KPSC ಸುಧಾರಣೆ ದೃಷ್ಟಿಯಿಂದ ಇದು ಮಹತ್ವದ ಹೆಜ್ಜೆ: ಅಧಿಕಾರಿ ಅಮಾನತಿಗೆ ಸುನೀಲ್ ಕುಮಾರ್ ಸಹಮತ

Political News: ಪುತ್ರಿಗೆ ಸರ್ಕಾರಿ ಕೆಲಸ ಕೊಡಿಸಬೇಕೆಂದು ಸುಳ್ಳು ದಾಖಲೆ ನೀಡಿದ ಆರೋಪದ ಮೇಲೆ ಕೆಪಿಎಸ್‌ಸಿ ಶಿವಶಂಕರಪ್ಪ ಎಸ್.ಸಾಹುಕಾರ್ ಎಂಬುವವರನ್ನು ಅಮಾನತು ಮಾಡಲಾಗಿದೆ.

ಈ ಬಗ್ಗೆ ಸಹಮತ ವ್ಯಕ್‌ತಪಡಿಸಿರುವ ಬಿಜೆಪಿ ಶಾಸಕ ಸುನೀಲ್ ಕುಮಾರ್, ಇದು ಮಹತ್ವದ ಹೆಜ್ಜೆ ಎಂದಿದ್ದಾರೆ. ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದಿರುವ ಅವರು, ಕೆಪಿಎಸ್ ಸಿ ನೇಮಕ ಹಗರಣದ ಬಗ್ಗೆ ನಾನು ಈ ಹಿಂದೆ ಸದನದಲ್ಲಿ ಸುದೀರ್ಘ ಚರ್ಚೆ ನಡೆಸಿದ್ದೆ. ಕರ್ನಾಟಕ ಲೋಕಸೇವಾ ಆಯೋಗ ಎಂಬುದು ಭ್ರಷ್ಟರ ಆಡಂಬೋಲವಾಗಿದೆ. ಭ್ರಷ್ಟಾಚಾರವನ್ನು ಬಿತ್ತಿ ಭ್ರಷ್ಟಾಚಾರವನ್ನೇ ಬೆಳೆಯುವ ಈ ಸಂಸ್ಥೆಯಿಂದ ದಕ್ಷ ಅಧಿಕಾರಗಳ ನಿರ್ಮಾಣ ಅಸಾಧ್ಯ ಎಂದು ನೈಜ ಕಳವಳ ವ್ಯಕ್ತಪಡಿಸಿದ್ದೆ‌.

ನನ್ನ ವಾದಕ್ಕೆ ವಿಪಕ್ಷ ನಾಯಕ ಆರ್.ಅಶೋಕ, ಹಿರಿಯ ಶಾಸಕ ಎಸ್.ಸುರೇಶ್ ಕುಮಾರ್, ಸಚಿವರಾದ ಕೃಷ್ಣ ಬೈರೇಗೌಡ, ಪ್ರಿಯಾಂಖ ಖರ್ಗೆ ಮೊದಲಾದವರು ಸಹಮತ ವ್ಯಕ್ತಪಡಿಸಿದ್ದರು. ಜತೆಗೆ ಕೆಪಿಎಸ್ ಸಿಗೆ ಕಾಯಕಲ್ಪ ನೀಡುವುದಕ್ಕಾಗಿ ಸದನ ಸಮಿತಿಯನ್ನು ರಚನೆ ಮಾಡಲಾಗಿತ್ತು. ಇದೀಗ ಘನತೆವೆತ್ತ ರಾಜ್ಯಪಾಲರು ಕೆಪಿಎಸ್ ಸಿ ಅಧ್ಯಕ್ಷರ ದುರ್ನಡತೆಯನ್ನು ಖಂಡಿಸಿ ಅವರನ್ನು ಅಮಾನತುಗೊಳಿಸಿದ್ದಾರೆ. ಕೆಪಿಎಸ್ ಸಿ ಸುಧಾರಣೆ ದೃಷ್ಟಿಯಿಂದ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಆದೇಶವನ್ನು ಶ್ಲಾಘಿಸಿದ್ದಾರೆ.

About The Author