Monday, September 9, 2024

Latest Posts

ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು, ಕಡೆಗೂ ಪ್ರತಿಕ್ರಿಯೆ ನೀಡಿದ “ರಾಗಾ”..!

- Advertisement -

ಕಣಿವೆ ರಾಜ್ಯ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಗ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಡೆಗೂ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡಿದ್ದಾರೆ. ಆರ್ಟಿಕಲ್​ 370 ರದ್ದತಿ ವಿಚಾರವಾಗಿ, ಮೋದಿ ಸರ್ಕಾರದ ಈ ನಿರ್ಧಾರಕ್ಕೆ ಆಕ್ಷೇಪವೆತ್ತಿ ಇಂದು ರಾಹುಲ್​​​​ ಟ್ವೀಟ್​ ಮಾಡಿದ್ದಾರೆ. ಜಮ್ಮು ಕಾಶ್ಮೀರವನ್ನು ಇಬ್ಭಾಗ ಮಾಡುವುದರಿಂದ, ಜನಪ್ರತಿನಿಧಿಗಳನ್ನ ಬಂಧಿಸುವುದರಿಂದ ಹಾಗೂ ನಮ್ಮ ಸಂವಿಧಾನವನ್ನ ಉಲ್ಲಂಘನೆ ಮಾಡುವುದರಿಂದ ರಾಷ್ಟ್ರದ ಏಕೀಕರಣ ಹೆಚ್ಚಾಗುವುದಿಲ್ಲ. ಈ ದೇಶ, ಜನರಿಂದ ನಿರ್ಮಿತವಾಗಿದೆಯೇ ಹೊರತು, ತುಂಡು ಭೂಮಿಗಳಿಂದ ಅಲ್ಲ ಅಂತ ರಾಹುಲ್​ ಟ್ವಿಟರ್​ನಲ್ಲಿ ಹರಿಹಾಯ್ದಿದ್ದಾರೆ. ಅಷ್ಟೇ ಅಲ್ಲದೆ ಈ ರೀತಿ ಅಧಿಕಾರ ದುರುಪಯೋಗ ಮಾಡಿಕೊಳ್ಳುವುದರಿಂದ, ನಮ್ಮ ರಾಷ್ಟ್ರದ ಭದ್ರತೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.

https://www.youtube.com/watch?v=kV4AYFqnOLE
- Advertisement -

Latest Posts

Don't Miss