Friday, November 22, 2024

Latest Posts

ಸೌಂದರ್ಯದ ಬಗ್ಗೆ ಹೆಚ್ಚು ಗಮನ ಹರಿಸುವ ರಾಶಿಯವರು ಇವರು

- Advertisement -

Horoscope: ವೃಷಭ ರಾಶಿ: ವೃಷಭ ರಾಶಿಯವರು ಸೌಂದರ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಇವರು ನೋಡಲು ಅಷ್ಟು ಸುಂದರವಾಗಿಲ್ಲದಿದ್ದರೂ, ಇರರುವ ಸೌಂದರ್‌ಯವನ್ನೇ ಉತ್ತಮವಾಗಿ ಇರಿಸಲು, ನೀಟ್ ಆಗಿ ಇರಲು ಪ್ರಯತ್ನಿಸುತ್ತಾರೆ. ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಕೊಡುವ ಇವರ ಮುಖದಲ್ಲಿ ಉತ್ತಮ ಕಳೆ ಇರುತ್ತದೆ.

ಸಿಂಹ ರಾಶಿ: ಸಿಂಹ ರಾಶಿಯವರು ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಲು ಬಯಸುತ್ತಾರೆ. ಸದಾ ನಂಬರ್ ಒನ್ ಸ್ಥಾನದಲ್ಲಿರಲು ಇಷ್ಟಪಡುತ್ತಾರೆ. ಹಾಗಾಗಿ ಸದಾ ಚೆಂದಗಾಣಿಸಲು ಏನೇನು ಬೇಕೋ, ಆ ಪ್ರಯತ್ನವನ್ನೆಲ್ಲ ಮಾಡುತ್ತಾರೆ. ಹೊಸ ಹೊಸ ಫ್ಯಾಷನ್ ಬಟ್ಟೆ, ಮೇಕಪ್ ಕಿಟ್ ಎಲ್ಲವನ್ನೂ ಇವರು ಇಷ್ಟಪಡುತ್ತಾರೆ.

ತುಲಾ ರಾಶಿ: ತುಲಾ ರಾಶಿಯವರು ಸದಾ ಟಿಪ್ ಟಾಪ್ ಆಗಿ ಇರಲು ಬಯಸುತ್ತಾರೆ. ಐಷಾರಾಮಿ ಜೀವನದ ಆಸೆ ಹೊಂದಿರುವ ಅವರಿಗೆ, ಸದಾ ಹೊಸ ಹೊಸ ಬಟ್ಟೆ, ಪರ್ಫ್ಯೂಮ್, ಶೂಸ್‌ಗಳೇ ಬೇಕು. ಬಟ್ಟೆ  ಸ್ವಲ್ಪ ಹಳೆಯದಾದರೂ, ಅದನ್ನು ಧರಿಸಲು ಅವರು ಇಚ್ಛಿಸುವುದಿಲ್ಲ. ಹೊಸ ಹೊಸ ಬಟ್ಟೆ ಖರೀದಿಸುವಲ್ಲಿ ಇವರು ಉತ್ಸುಕರಾಗಿರುತ್ತಾರೆ. ಸ್ವಚ್ಛತೆಗೆ ಹೆಚ್ಚಿನ ಬೆಲೆ ಕೊಡುವ ಇವರು, ಸದಾ ಚೈತನ್ಯದಾಯಕರಾಗಿ ಇರಲು ಬಯಸುತ್ತಾರೆ.

ಮಕರ ರಾಶಿ: ಮಕರ ರಾಶಿಯವರು ನೀಟ್ ಆಗಿರಲು ಇಷ್ಟಪಡುತ್ತಾರೆ. ಹೊಸ ಹೊಸ ಬಟ್ಟೆ ಖರೀದಿಸುವಷ್ಟು ಸಮಯ ಇವರಿಗಿಲ್ಲದಿದ್ದರೂ, ಇರುವ ಬಟ್ಟೆಯಲ್ಲೇ ಸದಾ ನೀಟ್ ಆಗಿ ಇರಲು ಇವರು ಬಯಸುತ್ತಾರೆ. ಸಿಂಪಲ್‌ ಆಗಿದ್ದರೂ, ಚೆಂದಗಾಣಿಸುವ ಆಸೆ ಇವರಿಗಿರುತ್ತದೆ.

- Advertisement -

Latest Posts

Don't Miss