Sunday, November 9, 2025

Latest Posts

ಹಣಕ್ಕಾಗಿ ವಿದ್ಯಾರ್ಥಿನಿಯ ಉತ್ತರ ಪತ್ರಿಕೆ ಅದಲು – ಬದಲು!

- Advertisement -

ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಚಿಂತೆಗೀಡಿಸುವಂತಹ ಅಕ್ರಮ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬಿಎಸ್ಸಿ 5ನೇ ಸೆಮಿಸ್ಟರ್ ವಿದ್ಯಾರ್ಥಿನಿ ಸೈದಾ ಸಾನಿಯಾ ಅವರ ಉತ್ತರ ಪತ್ರಿಕೆಯನ್ನು ಬೇರೊಬ್ಬರದೊಂದಿಗೆ ಅದಲುಬದಲಾಗಿ, ಶೂನ್ಯ ಅಂಕ ನೀಡಿರುವ ಘಟನೆ ತೀವ್ರ ಆಕ್ರೋಶ ಉಂಟುಮಾಡಿದೆ. ಈ ಪ್ರಕರಣದಲ್ಲಿ ವಿಶ್ವವಿದ್ಯಾಲಯದ ಕೆಲ ಸಿಬ್ಬಂದಿಯೇ ಹಣಕ್ಕಾಗಿ ಕೃತ್ಯ ಎಸಗಿರುವ ಆರೋಪಗಳು ಕೇಳಿಬಂದಿದ್ದು, ಪೋಷಕರಿಂದ ಹಾಗೂ ವಿದ್ಯಾರ್ಥಿಗಳಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೀದರ್‌ನ ಮೂಲದ ಸೈದಾ ಸಾನಿಯಾ, 5ನೇ ಸೆಮಿಸ್ಟರ್‌ನ ಮ್ಯಾಥಮೆಟಿಕ್ಸ್ ವೆಕ್ಟರ್ ಕ್ಯಾಲ್ಕುಲಸ್ & ಎನಲಿಟಿಕಲ್ ಜಿಯೋಮೆಟ್ರಿ ವಿಷಯದಲ್ಲಿ ಶೂನ್ಯ ಅಂಕ ಪಡೆದಿರುವುದನ್ನ ಕಂಡು ಶಾಕ್‌ ಆಗಿದ್ದಾರೆ. ತಕ್ಷಣವೇ ಅವರು ಉತ್ತರ ಪತ್ರಿಕೆಯ ಫೋಟೋಕಾಪಿಗಾಗಿ ಅರ್ಜಿ ಸಲ್ಲಿಸಿದರು. ಅದಕ್ಕೆ ಪ್ರತಿಯಾಗಿ ವಿವಿ ನೀಡಿದ ಫೋಟೋಕಾಪಿಯನ್ನ ನೋಡಿದಾಗ, ಆ ಪತ್ರಿಕೆಯಲ್ಲಿ ‘ದಯವಿಟ್ಟು ನನ್ನನ್ನು ಪಾಸ್ ಮಾಡಿ’ ಎಂಬ ಸಾಲುಗಳು ಬರೆದಿಟ್ಟಿದ್ದನ್ನ ನೋಡಿ ವಿದ್ಯಾರ್ಥಿನಿ ಬೆಚ್ಚಿಬಿದ್ದಿದ್ದಾರೆ.

ಇದು ನನ್ನ ಬರಹವಲ್ಲ. ನಾನು ಈ ರೀತಿ ಬರೆಯಲಿಲ್ಲ. ನನ್ನ ಹಿಂದಿನ ಫಲಿತಾಂಶಗಳನ್ನ ಪರಿಶೀಲಿಸಿ ಎಂದು ಸೈದಾ ಪ್ರತಿಭಟಿಸಿದರೂ, ವಿವಿಯ ಅಧಿಕಾರಿಗಳು ಪ್ರಾಥಮಿಕವಾಗಿ ಆ ಪತ್ರಿಕೆ ಅವರದ್ದೇ ಎಂದು ಹೇಳಿದ್ದಾರೆ.
ಅಂತಿಮವಾಗಿ ಉತ್ತರ ಪತ್ರಿಕೆಯ ಬಾರ್‌ಕೋಡ್ ಸ್ಕ್ಯಾನ್ ಮಾಡಿದಾಗ, ಅದು ಸೈದಾ ಅವರದ್ದಲ್ಲ, ಬೇರೊಬ್ಬ ಪುರುಷ ವಿದ್ಯಾರ್ಥಿಯದ್ದು ಎಂಬುದಾಗಿ ದೃಢವಾಯಿತು. ಇದರಿಂದ, ಉತ್ತರ ಪತ್ರಿಕೆಗಳನ್ನು ಹಣಕ್ಕಾಗಿ ಜಾಣೆತನದಿಂದ ಅದಲುಬದಲು ಮಾಡಲಾಗಿದೆ ಎಂಬ ಶಂಕೆಗೆ ಬಲವಾದ ಕಾರಣ ಸಿಕ್ಕಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss