Sunday, September 8, 2024

Latest Posts

ಸಿಕ್ಸ್ತ್ ಸೆನ್ಸ್ ಪಟ್ ಅಂತ ಕೆಲಸ ಮಾಡುವ ರಾಶಿಯವರು ಇವರು

- Advertisement -

Horoscope: ಕೆಲವರಿಗೆ ಇಂಥವರ ಬಳಿ ಸಹಾಯ ಪಡೆದರೆ ಮುಂದೇನಾಗಬಹುದು..? ಈ ರೀತಿ ಮಾತನಾಡಿದರೆ, ಅವರು ಹೇಗೆ ರಿಯಾಕ್ಟ್ ಮಾಡಬಹುದು..? ಎದುರಿಗಿರುವವರು ಸ್ವಾರ್ಥಿಗಳಾ..? ಇಲ್ಲಾ ನಿಯತ್ತಾಗಿ ಇರುವವರಾ..? ಈ ಕೆಲಸ ಮಾಡಿದರೆ, ಮುಂದೆ ಎಂಥ ಫಲಿತಾಂಶ ಬರಬಹುದು ಅನ್ನೋದು ಥಟ್ ಅಂತಾ ಗೊತ್ತಾಗುತ್ತದೆ. ಅದನ್ನು ಸಿಕ್ಸ್ತ್ ಸೆನ್ಸ್ ಅಂತಾ ಹೇಳುತ್ತಾರೆ. ಇಂಥ ಸಿಕ್ಸ್ತ್ ಸೆನ್ಸ್ ಥಟ್ ಅಂತಾ ವರ್ಕ್ ಆಗುವ ರಾಶಿಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.

ಕರ್ಕಾಟಕ ರಾಶಿ: ಸಣ್ಣ ವಯಸ್ಸಿನಿಂದಲೇ ಸ್ವಾಭಿಮಾನ ಹೊಂದಿದ ರಾಶಿ ಅಂದ್ರೆ ಕರ್ಕಾಾಟಕ ರಾಶಿಯವರು. ಇವರು ಯಾರ ಮೇಲೂ ಡಿಪೆಂಡ್ ಆಗಿರಲು ಬಯಸುವುದಿಲ್ಲ. ದುಡಿದು ತಿನ್ನುವ ಯೋಗ್ಯತೆ ಬಂದ ತಕ್ಷಣವೇ, ತಮ್ಮ ಖರ್ಚನ್ನು ತಾವೇ ನೋಡಿಕೊಳ್ಳುತ್ತಾರೆ. ಅಲ್ಲದೇ, ಪತಿಯ- ಪತ್ನಿಯ, ಅಥವಾ ಬೇರೆ ಯಾರೋ, ಹಣದ ಆಸೆ ತೋರಿಸಿದರೆಂದು, ಕೆಲಸ ಬಿಟ್ಟು ಸ್ವಾಭಿಮಾನ ಮರೆಯುವ ರಾಶಿಯವರಲ್ಲ ಇವರು. ಇವರಿಗೆ ಎದುರಿಗೆ ಇರುವವ ಮನಸ್ಸು ಅರಿಯುವ ಗುಣವಿರುತ್ತದೆ. ಅಲ್ಲದೇ, ಕೆಲವು ಸಂದರ್ಭದಲ್ಲಿ ಇಂಥ ಎಡವಟ್ಟಾಗಬಹುದು ಅನ್ನುವ ಸೂಚನೆ ಇವರಿಗೆ ಸಿಗುತ್ತದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಎದುರಿಗೆ ಇರುವವರು ನಗುವ ಮತ್ತು ಮಾತನಾಡುವುದನ್ನು ತಿಳಿದೇ, ಅವರ ಬುದ್ಧಿ ಎಂಥದ್ದು ಅಂತಾ ಗುರುತಿಸಿಬಿಡುತ್ತಾರೆ. ಹಾಗಾಗಿ ಚುರುಕು ಬುದ್ಧಿಯವರಾದ ಇವರಿಗೆ ಸೂಕ್ಷ್ಮತೆ ಬಹುಬೇಗ ಅರ್ಥವಾಗುತ್ತದೆ. ಎದುರಿಗಿರುವವರು ನಿಜವಾಗಿಯೂ ಕಾಳಜಿಯಿಂದ ಮಾತನಾಡುತ್ತಿದ್ದಾರಾ..? ಅಥವಾ ಅವರ ಕಾಳಜಿಯ ಮಾತಿನ ಹಿಂದೆ ಕೊಂಕು ಅಡಗಿದೆಯಾ ಅನ್ನೋದನ್ನು ಪಟ್ ಅಂತಾ ತಿಳಿದುಬಿಡುತ್ತಾರೆ.

ಮಕರ ರಾಶಿ: ಇವರ ಕಷ್ಟಪಡುವ ಗುಣವೇ, ಇವರ ಯಶಸ್ಸಿಗೆ ಕಾರಣವಾಗಿದೆ. ಇವರ ಸಾಂಸಾರಿಕ ಜೀವನಕ್ಕಿಂತ ಹೆಚ್ಚು ಇವರು, ಕೆಲಸದಲ್ಲಿಯೇ ಹೆಚ್ಚು ಗಮನ ಹರಿಸುತ್ತಾರೆ. ಹಾಗಾಗಿ ಇವರಿಗೆ ಸಾಕಷ್ಟು ಜನರನ್ನು ಭೇಟಿಯಾಗುವ, ಕೆಲಸ ಮಾಡುವ ಅವಕಾಶ ಸಿಗುತ್ತದೆ. ಹಾಗಾಗಿ ಯಾರ್ಯಾರ ಮನಸ್ಥಿತಿ ಹೇಗಿರುತ್ತದೆ ಅನ್ನೋದನ್ನು ಇವರು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ.

- Advertisement -

Latest Posts

Don't Miss