಸ್ವಂತ ಶಕ್ತಿ, ಸಾಮರ್ಥ್ಯದಿಂದ ಗೆಲ್ಲಬೇಕೆಂದು ಸಂತೋಷ್ ಎಚ್ಚರಿಕೆ ನೀಡಿದ್ದಾರೆ. ಇದೀಗ ರಾಜ್ಯದಲ್ಲಿ ಸರ್ವೆ ಮಾಡಿದರೆ ಕಾಂಗ್ರೆಸ್‌ಗೆ ಸರಾಸರಿ 60 ಸ್ಥಾನಗಳು ಸಿಗಬಹುದು. ಆದರೆ ಅದು ಅವರ ಶಕ್ತಿ ಅಥವಾ ಜನಮನ್ನಣೆ ಕಾರಣವಲ್ಲ. ಅವರು ತಪ್ಪು ಮಾಡುತ್ತಿದ್ದಾರೆ. ಆದರೆ ನೀವು ಅದರಿಂದ ಗೆಲ್ಲುವುದು ಯೋಗ್ಯವಲ್ಲ. ನಿಮ್ಮ ಶಕ್ತಿ ಎಷ್ಟು ಎಂಬುದರ ಮೇಲಿದೆ ನಿಜವಾದ ಗೆಲುವು ಎಂದು ಹೇಳಿದ್ದಾರೆ.

ರಾಜ್ಯ ನಾಯಕರ ಬಣ ಬಡಿದಾಟ ಮತ್ತು ಸ್ಪಷ್ಟ ನಾಯಕತ್ವದ ಕೊರತೆಯಿಂದ ತಳಮಟ್ಟದ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಅಸಮಾಧಾನ ಎದುರಾಗುತ್ತಿದೆ. ಕಾರ್ಯಕರ್ತರು ತಮ್ಮ ನಾಯಕರನ್ನು ನಂಬಬೇಕಾದರೆ, ಅವರು ಕೈಗೆಟಕುವವರಾಗಿರಬೇಕು. ನಾಯಕರಲ್ಲಿ ಒಗ್ಗಟ್ಟು ಕಾಣಿಸಬೇಕು. ಇಲ್ಲದಿದ್ದರೆ ಕಾರ್ಯಕರ್ತರಿಗೆ ‘ಒಗ್ಗಟ್ಟಿಲ್ಲ’ ಎಂಬ ಅಭಿಪ್ರಾಯ ಬದಲಾಗದು ಎಂದು ಎಚ್ಚರಿಕೆ ನೀಡಿದರು.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss