Sandalwood News: ಸ್ಯಾಂಡಲ್‌ವುಡ್ ನಟ ಜಗ್ಗೇಶ್, ತಮ್ಮ ಹಳೆಯ ನೆನಪನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಾವು 24 ವರ್ಷದವರಿದ್ದಾಗ, ವೈವಾಹಿಕ ಜೀವನ ನಡೆಸುತ್ತಿದ್ದಾಗ, ಅದಾಗಲೇ ತಂದೆಯೂ ಆಗಿದ್ದರು. ಹೀಗಿರುವಾಗ, ಯಾವ ರೀತಿಯಾಗಿ ಅವರು ಜೀವನ ನಿಭಾಯಿಸಿದ್ದರು ಅನ್ನೋ ಬಗ್ಗೆ ಅವರೇ ಬರೆದುಕೊಂಡಿದ್ದಾರೆ.
1987 ಆಗ 24ವರ್ಷ ಪ್ರಾಯ. 18ವರ್ಷದ ಮಡದಿ ಪರಿಮಳ. 6ತಿಂಗಳ ಮಗು ಗುರುರಾಜ..15×10 ಮನೆ 500ರೂ ಬಾಡಿಗೆ 250ರೂ ಮನೆ ಕರ್ಚು.. 2ಜೀನ್ಸ್ ಪ್ಯಾಂಟ್ 4ಶರ್ಟ್ ಧರಿಸಲು..ಇಂಥ ಸ್ಥಿತಿಯಲ್ಲಿ ಗೆದ್ದೆ ಗೆಲ್ಲುವೆ ಒಂದುದಿನ ಎಂಬ ಛಲ. ಮನಸ್ಸನ್ನು ರೇಸು ಕುದುರೆಯಂತೆ ತಯಾರು ಮಾಡಿ ಕೆಲಸಕ್ಕೆ ಬರದ ಯಾವ ಚಿಂತೆಯು ಮಾಡದೆ ಸ್ನಾನ ಪೂಜೆ ಇದ್ದದ್ದು ತಿಂದು ಕೆಲಸ ಹುಡುಕಿ ಗಾಂಧಿನಗರ ಅಲೆಯುವ ಕಾಯಕ.
ಅಂದಿನ ಕೆಲ ನಿರ್ದೇಶಕ ನಿರ್ಮಾಪಕರಿಗೆ ನನ್ನ ಮೇಲೆ ಕರುಣೆ ತೋರಿ ಅನ್ನ ಹಾಕಿ ಉತ್ಸಾಹ ತುಂಬಿದರೆ . ಅನೇಕರು ಅಪಮಾನ ಮಾಡಿ ಸಿನಿಮ ಬಿಟ್ಟು ಕೂಲಿ ಮಾಡು ಎಂದು ಅಟ್ಟುತ್ತಿದ್ದರು.
ಆಗ ನನಗೆ ಒಬ್ಬ ಗುರುಸಿಕ್ಕ ಅವರೆ ಕಲಿಯುಗ ಕಲ್ಪತರು ರಾಯರು..ಅವರ ಹಾರೈಕೆಯಿಂದ ನಾನು ಹೇಗೆ ಬೆಳೆದೆ ಅರಿವಿಲ್ಲಾ..ಮನಸ್ಸಿನ ಬೇಡಿಕೆ ಹೇಗೆ ಈಡೇರಿತು ಅರಿವಿಲ್ಲಾ..ಅಂದಿನ 24ವರ್ಷದವ ಇಂದು 62ವರ್ಷವಾಗಿದೆ ಅರಿವಿಲ್ಲಾ. ಶ್ರೀ ಕೃಷ್ಣ ಎಲ್ಲ ಮನುಕುಲಕ್ಕೆ ಒಂದು ಮಾತು ಕೊಟ್ಟಿದ್ದಾನೆ “ಶ್ರದ್ಧಾವಾನ್ ಲಭತೆ ಙ್ನಾನಂ”
ಅರ್ಥಾತ್ ಸುಂದರವಾಗಿ ಚಿಂತಿಸಿ ಬಾಳು ಮಿಕ್ಕದ್ದು ನನಗೆ ಬಿಡು ಎಂಬ ಅರ್ಥ. ಙ್ನಾನ ಕಲಿಸಿದ ಅಮ್ಮ,ಬದುಕು ಕಲಿಸಿದ ಅಪ್ಪ,ನನ್ನ ಸುಖದುಃಖಕ್ಕೆ ಜೊತೆಗಾತಿ ಪರಿಮಳ.. ಅನ್ನ ನೀಡಿದ ಚಿತ್ರರಂಗಕ್ಕೆ ಶರಣು. ಮಿತ್ರರೆ ಶುದ್ಧರಾಗಿ ಶ್ರಮಿಸಿ ಗೆದ್ದ ಮನುಷ್ಯರಾಗಿ.ನನ್ನ ಬದುಕಿನ ನೆನಪಿನ ಅಂಗಳ. ದೆಹಲಿಯ ಮನೆಯಲ್ಲಿ ಒಬ್ಬನೆ ಕೂತಾಗ ನೋಡಿ ಮರೆತ ಚಿತ್ರದಂತೆ ನೆನಪಾಯಿತು ನನ್ನ ಬದುಕು. ಶುಭ ಮಂಗಳವಾರ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.