Political News: ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಸಂಯೋಜಕರಾಗಿ ನೇಮಕ ಹಿನ್ನೆಲೆ, ಸಂಯೋಜಕರಾದ ಬಳಿಕ ಸಚಿವ ಸಂತೋಷ ಲಾಡ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಧಾರವಾಡ ಕ್ಷೇತ್ರದ ಸಂಯೋಜಕ ಜವಾಬ್ದಾರಿ ಕೊಟ್ಟಿದ್ದಾರೆ. ಕಾರ್ಯಕರ್ತರನ್ನು ಸಂಘಟಿಸುವ ಕೆಲಸ ಮಾಡುತ್ತೇವೆ. ನಮ್ಮ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಿಳಿ ಸುತ್ತೇವೆ. ಮನೆ ಮನೆಗೆ ಹೋಗಿ ನಮ್ಮ ಕಾರ್ಯಕ್ರಮಗಳ ಬಗ್ಗೆ ಹೇಳುತ್ತೇವೆ. 2013-2018ರ ಅವಧಿಯ ಕಾರ್ಯಗಳು, ಕೇಂದ್ರದ ಅವಧಿಯ ಕಾರ್ಯಗಳನ್ನು ತಿಳಿಸುತ್ತೇವೆ. ಕಳೆದ ಹತ್ತು ವರ್ಷದಲ್ಲಿ ಮೋದಿ ಹೇಳಿದ ಸುಳ್ಳುಗಳನ್ನು ಮನೆ ಮನೆಗೆ ಮುಟ್ಟಿಸುತ್ತೇವೆ ಎಂದಿದ್ದಾರೆ.
ಟಿಕೆಟ್ ಫೈನಲ್‌ನಲ್ಲಿ ಸಂಯೋಜಕರ ಪಾತ್ರ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಲಾಡ್, ಎಲ್ಲ ಮುಖಂಡರ, ಬ್ಲಾಕ್ ಮತ್ತು ತಾಲೂಕು ಮುಖಂಡರ ಅಭಿಪ್ರಾಯ ಹೈಕಮಾಂಡಗೆ ಮುಟ್ಟಿಸುತ್ತೇವೆ. ಸರ್ವೆ ಕೂಡ ನಡೆಯಲಿದೆ. ಆ ಬಳಿಕ ಯಾರಿಗೆ ಟಿಕೆಟ್ ಅಂತಾ ಕೈ ಕಮಾಂಡ್ ನಿರ್ಣಯ ಮಾಡುತ್ತದೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಹ್ಲಾದ ಜೋಶಿ ಲೇವಡಿ ವಿಚಾರದ ಬಗ್ಗೆ ಲಾಡ್ ಪ್ರತಿಕ್ರಿಯಿಸಿದ್ದು, ಕೇಂದ್ರ ಸಚಿವ ಜೋಶಿ ವಿರುದ್ಧ ಇಂದಿನಿಂದ ಪ್ರತಿಭಟನೆಗಳು ನಡೆಯಲಿವೆ. ಇವತ್ತು ಧಾರವಾಡ ಜಿಲ್ಲಾಮಟ್ಟದಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ಧಾರವಾಡ ಕ್ಷೇತ್ರ ಬುದ್ಧಿಜೀವಿಗಳ, ಪ್ರಗತಿಪರರ ಕ್ಷೇತ್ರ. ಇಂತಹ ಕ್ಷೇತ್ರವನ್ನು ಪ್ರಹ್ಲಾದ ಜೋಶಿ ಪ್ರತಿನಿಧಿಸುತ್ತಾರೆ. ಜೋಶಿಯವರ ಬಗ್ಗೆ ನನಗೆ ವೈಯಕ್ತಿಕವಾಗಿ ಗೌರವವಿದೆ. ಆದರೆ ಅವರು ಸಿದ್ದರಾಮಯ್ಯ ಆಡಳಿತ ಐಸಿಸ್‌ಗೆ ಹೋಲಿಸಿದ್ದಾರೆ. ಇದು ಧಾರವಾಡ ಜನತೆಗೆ ಅಗೌರವ ತೋರಿದಂತೆ. ಕರ್ನಾಟಕ ಜನತೆಗೂ ಅಗೌರವ ತೋರಿದಂತೆ. ಮಾತನಾಡಬೇಕು ಅಂತಾ ಮಾತನಾಡುವುದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಮಾಡಬಹುದು. ನೀವು ಟೀಕೆ ಮಾಡಿ. ಆದರೆ ತಾಲಿಬಾನ್, ಅಪಘಾನಿಸ್ತಾನಕ್ಕೆ ಹೋಲಿಕೆ ಮಾಡ್ತಿರಾ. ಇದೇನಿದು? ಇದು ಜೋಶಿ ಘನತೆ, ಗೌರವಕ್ಕೆ ತಕ್ಕುದ್ದಲ್ಲ. ಅವರು ತಮ್ಮ ಮಾತು ವಾಪಸ್ ಪಡೆಯಬೇಕು ಎಂದು ಸಂತೋಷ್ ಲಾಡ್ ಆಗ್ರಹಿಸಿದ್ದಾರೆ.
ನನಗೆ ಆರ್ಸಿಬಿ ಪರ ಆಡಲು ಇಷ್ಟವಿಲ್ಲದಿದ್ದರೂ ಬ್ಲಾಕ್ಮೇಲ್ ಮಾಡಿ ಆಡಿಸಿದರು: ಪ್ರವೀಣ್ ಕುಮಾರ್
ಲೋಕಸಭಾ ಚುನಾವಣೆ ಸಲುವಾಗಿ ಬಿಜೆಪಿ ರಾಮಮಂದಿರ ಗಿಮಿಕ್: ಮಮತಾ ಬ್ಯಾನರ್ಜಿ