Friday, September 20, 2024

Latest Posts

ಜೀರ್ಣ ಕ್ರಿಯೆ ಸರಿಯಾಗಿ ಆಗದಿದ್ದಲ್ಲಿ ಈ ಕಾಯಿಲೆ ಬರುತ್ತೆ..

- Advertisement -

Health Tips: ನಮ್ಮ ದೇಹಕ್ಕೆ ಬರುವ ಹಲವು ಖಾಯಿಲೆಗಳಿಗೆ ಸಾಮಾನ್ಯ ಕಾರಣ ಅಂದ್ರೆ, ಜೀರ್ಣಕ್ರಿಯೆ ಸಮಸ್ಯೆ. ಯಾರಿಗೆ ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತಿಲ್ಲವೋ, ಅಂಥವರಿಗೆ ಹಲವು ಖಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಜೀರ್ಣಕ್ರಿಯೆ ಸಮಸ್ಯೆಯನ್ನು ಮೊದಲು ಸರಿಪಡಿಸಿಕೊಳ್ಳಬೇಕು. ಹಾಗಾದ್ರೆ ಜೀರ್ಣಕ್ರಿಯೆ ಸಮಸ್ಯೆ ಹೇಗೆ ಬರುತ್ತದೆ..? ಇದು ಬಂದ್ರೆ, ಪರಿಹಾರ ಹೇಗೆ ಕಂಡುಕೊಳ್ಳಬೇಕು ಎಂದು ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ.

ಜೀರ್ಣಕ್ರಿಯೆ ಸಮಸ್ಯೆ ಉಂಟಾಗಲು ನಾವು ಸೇವಿಸುವ ಅನಾರೋಗ್ಯಕರ ಆಹಾರ ಮತ್ತು ಅನಾರೋಗ್ಯಕರ ಜೀವನ ಶೈಲಿಯೇ ಕಾರಣವಾಗಿದೆ. ಜಂಕ್ ಫುಡ್, ಬೇಕರಿ ತಿಂಡಿ, ಟೀ ಕಾಫಿ ಇಂಥಹುದ್ದನ್ನೆಲ್ಲ ಖಾಲಿ ಹೊಟ್ಟೆಯಲ್ಲಿ ತಿಂದಾಗಲೇ, ಜೀರ್ಣಕ್ರಿಯೆ ಸಮಸ್ಯೆ ಉಂಟಾಗುತ್ತದೆ. ಈ ವೇಳೆ ಉದ್ಭವಿಸುವ ಖಾಯಿಲೆ ಅಂದ್ರೆ ಆಮವಾತ ಖಾಯಿಲೆ.

ಆಮವಾತ ಖಾಯಿಲೆ ಬರಲು ಕಾರಣ, ಅರ್ಧ ಜೀರ್ಣ ರೋಗ. ಅಂದ್ರೆ ನೀವು ತಿಂದ ಆಹಾರ ಅರ್ಧ ಜೀರ್ಣವಾಗುತ್ತದೆ. ಉಳಿದ ಆಹಾರದ ಅಂಶ ಮಲವಿಸರ್ಜನೆ ಮೂಲಕ ಹೊರ ಬರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ.

- Advertisement -

Latest Posts

Don't Miss