Friday, October 17, 2025

Latest Posts

ಮಾಜಿ ಸಿಎಂ ಸದಾನಂದ ಗೌಡ ರಾಜಕೀಯ ನಿವೃತ್ತಿಗೆ ಮುಖ್ಯ ಕಾರಣವೇ ಇದು: BSY ಸ್ಪಷ್ಟನೆ

- Advertisement -

Political News: ಮಾಜಿ ಸಿಎಂ ಸದಾನಂದಗೌಡರು ಮೊನ್ನೆ ತಾನೇ ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ, ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ಜೊತೆಗೆ ತಾವು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಿದ್ದೇನೆ ಎಂದು ಕೂಡ ಹೇಳಿದರು. ಈ ಬಗ್ಗೆ ಹಲವರು ಹಲವು ರೀತಿ ಸುದ್ದಿ ಬಿತ್ತರಿಸಿದರು. ಹಾಗಾಗಿ ಈ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿ, ಸದಾನಂದಗ ಗೌಡರ ರಾಜಕೀಯ ನಿವೃತ್ತಿಗೆ ಕಾರಣವೇನೆಂದು ಸ್ಪಷ್ಟನೆ ನೀಡಿದ್ದಾರೆ.

ಹಲವರು ಸದಾನಂದಗೌಡರ ರಾಜಕೀಯ ನಿವೃತ್ತಿಯ ಬಗ್ಗೆ ತಪ್ಪು ತಿಳಿದು, ತಪ್ಪು ತಪ್ಪಾಗಿ ಸುದ್ದಿ ಬಿತ್ತರಿಸಿದ್ದಾರೆ. ಆದರೆ ಅವರ ನಿವೃತ್ತಿಗೆ ಕಾರಣವೇ ಬೇರೆ ಎಂದು ಈ ರೀತಿಯಾಗಿ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಡುವ‌ ಮೂಲಕ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ‌ ನಾನೂ ಸೇರಿದಂತೆ, ಹಿರಿಯ ನಾಯಕರಾದ ಸದಾನಂದಗೌಡರು, ಎಲ್ಲರೂ ಒಟ್ಟಾಗಿ ದುಡಿಯುತ್ತಿದ್ದೇವೆ. ಯುವಕರು ರಾಜಕೀಯದಲ್ಲಿ ಮುಂದೆ ಬರಬೇಕೆಂದು ಅವರು ಚುನಾವಣಾ ರಾಜಕೀಯದಿಂದ ನಿವೃತ್ತರಾಗಿದ್ದಾರೆಯೆ ವಿನಃ ಅವರಿಗೆ ಯಾರೂ ಒತ್ತಡ ಹೇರಿಲ್ಲ.

ಇಂದು ನಾನು‌ ಹೇಳಿರುವ ಹೇಳಿಕೆಯನ್ನು‌ ಕೆಲ ಮಾಧ್ಯಮಗಳಲ್ಲಿ ತಪ್ಪಾಗಿ ಅರ್ಥೈಸಲಾಗಿದೆ. ಅವರು ನಿವೃತ್ತಿ ಘೋಷಿಸಿದರೂ ಸಕ್ರಿಯ ರಾಜಕಾರಣದಲ್ಲಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ 25ಕ್ಕೂ ಅಧಿಕ ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಶ್ರಮಿಸಲಿದ್ದಾರೆ. ಜನರ ಆಶಯದಂತೆ, ಶ್ರೀ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವ ನಿಟ್ಟಿನಲ್ಲಿ, ಪಕ್ಷ ಸಂಘಟನೆಯ ಕಾರ್ಯದಲ್ಲಿ ನಾವೆಲ್ಲರೂ ಒಂದಾಗಿ ಮುನ್ನಡೆಯುತ್ತಿದ್ದೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಹಾಸನಾಂಬೆ ದರ್ಶನದ ವೇಳೆ ಅವಘಡ: ಆಸ್ಪತ್ರೆಗೆ ಬಂದು, ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಚಿವ ಗುಂಡೂರಾವ್..

‘ಪ್ರಚಾರದ ಕಾರಣಕ್ಕಾಗಿ ಬರ ಅಧ್ಯಯನ ಮಾಡುವುದರಿಂದ ಬಂದ ಭಾಗ್ಯವೇನು?’

‘ನಿನ್ನೆಯೇ ಹಲವರಿಗೆ ಶಾಕ್ ಹೊಡೆದಿದೆ, ವಿಷಯ ತಿಳಿದರೂ ಅಧಿಕಾರಿಗಳು ಸ್ಥಳಕ್ಕೆ ಬರದೇ ನಿರ್ಲಕ್ಷಿಸಿದ್ದಾರೆ’

- Advertisement -

Latest Posts

Don't Miss