Bidar News: ದೇಶದೆಲ್ಲೆಡೆ ರಾಮನಾಮ ಭಜನೆ ಶುರುವಾಗಿದೆ. ಜನವರಿ 22 ಯಾವಾಗ ಬರುತ್ತೋ, ರಾಮಮಂದಿರ ಉದ್ಘಾಟನೆ ಯಾವಾಗ ಆಗತ್ತೋ, ನಾವು ರಾಮ ಜ್ಯೋತಿ ಯಾವಾಗ ಬೆಳಗುತ್ತೆವೋ ಎಂದು, ಹಲವರು ಕಾಯುತ್ತಿದ್ದಾರೆ. ಇನ್ನು ಬೇರೆ ಬೇರೆ ಕಡೆ ಟ್ರಿಪ್ ಹೋಗಬೇಕು ಅಂತಾ ಪ್ಲಾನ್ ಮಾಡಿಕೊಂಡವರು, ಎಲ್ಲವನ್ನೂ ಬಿಟ್ಟು, ಈ ಬಾರಿ ಅಯೋಧ್ಯೆಗೆ ಹೋಗೋಣವೆಂದು ಹೇಳುತ್ತಿದ್ದಾರೆ. ಮತ್ತೆ ಕೆಲವರು, ನಮಗೂ ಕೂಡ ರಾಮ ಮಂದಿರ ಉದ್ಘಾಟನೆ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಂತಾ ಅಂದುಕೊಂಡವರಿದ್ದಾರೆ. ಇವೆಲ್ಲವನ್ನೂ ಮೀರಿ, ನಮ್ಮ ಬೀದರ್‌ನ ಯುವಕರು ಸೈಕಲ್ ತುಳಿದುಕೊಂಡೇ ನಾವು ಅಯೋಧ್ಯೆಗೆ ಹೋಗುತ್ತೇವೆ. ರಾಮನ ದರ್ಶನ ಮಾಡುತ್ತೇವೆ ಎಂದಿದ್ದಾರೆ. ಈ ಬಗ್ಗೆ ಸ್ಪೆಶಲ್ ಸ್ಟೋರಿ ಇಲ್ಲಿದೆ ನೋಡಿ..
ಇವರೆಲ್ಲ ಬೀದರ್‌ನಿಂದ ಸೈಕಲ್ ಏರಿ, ಅಯೋಧ್ಯೆಗೆ ರಾಮನ ದರ್ಶನಕ್ಕೆ ಹೊರಟಿರುವ, ರಾಮಭಕ್ತರು. ಇವರೆಲ್ಲ ಪ್ರತಿದಿನ ಇವರ ಪಯಣದ ಆರಂಭದಲ್ಲಿ ಜೈಶ್ರೀರಾಮ್ ಎಂಬ ಘೋಷಣೆ ಕೂಗಿ, ಪಯಣವನ್ನು ಆರಂಭಿಸುತ್ತಿದ್ದಾರೆ. ಈಗಾಗಲೇ ಇವರು ಬೀದರ್‌ನಿಂದ 700 ಕೀ.ಮೀಗೂ ಹೆಚ್ಚು ದೂರ ಕ್ರಮಿಸಿದ್ದು, ಇನ್ನು 10 ದಿನದೊಳಗೆ ಅಯೋಧ್ಯೆಗೆ ತಲುಪಲಿದ್ದಾರೆ.
ನಾವು ಇನ್ನೂ ತುಂಬಾ ದೂರ ಹೋಗಬೇಕು. ಹಾಗಾಗಿ ನೀವೆಲ್ಲ ಜೈ ಶ್ರೀರಾಮ್ ಎಂದು ಕಮೆಂಟ್ ಮಾಡಿದ್ರೆ, ನಮಗೂ ಸೈಕಲ್ ಪ್ರಯಾಣಕ್ಕೆ ಉತ್ಸಾಹ ಬರುತ್ತದೆ ಅಂತಾ ಹೇಳ್ತಾರೆ ಈ ಶ್ರೀರಾಮ ಭಕ್ತರು. ಡಿಸೆಂಬರ್ 25ಕ್ಕೆ ಇವರೆಲ್ಲ ಬೀದರ್‌ನಿಂದ ಸೈಕಲ್ ಮೂಲಕ, ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾರೆ. ಇದೀಗ ಇನ್ನು 10 ದಿನದಲ್ಲಿ ನಾವು ಅಯೋಧ್ಯೆಗೆ ತಲುಪಲಿದ್ದೇವೆ ಎಂದು ಈ ಯುವಕರ ಗುಂಪು ತಿಳಿಸಿದೆ.
ಅಜಯ್ ಶರ್ಮಾ, ವಿಜಯ್ ಶರ್ಮಾ, ಉದಯ್ ಶರ್ಮಾ, ವಿಷ್ಣು ಮೋಗ್ಟೆ, ಜಗ್ಗು ಕರ್ಗಾರ್, ಅಂಬರೀಷ್, ಸಾಯಿ ಬಾವ್ಗಿ, ಅಭಿಷೇಕ್ ಕೋಹಿರ್, ಭಗ್ಗು ರಾಜ್ ಇಷ್ಟು ಜನ ರಾಮಭಕ್ತರು ಬೀದರ್ ಟೂ ಅಯೋಧ್ಯಾ, ಸೈಕಲ್ ಪಯಣ ಬೆಳೆಸಿದ್ದಾರೆ. ಇನ್ನು ಪ್ರತೀ ರಾತ್ರಿ, ತಾವು ಯಾವ ಊರಲ್ಲಿರುತ್ತಾರೋ, ಆ ಊರಿನ ರಾಮ ಅಥವಾ ಆಂಜನೇಯ ಸ್ವಾಮಿ ದೇವಸ್ಥಾನದಲ್ಲೇ ಇವರು ತಂಗುತ್ತಾರೆ. ಮರುದಿನ ಕೇಸರಿ ಅಂಗಿ ಧರಿಸಿ, ಮತ್ತೆ ಅಯೋಧ್ಯೆಗೆ ಪಯಣಿಸುತ್ತಾರೆ. ಒಟ್ಟಾರೆಯಾಗಿ, ನಾವು ಕೂಡ ಜನ್ಮದಲ್ಲಿ ಒಮ್ಮೆಯಾದರೂ, ಅಯೋಧ್ಯೆಗೆ ಹೋಗಬೇಕು ಎಂದು ಕಾದು ಕುಳಿತುಕೊಳ್ಳುವವರ ಮಧ್ಯೆ, ಆದದ್ದಾಗಲಿ, ಸೈಕಲ್ ಏರಿಯಾದರೂ ನಾವು ರಾಮನ ದರ್ಶನ ಮಾಡೇಬಿಡೋಣವೆಂದು ಹೊರಟಿರುವ ಈ ಕೇಸರಿ ಯುವಕರಿಗೆ ಒಂದು ಸಲಾಂ. ಇವರ ಅಯೋಧ್ಯೆ ಪಯಣ ಸುಖಕರವಾಗಿರಲಿ ಎಂಬುದೇ ನಮ್ಮ ಆಶಯ. ಜೈ ಶ್ರೀ ರಾಮ್.
‘ಇಂಥವರನ್ನು ಬಂಧಿಸದೇ, ರಾಜಾರೋಷವಾಗಿ ತಿರುಗಾಡಲು ಬಿಟ್ಟರೆ ಶ್ರೀರಾಮಚಂದ್ರನೂ ಕ್ಷಮಿಸಲಾರ’
ಮಹಿಳೆಗೆ ನೆರವು: ಕೊಟ್ಟ ಮಾತಿನಂತೆ ಭರವಸೆ ಈಡೇರಿಸಿದ ಸಚಿವ ಸಂತೋಷ್ ಲಾಡ್