Monday, December 16, 2024

Latest Posts

ಗೋಲ್ಡ್ ಸುರೇಶ್ ಹೊರಬರಲು ಇದೇ ಕಾರಣ! ಫ್ಯಾನ್ಸ್‌ಗೆ ಗೊಂದಲ.. ಮತ್ತೆ ಒಳ ಬರ್ತಾರ?

- Advertisement -

Bigg Boss News: ಈ ಬಾರಿಯ ಬಿಗ್ ಬಾಸ್ ಸೀಸನ್ 11 ಸಾಕಷ್ಟು ಕುತೂಹಲ ಕೆರಳಿಸಿದೆ. ಅಷ್ಟೇ ಅಲ್ಲ, ಅಲ್ಲಿರುವ ಸ್ಪರ್ಧಿಗಳ ಬಗ್ಗೆ ಒಂದಷ್ಟು ನಿರೀಕ್ಷೆಯನ್ನೂ ಹುಟ್ಟಿಸಿದೆ. ನಿರೀಕ್ಷೆ ಇಟ್ಟುಕೊಂಡಿದ್ದ ಸ್ಪರ್ಧಿಗಳು ಹೊರ ಬಂದಿದ್ದಾರೆ. ಹಾಗಾಗಿ, ನೋಡುಗರಿಗೆ ಸದ್ಯ ಹೊಸ ಕುತೂಹಲವಂತೂ ಹುಟ್ಟಿರೋದು ಸುಳ್ಳಲ್ಲ. ಅಂದಹಾಗೆ, ಈ ವಾರ ಶಿಶರ್ ಮತ್ತು ಗೋಲ್ಡ್ ಸುರೇಶ್ ಹೊರ ಬಂದಿದ್ದಾರೆ.

ಶಿಶಿರ್ ಎಲಿಮಿನೇಟ್ ಆಗಿದ್ದು ಓಕೆ, ಆದರೆ, ಗೋಲ್ಡ್ ಸುರೇಶ್ ಯಾಕೆ ಎಂಬ ಪ್ರಶ್ನೆ ನೋಡುಗರಲ್ಲಿ ಮತ್ತು ಗೋಲ್ಡ್ ಸುರೇಶ್ ಅವರ ಆಪ್ತರಲ್ಲೂ ಇದು ಕಾಡಿದೆ. ವಿಷಯವೇನೆಂದರೆ, ಗೋಲ್ಡ್ ಸುರೇಶ್ ಅವರ ತಂದೆ ನಿಧನ ಆಗಿದ್ದರಿಂದಲೇ ಸುರೇಶ್ ಹೊರ ಬಂದ್ರು ಎಂಬುದು ಗುಲ್ಲು. ಆದರೆ, ಅಸಲಿ ವಿಷಯ ಹೇಳೋದಾದ್ರೆ, ಸುರೇಶ್ ಅವರ ತಂದೆ ಚೆನ್ನಾಗಿದ್ದಾರೆ. ಸ್ವತಃ ಸುರೇಶ್ ಅವರ ತಂದೆಯೇ ಈ ಕುರಿತು ಕೊಟ್ಟಿರುವ ಸ್ಪಷ್ಟನೆ ವೈರಲ್ ಆಗಿದೆ.

ಇಷ್ಟಕ್ಕೂ ಬಿಗ್ ಬಾಸ್ ಮನೆಯಿಂದ ಸುರೇಶ್ ಹೊರ ಬಂದಿದ್ದು ಯಾಕೆ? ಈ ಪ್ರಶ್ನೆ ಸದ್ಯ ಗಿರಕಿ ಹೊಡೆಯುತ್ತಿದೆ. ಹಾಗೆ ನೋಡಿದರೆ, ಸುರೇಶ್ ಅವರು ಬಿಗ್ ಬಾಸ್ ಮನೆಯಲ್ಲಿ ಪೆಟ್ಟು ತಿಂದಿದ್ದರು. ಅಂದರೆ, ಬಿಗ್ ಬಾಸ್ ನೀಡಿದ್ದ ಟಾಸ್ಕ್ ಆಡುವಾಗ ಪೆಟ್ಟು ಮಾಡಿಕೊಂಡಿದ್ದರು. ಇದರಿಂದ ತೀವ್ರ ಹಿನ್ನಡೆ ಯಾಗಿತ್ತು. ಕೆಲ ವಾರ ಗೋಲ್ಡ್ ಸುರೇಶ್ ಅವರಿಗೆ ಆಡುವುದಕ್ಕೂ ತೊಂದರೆಯಾಗಿತ್ತು. ಇದೆಲ್ಲ ಅಡೆತಡೆಯನ್ನು ಮೀರಿ ಅವರು ಮುಂದೆ ಬಂದಿದ್ದರು. ಆದರೆ, ಈಗ ಅವರು ಬಿಗ್ ಬಾಸ್ ಮನೆಯಿಂದ ಹೊರ ಬರುವ ಪರಿಸ್ಥಿತಿ ಬಂದೊದಗಿದೆ.

ಗೋಲ್ಡ್ ಸುರೇಶ್ ಅವರು ಸದ್ಯ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಅವರು ಈ ವಾರ ಕ್ಯಾಪ್ಟನ್ ಆಗಿದ್ದರು. ಆದರೆ, ಅವರೇ ಕ್ಯಾಪ್ಟನ್ ಆಗಿದ್ದ ವಾರವೇ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಮನೆಯಲ್ಲಿ ನಿಮ್ಮ ಎಮರ್ಜೆನ್ಸಿ ಇರುವುದರಿಂದ ಅವರು ಹೊರ ಹೋಗಬೇಕಾದ ಪರಿಸ್ಥಿತಿ ಬಂದದೊಗಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ, ಗೋಲ್ಡ್ ಸುರೇಶ್ ಅವರ ತಂದೆ ನಿಧನರಾಗಿದ್ದಾರೆ ಅಂತಾನೆ ಸುದ್ದಿಯಾಗಿತ್ತು. ಆ ಕಾರಣಕ್ಕೆ ಅವರನ್ನು ಬಿಗ್ ಬಾಸ್ ಎಮರ್ಜೆನ್ಸಿ ಅಂತ ಹೊರಕಳಿಸಿದೆ ಎಂದೇ ಬಿಂಬಿಸಲಾಗಿತ್ತು. ಆದರೆ, ಅಸಲಿಗೆ ವಿಚಾರ ಅದಲ್ಲ ಎನ್ನಲಾಗಿದೆ. ಏಕೆಂದರೆ, ಗೋಲ್ಡ್ ಸುರೇಶ್ ಅವರ ತಂದೆ ಚೆನ್ನಾಗಿದ್ದಾರೆ. ಸ್ವತಃ ಅವರೇ ಮಾತನಾಡಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಾನು ಚೆನ್ನಾಗಿದ್ದೇನೆ. ಕಾಲು ನೋವಿದೆ ಅಷ್ಟೇ. ನನ್ನ ಮಗ ಚೆನ್ನಾಗಿ ಆಡುತ್ತಿದ್ದಾನೆ. ಉತ್ತರ ಕರ್ನಾಟಕದ ಹೆಸರು ಉಳಿಸುತ್ತಾನೆ ಎಂದಿದ್ದಾರೆ.

ಅದೇನೆ ಇರಲಿ, ‘ಮನೆಯಲ್ಲಿ ತುರ್ತುಪರಿಸ್ಥಿತಿ ನಿರ್ಮಾಣ ಆಗಿರುವುದರಿಂದ ಗೋಲ್ಡ್ ಸುರೇಶ್ ನೀವು ಈ ಕೂಡಲೇ ಹೊರಡಬೇಕು’ ಎಂದು ಬಿಗ್ ಬಾಸ್ ಘೋಷಣೆ ಮಾಡಿದ್ದರಿಂದ ಈ ವೇಳೆ ಗೋಲ್ಡ್ ಸುರೇಶ್ ಅವರು ಆ ಕ್ಷಣವೇ ಕಣ್ಣೀರು ಹಾಕಿದ್ದರು. ತಮ್ಮ ಮನೆಯಲ್ಲಿ ಏನಾಗಿರಬಹುದು ಎಂಬ ಗೊಂದಲ ಅವರಲ್ಲಿತ್ತು. ಆ ಕಾರಣಕ್ಕೆ ಅವರು ಕಣ್ಣೀರಾಗಿದರು. ತಕ್ಷಣವೇ ಅವರು ತಮ್ಮ ಲಗೇಜ್ ಪ್ಯಾಕ್ ಮಾಡಿಕೊಂಡು ಚಿನ್ನ ಹಾಕಿಕೊಂಡೇ ದೊಡ್ಮನೆಯಿಂದ ಹೊರ ಬಂದರು. ಸದ್ಯ, ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ವದಂತಿ ಹಬ್ಬಿದ್ದು ನಿಜ. ಗೋಲ್ಡ್ ಸುರೇಶ್ ಅವರ ತಂದೆ ಇಲ್ಲ ಎಂಬ ಸುದ್ದಿ ಸದ್ಯಕ್ಕೆ ದೂರವಾದ ಮಾತು. ಅವರ ತಂದೆ ಚೆನ್ನಾಗಿಯೇ ಇದ್ದಾರೆ. ಆದರೂ, ಸುರೇಶ್ ಹೊರಬಂದಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಸುರೇಶ್ ಗೆ ತಾನು ಚೆನ್ನಾಗಿ ಆಡಿ, ಕೊನೆಯವರೆಗೂ ಉಳಿಯಬೇಕು ಎಂಬ ಆಸೆ ಇತ್ತು.

ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಶೈಲಿಯಲ್ಲಿ ಆಟ ಆಡುತ್ತಿದ್ದ ಸುರೇಶ್, ಮೈಂಡ್ ಮೂಲಕ ಸೇಫ್ ಗೇಮ್ ಆಡುತ್ತಿದ್ದರು. ಆದರೆ, ಅವರನ್ನು ಬಿಗ್ ಬಾಸ್ ಹೊರ ಕಳಿಸಿದೆ. ಆದರೆ, ಶಿಶಿರ್ ಎಲಿಮಿನೇಟ್ ಆಗಿದ್ದಾರೆ. ಸುರೇಶ್ ಸೇಫ್ ಇದ್ದರು. ಆದಾಗ್ಯೂ ತುರ್ತು ಪರಿಸ್ಥಿತಿ ಎಂಬ ಮಾತು ಹೇಳಿ ಬಿಗ್ ಬಾಸ್ ಹೊರ ಕಳಿಸಿದೆ. ಒಂದು ವೇಳೆ ಗೋಲ್ಡ್ ಸುರೇಶ್ ಅವರನ್ನು ಪುನಃ ಬಿಗ್ ಬಾಸ್ ಮನೆಗೆ ಕರೆತರುತ್ತಾ? ಎಂಬ ಪ್ರಶ್ನೆ ಕೂಡ ಕೆಲವರಲ್ಲಿದೆ. ನಿಜಕ್ಕೂ ಅವರು ಎಲಿಮೇನಟ್ ಆಗಿದ್ದಾರಾ ಎಂಬ ಇನ್ನೊಂದು ಪ್ರಶ್ನೆಯೂ ಎದ್ದಿದೆ. ಅದೇನೆ ಇದ್ದರೂ, ಬಿಗ್ ಬಾಸ್ ನಿಯಮವೇ ಅಂತಿಮ. ಮತ್ತೇನಾದರೂ ಸುರೇಶ್ ಒಳ ಬಂದರೆ, ಕೊನೆಯವರೆಗೂ ನಿಂತು ಆಡುತ್ತಾರೆ ಎಂಬ ಲೆಕ್ಕಾಚಾರ ಈಗ ಶುರುವಾಗಿರುವುದಂತೂ ಸುಳ್ಳಲ್ಲ.

- Advertisement -

Latest Posts

Don't Miss