Thursday, November 7, 2024

Latest Posts

‘ಇದು ದೇವೇಗೌಡರ ಜಿಲ್ಲೆ, ಇಲ್ಲಿ ಕಾಂಗ್ರೆಸ್‌ಗೆ ಅನುಕೂಲ ಆಗಲ್ಲ ಅಂತ ನಮ್ಮ ಜಿಲ್ಲೆಯನ್ನು ಕಡೆಗಣಿಸಿದ್ದಾರೆ’

- Advertisement -

Hassan News: ಹಾಸನ : ಹಾಸನದಲ್ಲಿ ಮಾಜಿಸಚಿವ ಎಚ್.ಡಿ.ರೇವಣ್ಣ ಬಜೆಟ್ ಬಗ್ಗೆ ಮಾತನಾಡಿದ್ದು, ನಿರಾಸೆ ವ್ಯಕ್ತಪಡಿಸಿದ್ದಾರೆ.

ಸಿಎಂ ಅವರು ಹದಿನೈದನೇ ಬಜೆಟ್ ಮಂಡಿಸಿದ್ದಾರೆ. ರಾಜ್ಯದಲ್ಲೇ ಹಾಸನ ಜಿಲ್ಲೆ ಪ್ರವಾಸೋದ್ಯಮ ಜಿಲ್ಲೆಯಾಗಿದೆ. ವಿದೇಶಿಗರು, ಎಲ್ಲರನ್ನೂ ಆಕರ್ಷಿಸುವ ಯಾವುದಾದರೂ ಜಿಲ್ಲೆಯಿದ್ದರೆ ಅದು ಹಾಸನ ಜಿಲ್ಲೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕೈ ಬಿಟ್ಟಿದ್ದಾರೆ. ತೋಟಗಾರಿಕಾ ಕಾಲೇಜು ನೀಡಿಲ್ಲ. ಈ ಜಿಲ್ಲೆಯನ್ನು ತಾತ್ಸರ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ರೇವಣ್ಣ ವಾಗ್ದಾಳಿ ಮಾಡಿದ್ದಾರೆ.

ಇದು ದೇವೇಗೌಡರ ಜಿಲ್ಲೆ, ಇಲ್ಲಿ ಕಾಂಗ್ರೆಸ್‌ಗೆ ಅನುಕೂಲ ಆಗಲ್ಲ ಅಂತ ನಮ್ಮ ಜಿಲ್ಲೆಯನ್ನು ಕಡೆಗಣಿಸಿದ್ದಾರೆ. ಶಾಲೆಗಳಿಗೆ ಮೂಲಭೂತ ಸೌಕರ್ಯ ಇಲ್ಲ. ಶಿಕ್ಷಕರ ಖಾಯಂ ನೇಮಕಾತಿ ಇಲ್ಲ. ಕಾಫಿ ತಿಂಡಿ ತರಲು ದುಡ್ಡು ಕೊಡುತ್ತಿಲ್ಲ, ಅಂತಹ ಪರಿಸ್ಥಿತಿ ಇದೆ. ನಾವು ಏನೋ ನಿರೀಕ್ಷೆ ಮಾಡಿದ್ದು. ಶಿಕ್ಷಣಕ್ಕೆ ಒತ್ತು ಕೊಡ್ತಾರೆ, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಪಾರ್ಕ್‌ಗಳ ಅಭಿವೃದ್ಧಿಗೆ ದುಡ್ಡು ಕೊಟ್ಟಿಲ್ಲ.

ಐದು ಗ್ಯಾರೆಂಟಿಗಾಗಿ ರಾಜ್ಯದ ಜನರ ತೆರಿಗೆಯನ್ನು ಹೆಚ್ಚಿಸಿದ್ದಾರೆ. ರೈತರಿಗೆ ಮೂರುಕಾಸಿನ ಯಾವುದೇ ಕೊಡುಗೆ ಇಲ್ಲ. ಇದು ಜೆಡಿಎಸ್ ಜಿಲ್ಲೆ, ಅಲ್ಲಿಗೆ ಕೊಟ್ಟರೆ ಏನು ಪ್ರಯೋಜನ ಇಲ್ಲಾ ಅಂತ ಏನು ಕೊಟ್ಟಿಲ್ಲ. ರೈತರ ಬಗ್ಗೆ, ಬಡವರ ಬಗ್ಗೆ ಕಾಳಜಿ ಇಲ್ಲ ಎಂದು ಹೆಚ್.ಡಿ.ರೇವಣ್ಣ ಸಿಎಂ ಮಂಡಿಸಿದ ಬಜೆಟ್ ವಿರುದ್ಧ ಹರಿಹಾಯ್ದಿದ್ದಾರೆ.

ನಾವು ಮಾಡಿರುವ ಕೆಲಸ, ನಾವು ತಂದಿರುವ ಯೋಜನೆಗಳು ನಮ್ಮ ಕೈ ಹಿಡಿಯುತ್ತೆ: ಪ್ರಜ್ವಲ್ ರೇವಣ್ಣ

ಸಿದ್ದರಾಮಯ್ಯ ಕನ್ನಡಿಗರ ಕಿವಿಗೆ ಹೂವಿಟ್ಟಿದ್ದಾರೆ. ಇದು ನಾಳೆ ಬಾ ಸರ್ಕಾರದ ಬಜೆಟ್: ಹೆಚ್.ಡಿ.ಕುಮಾರಸ್ವಾಮಿ

ಬಜೆಟ್ ಮಂಡನೆ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಅಭಿನಂದನೆ ತಿಳಿಸಿದ ಬಿಜೆಪಿ ನಾಯಕ ಸೋಮಶೇಖರ್

- Advertisement -

Latest Posts

Don't Miss