Horoscope: ವೈವಾಹಿಕ ಜೀವನ ಅನ್ನೋದು ಒಂದು ಹೆಣ್ಣಿನ ಜೀವನದಲ್ಲಿ ಅದೆಷ್ಟು ಬದಲಾವಣೆ ಮಾಡುತ್ತದೆ ಎಂದರೆ, ಕೆಲವರಿಗೆ ಭರಪೂರ ನೆಮ್ಮದಿ ತಂದುಕೊಟ್ಟರೆ, ಇನ್ನು ಕೆಲವರ ನೆಮ್ಮದಿ ಹಾಳು ಮಾಡುತ್ತದೆ. ಆದರೆ ಕೆಲ ಮಹಿಳೆಯರು ಪತಿಯ ಮೇಲೆ ಹಕ್ಕು ಚಲಾಯಿಸಿ, ಅದರಲ್ಲೇ ನೆಮ್ಮದಿಯನ್ನು ಕಾಣುತ್ತಾರೆ. ಅಂಥ ರಾಶಿಯವರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
ಮೇಷ: ಮೇಷ ರಾಶಿಯ ಹೆಣ್ಣು ಮಕ್ಕಳು ವಿವಾಹದ ನಂತರ, ಪತಿಯ ಮೇಲೆ ಹಕ್ಕು ಚಲಾಸುವುದು ಹೆಚ್ಚು. ಅದರಲ್ಲೂ ಶಾಪಿಂಗ್ ವಿಷಯದಲ್ಲಿ ತಾವು ಏನೇನು ಕೇಳುತ್ತೆವೋ, ಅದೆಲ್ಲವೂ ಇವರಿಗೆ ಬೇಕು. ಇನ್ನು ಸ್ವಭಾವದ ಬಗ್ಗೆ ಮಾತನಾಡುವುದಾದರೆ, ಹೊಟ್ಟೆಕಿಚ್ಚಿನ ಸ್ವಭಾವ ಇವರಿಗೆ ಹೆಚ್ಚು. ಇವರ ಎದುರಿಗೆ ಯಾರನ್ನಾದರೂ ಹೊಗಳಿದರೆ, ಇವರಿಗೆ ಹೊಟ್ಟೆಕಿಚ್ಚು ಉಂಟಾಗುತ್ತದೆ. ಇನ್ನು ಇವರು ಹೇಳಿದ ಹಾಗೆ ಇವರ ಪತಿ ಮಾತು ಕೇಳಬೇಕು ಎನ್ನುವ ಇವರ ಸ್ವಭಾವದಿಂದಲೇ, ಇವರ ವೈವಾಹಿಕ ಜೀವನದಲ್ಲಿ ನೆಮ್ಮದಿ ಹಾಳಾಗುತ್ತದೆ.
ಸಿಂಹ: ಸಿಂಹ ರಾಶಿಯವರು ನಾಯಕತ್ವದ ಸ್ವಭಾವದವರು. ಹಾಗಾಗಿ ಇವರು ಎಲ್ಲಿ ಹೋದರೂ ತಾವೇ ನಾಯಕರಾಗಿರಬೇಕು ಎಂದು ಇಚ್ಛಿಸುತ್ತಾರೆ. ಮದುವೆಯಾದ ಬಳಿಕವೂ ಇದೇ ರೀತಿ, ಅವರ ಹಠ ಮುಂದುವರಿಯುತ್ತದೆ. ಹಾಗಾಗಿ ಇವರನ್ನು ಕಟ್ಟಿಕೊಂಡ ಇವರ ಪತಿಯೂ ಇವರ ಮಾತು ಕೇಳಲೇಬೇಕು ಎಂದು ಇವರು ಇಚ್ಛಿಸುತ್ತಾರೆ.
ವೃಶ್ಚಿಕ: ವೃಶ್ಚಿಕ ರಾಶಿಯವರದ್ದು ಇದೇ ಗುಣ. ಸಿಂಹ ರಾಶಿಯವರಂತೆ ವೃಶ್ಚಿಕ ರಾಶಿಯವರಿಗೂ ಎಲ್ಲಿ ಹೋದರೂ ತಾವೇ ಮುಂದಾಗಿರಬೇಕು ಎಂಬ ಗುಣವಿರುತ್ತದೆ. ಅಲ್ಲದೇ ಅಹಂ ತುಂಬಿರುತ್ತದೆ. ಅದರಲ್ಲೂ ಇಬ್ಬರೂ ಕೆಲಸಕ್ಕೆ ಹೋಗುವವರಾಗಿದ್ದರೆ, ಪತ್ನಿಯನ್ನೂ ಮೀರಿಸಿ, ಪತಿ ಯಶಸ್ಸು ಸಾಧಿಸಿದರೆ, ಆ ಯಶಸ್ಸನ್ನು ಆಕೆ ಸಂಭ್ರಮಿಸುವುದಿಲ್ಲ.
ಧನು: ಧನು ರಾಶಿಯವರು ಪ್ರವಾಸ ಪ್ರಿಯರು. ಅದರಲ್ಲೂ ಸೋಲೋ ಟ್ರಿಪ್ ಹೋಗುವುದು ತುಂಬಾ ಅಂದ್ರೆ ತುಂಬಾನೇ ಇಷ್ಟ.ಜೀವನ ಸಂಗಾತಿ ತಾನು ಬರುವುದಿಲ್ಲ ಎಂದರೆ, ಒಬ್ಬರೇ ಎದ್ದು ಪ್ರವಾಸಕ್ಕೆ ಹೋಗುವಷ್ಟು ಪ್ರವಾಸ ಪ್ರಿಯರು. ಇದೇ ರೀತಿ, ಯಾವುದಾದರೂ ಕೆಲಸವನ್ನು ಮಾಡಬೇಕು ಎಂದುಕೊಂಡರೆ, ಸಂಗಾತಿಯ ಮಾತು ಮೀರಿಯಾದರೂ ಆ ಕೆಲಸ ಮಾಡೇ ಮಾಡುತ್ತಾರೆ.