Saturday, December 7, 2024

Latest Posts

ತುಳಸಿ ಬಳಕೆಯಿಂದ ಆಗುವ ಅತ್ಯದ್ಭುತ ಲಾಭಗಳು ಇವು..

- Advertisement -

Health Tips: ತುಳಸಿ ಗಿಡಕ್ಕೆ ಭಾರತದಲ್ಲಿ ಅತ್ಯುನ್ನತ ದರ್ಜೆ ನೀಡಲಾಗಿದೆ. ತುಳಸಿ ಗಿಡವನ್ನು ದೇವಿಯ ರೂಪವಾಗಿ ಕಂಡು ಆಕೆಯ ಪೂಜೆ ಮಾಡಲಾಗುತ್ತದೆ. ಆಕೆಗೆ ನೀರೆರೆಯುವ ನೆಪದಲ್ಲಿ ತುಳಸಿ ಗಿಡ ಸಮೃದ್ಧವಾಗಿ ಬೆಳೆಯಲಿ ಎಂದು ಬೇಡಿಕೊಳ್ಳಲಾಗುತ್ತದೆ. ಏಕೆಂದರೆ, ಯಾರ ಮನೆಯಲ್ಲಿ ತುಳಸಿ ಗಿಡ ಸಮೃದ್ಧವಾಗಿ ಬೆಳೆಯುತ್ತದೆಯೋ, ಅಂಥ ಮನೆಯಲ್ಲಿ ಸದಾ ಆರ್ಥಿಕತೆ ಮತ್ತು ನೆಮ್ಮದಿ ತುಂಬಿ ತುಳುಕುತ್ತದೆ. ಮತ್ತು ಯಾರ ಮನೆಯ ತುಳಸಿ ಗಿಡ ಬಾಡಿ ಹೋಗಿದೆಯೋ, ಅಂಥ ಮನೆಯಲ್ಲಿ ಸದಾ ಜಗಳವಾಗುತ್ತಿರುತ್ತದೆ. ಜೀವ ಹಾನಿ, ಆರೋಗ್ಯಹಾನಿ, ಧನ ಹಾನಿಯಾಗುತ್ತದೆ ಅನ್ನೋ ನಂಬಿಕೆ ಇದೆ.

ಇನ್ನು ತುಳಸಿಯನ್ನು ಬರೀ ಧಾರ್ಮಿಕವಾಗಿ ನಂಬುವುದಷ್ಟೇ ಅಲ್ಲದೇ, ಹಲವು ಆರೋಗ್ಯ ಸಮಸ್ಯೆಗಳಿಗೆ ತುಳಸಿ ಪರಿಹಾರವಾಗಿದೆ. ಕೆಮ್ಮು, ಕಫ, ನೆಗಡಿ, ತಲೆಹೊಟ್ಟು, ಮುಖದ ಮೇಲಿನ ಮೊಡವೆ ಎಲ್ಲದಕ್ಕೂ ತುಳಸಿ ಪರಿಹಾರವಾಗಿದೆ. ಹಾಗಾಗಿ ಇಂದು ನಾವು ತುಳಸಿ ಬಳಸಿ ಯಾವ ರೀತಿ ನಮ್ಮ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು ಅಂತಾ ತಿಳಿಯೋಣ ಬನ್ನಿ..

ಪ್ರತಿದಿನ 2 ತುಳಸಿ ದಳದ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅಲ್ಲದೇ ನೀವು 14 ದಿನಗಳ ಕಾಲ ನಿರಂತರವಾಗಿ ಪ್ರತಿದಿನ 2 ತುಳಸಿ ದಳ ಸೇವಿಸಿದರೆ, ನಿಮ್ಮ ಚರ್ಮ ಆರೋಗ್ಯವಾಗಿರುತ್ತದೆ. ಚರ್ಮ ಸುಕ್ಕುಗಟ್ಟುವುದು, ತುರಿಕೆ, ಅಲರ್ಜಿಯಿಂದ ಗುಳ್ಳೆಯಾಗುವುದೆಲ್ಲ ಆಗುವುದಿಲ್ಲ.

ಏಕೆ ತುಳಸಿ ದಳ ಸೇವಿಸಿ, ಚರ್ಮದ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರೆ, ಚರ್ಮದ ಮೇಲೆ ಬರುವ ಸಾಮಾನ್ಯ ಸುಕ್ಕುಗಟ್ಟುವಿಕೆ, ತುರಿಕೆ, ಗುಳ್ಳೆ ಎಲ್ಲವೂ ಕ್ಯಾನ್ಸರ್, ಆರ್ಥೋರೈಟೀಸ್‌ನಂಥ ಮಾರಕ ರೋಗಗಳಾಗಿ ಟರ್ನ್ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ತುಳಸಿ ಸೇವನೆ ಮಾಡಿ, ನಿಮ್ಮ ಚರ್ಮದ ಆರೋಗ್ಯ ಕಾಪಾಡಿಕೊಳ್ಳಿ.

ಇನ್ನು ತುಳಸಿ ಸೇವನೆಯಿಂದ ಶ್ವಾಸಕೋಶದ ಸಮಸ್ಯೆ, ಕೆಮ್ಮಿನ ಸಮಸ್ಯೆ ಸೇರಿ ಉಸಿರಾಟಕ್ಕೆ ಸಂಂಬಧಿಸಿದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಒದಗಿಸುತ್ತದೆ. ಅಲ್ಲದೇ ತಿಂದ ಆಹಾರ ಸರಿಯಾಗಿ ಜೀರ್ಣವಾಗಿ, ನಿಮ್ಮ ಹೊಟ್ಟೆಯ ಆರೋಗ್ಯ ಚೆನ್ನಾಗಿರಲು ಸಹಕಾರಿಯಾಗಿದೆ.

- Advertisement -

Latest Posts

Don't Miss