www.karnatakatv.net : ಕ್ಲೈಮೇಟ್ ಬದಲಾದ್ರೆ ಡ್ರೈ ಸ್ಕಿನ್, ಕೂದಲು ಉದುರೋದು ಹೀಗೆ ಹತ್ತಾರು ಸಮಸ್ಯೆ ಎದುರಾಗುತ್ತೆ. ಇತ್ತೀಚೆಗೊಂತೂ ಹೆಣ್ಮಕ್ಳು ಎಷ್ಟು ಬ್ಯೂಟಿ ಕಾನ್ಶಿಯಸ್ ಆಗಿದ್ದಾರೆ ಅಂದ್ರೆ, ಒಂದೇ ಒಂದು ಪಿಂಪಲ್ ಬಂದರೂ ಕೂಡ ಹೊರಗೆ ಹೆಜ್ಜೆ ಇಡೋದೇ ಇಲ್ಲ. ನಿಮ್ಗೂ ಏನಾದ್ರೂ ಹೀಗೆ ಡ್ರೈ ಸ್ಕಿನ್, ಪಿಂಪಲ್ಸ್ ಇದ್ಯಾ ಹಾಗಾದ್ರೆ ಇದಕ್ಕೆಲ್ಲಾ ಸಿಂಪಲ್ ಸಲ್ಯೂಷನ್ ಇಲ್ಲಿದೆ.
ಸೌಂದರ್ಯವೃದ್ಧಿ ಮಾಡೋ ವಸ್ತುಗಳಲ್ಲಿ ತೆಂಗಿನ ಎಣ್ಣೆ ಮೊದಲನೆ ಸ್ಥಾನ ಪಡೆಯುತ್ತೆ. ಚರ್ಮದ ಸಮಸ್ಯೆ ಮತ್ತು ಕೂದಲುದುರುವಿಕೆ ಎರಡಕ್ಕೂ ತು೦ಬಾ ಯೂಸ್ ಫುಲ್. ತೆಂಗಿನ ಎಣ್ಣೆಗೆ ತ್ವಚೆಯ ತೇವಾಂಶ ಕಾಪಾಡೋ ಗುಣ, ರಕ್ಷಣೆ ಹಾಗೂ ಆಂಟಿ ಬ್ಯಾಕ್ಟೀರಿಯಲ್ ಗುಣ ಹೊಂದಿದೆ. ಒಣ ತ್ವಚೆ ಇರೋವ್ರು ವಾರಕ್ಕೆರಡು ಅಥವಾ ಮೂರು ಬಾರಿ ಸ್ವಲ್ಪ ಬಿಸಿ ಮಾಡಿದ ಕೊಬ್ಬರಿ ಎಣ್ಣೆಯನ್ನ ಮುಖಕ್ಕೆ ಹಚ್ಚಿ ೫ ನಿಮಿಷಗಳ ಕಾಲ ಮಸಾಜ್ ಮಾಡೋದ್ರಿಂದ ಚರ್ಮಕ್ಕೆ ಶೈನ್ ಬರುತ್ತೆ. ಆದ್ರೆ ಮುಖದಲ್ಲಿ ಈಗಾಗ್ಲೇ ಮೊಡವೆಗಳಿದ್ದರೆ ಇದನ್ನ ಬಳಸದೇ ಇದ್ದರೆ ಉತ್ತಮ. ಕೂದಲುದುರುವಿಕೆ ವಿಚಾರದಲ್ಲೂ ಕೂಡ ತೆಂಗಿನೆಣ್ಣೆ ತುಂಬಾ ಹೆಲ್ಫ್ ಫುಲ್. ತೆಂಗಿನ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಹತ್ತಿಯ ಸಹಾಯದಿಂದ ಕೂದಲ ಬುಡಕ್ಕೆ ಹಚ್ಚಿದ್ರೆ ಕೂದಲ ಬುಡ ಸ್ಟ್ರಾಂಗ್ ಆಗುತ್ತೆ
ಎರಡನೆಯದ್ದಾಗಿ ಅರಿಶಿಣ. ಅರಿಶಿನಕ್ಕೆ ಐದಾರು ಡ್ರಾಪ್ ಕೊಬ್ಬರಿ ಎಣ್ಣೆ ಅಥವಾ ಆಲಿವ್ ಆಯಿಲ್ ಬೆರಸಿ ಪ್ರತಿದಿನ ಹಚ್ಚಿದ್ರೆ ಒಂದೇ ವಾರದಲ್ಲಿ ನೀವು ನಂಬೋಕೆ ಸಾಧ್ಯವಾಗದ ರಿಸಲ್ಟ್ ಸಿಗುತ್ತೆ. ಚರ್ಚಮವನ್ನ ತಿಳಿಯಾಗಿಸಿ, ಮುಖದಲ್ಲಿನ ಕಪ್ಪು ಕಲೆಗಳನ್ನು ತೆಗೆದು ಹಾಕುತ್ತೆ. ಅಲ್ಲದೆ ಇದರಲ್ಲಿರೋ ಆಂಟಿ ಆಕ್ಸಿಡಂಟ್ ಗುಣ ಚರ್ಮದ ಸುಕ್ಕುಗಟ್ಟುವಿಕೆಯನ್ನು ತಡೆಯುತ್ತೆ.
ಮೂರನೆಯದ್ದಾಗಿ ಅಲೋವೆರ ಅಥವಾ ಲೋಳೆಸರ. ಇದು ಆಯುರ್ವೇದದಲ್ಲಿ ಅತಿ ಹೆಚ್ಚು ಬಳಸಲ್ಪಡೋ ಬಹುಮುಖ್ಯ ಸಸ್ಯ. ಇದರ ಬಳಕೆಯಿಂದ ಮೃದುವಾದ ಚರ್ಮ ಹಾಗೂ ಚರ್ಮಕ್ಕೆ ಕಾಂತಿ ನೀಡುತ್ತೆ. ಪ್ರತಿನಿತ್ಯ ಅಲೋವೆರಾ ಜೆಲ್ ಅನ್ನು ಮುಖಕ್ಕೆ ಹಚ್ಚಿ ೧೦ ನಿಮಿಷದ ಬಳಿಕ ಮುಖ ತೊಳೆದ್ರೆ ಕೆಲವೇ ದಿನಗಳಲ್ಲಿ ಮುಖದ ಕಾಂತಿ ಹೆಚ್ಚಾಗೋದನ್ನ ನೀವೇ ಗಮನಿಸಬಹುದು.
ಕಡಲೇಹಿಟ್ಟು ಬಳಕೆಯಿಂದಲೂ ಸೌಂದರ್ಯ ವೃದ್ಧಿಯಾಗುತ್ತೆ. ಇದು ಮಾರುಕಟ್ಟೆಗಳಲ್ಲಿ ಸಿಗೋ ಕೆಮಿಕಲ್ ಯುಕ್ತ ಫೇಸ್ ಪ್ಯಾಕ್ ಗಳಿಗಿಂತ ೧೦ ಪಟ್ಟು ಸೇಫ್ ಮತ್ತು ಪರಿಣಾಮಕಾರಿ ಕೂಡ. ಹೌದು ಇದು ನಮಗೆ ಕಮ್ಮಿ ಬೆಲೆಯಲ್ಲಿ ಸಿಗೋ ನ್ಯಾಚುರಲ್ ಫೇಸ್ ಪ್ಯಾಕ್ ಅಂದ್ರೆ ತಪ್ಪಾಗೋದಿಲ್ಲ. ಒಂದು ಸ್ಪೂನ್ ಕಡಲೆ ಹಿಟ್ಟಿಗೆ ಎರಡು ಚಿಟಿಕೆ ಅರಿಶಿನ, ಒಂದು ಸ್ಪೂನ್ ಮೊಸರು ಸೇರಿಸಿ ಮುಖಕ್ಕೆ ಹಚ್ಚಿ ೨೦ ನಿಮಿಷ ಬಿಟ್ಟು ತೊಳೆದ್ರೆ, ತ್ವಚೆಯಲ್ಲಿರೋ ಡೆಡ್ ಸ್ಕಿನ್, ವೈಟ್ ಹೆಡ್ಸ್ ಗಳನ್ನೂ ಕೂಡ ತೆಗೆದುಹಾಕುತ್ತೆ.
ಈ ಎಲ್ಲಾ ಬ್ಯೂಟಿ ಟಿಪ್ಸ್ ಗಳನ್ನು ನೀವು ಫಾಲೋ ಮಾಡಿದ್ರೆ, ಪ್ರತಿ ತಿಂಗಳು ನೀವು ಬ್ಯೂಟಿ ಪಾರ್ಲರ್ ಗೆ ಅಂತ ಖರ್ಚು ಮಾಡೋ ಹಣ ಉಳಿಸಬಹುದು ಜೊತೆಗೆ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ಸುಂದರ ತ್ವಚೆ ಪಡೆಯಬಹುದು.